ಸ್ಥಳೀಯ ಸುದ್ದಿ

ಹೂವಿನಹಡಗಲಿ‌ ಉಪಕಾರಾಗೃಹದಲ್ಲಿ ಬಸವಣ್ಣ ಜಯಂತಿ‌ ಆಚರಣೆ

ಹೊಸಪೇಟೆ

ಹೊಸ ಜಿಲ್ಲೆ ಹೊಸಪೇಟೆಯ ಹೂವಿನಹಡಗಲಿ ಉಪಕಾರಾಗೃಹದಲ್ಲಿ ಇಂದು‌ ಜಗಜ್ಯೋತಿ ಶ್ರೀ‌ಬಸವೇಶ್ವರ ಜಯಂತಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಡಗಲಿಯ ಗೃಹ ರಕ್ಷಕದಳದ ಕಮಾಡೆಂಟ್ ಶ್ರೀ ಕೆ. ರಾಜಪೀರ ಭಾವಹಿಸಿ, ಕಾಯಕವೇ ಕೈಲಾಸ ಎಂದು ನಂಬಿದ್ದ ಬಸವಣ್ಣನವರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾರಾಗೃಹದ ಅಧೀಕ್ಷಕರಾದ ಶ್ರೀ ಶರಣಬಸವ ಅವರು ಮಾತನಾಡಿ, ಬಸವಣ್ಣನವರು ಕಲ್ಯಾಣದಲ್ಲಿ ಕ್ರಾಂತಿ ಮಾಡುವ ಮೂಲಕ ತಮ್ಮ ತತ್ವಗಳನ್ನು ಸಮಾಜಕ್ಕೆ ಸಾರಿದವರು. ಇಂತಹವರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಹೋಗಿ‌ ಮುನ್ನಡೆಯಬೇಕೆಂದರು.

ಈ ಸಂದರ್ಭದಲ್ಲಿ ಕಾರಾಗೃಹದ ಸಿಬ್ಬಂದಿ, ಗೃಹರಕ್ಷಕದಳದ ಸಿಬ್ಬಂದಿ ಹಾಗೂ ಬಂಧಿನಿವಾಸಿಗಳು ಹಾಜರಿದ್ದರು.

ಇದೇ ಸಮಯದಲ್ಲಿ ಕಾರಾಗೃಹದ ಸಿಬ್ಬಂದಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದ್ರು.

Related Articles

Leave a Reply

Your email address will not be published. Required fields are marked *

Back to top button