ಹೊಸ ಯುವತಿ ಜೊತೆ ಓಡಾಟ ಯುವಕನಿಗೆ ಆಂಟಿಯಿಂದ ಚಾಕು ಇರಿತ


ಸಾಂದರ್ಭಿಕ ಚಿತ್ರ
ಬೆಂಗಳೂರು: ಮಹಿಳೆಯೋರ್ವಳು ಪ್ರಿಯಕರನಿಗೆ ಚಾಕು ಇರಿದ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ. ಜೋಗಿಶ್ ಚಾಕು ಇರಿತಕ್ಕೊಳಗಾದ ವ್ಯಕ್ತಿ. ವೃತ್ತಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ಜೋಗಿಶ್, ಡೇ ಕೇರ್ನಲ್ಲಿ ಕೆಲಸ ಮಾಡುತಿದ್ದ ಜುಂಟಿದಾಸ್ ಎಂಬ ಮಹಿಳೆ ಜೊತೆ ಎರಡು ವರ್ಷದಿಂದ ಪ್ರೀತಿಯಲ್ಲಿದ್ದನು.
ಜುಂಟಿ ದಾಸ್ ಕೂಡ ಈ ಹಿಂದೆ ಬೇರೊಂದು ಮದುವೆಯಾಗಿ, ಗಂಡನಿಗೆ ವಿಚ್ಛೇಧನ ನೀಡಿ, ತನ್ನ 18 ವರ್ಷದ ಮಗಳೊಂದಿಗೆ ಜಿಗಿಣಿಯಲ್ಲಿ ವಾಸ ಮಾಡುತ್ತಿದ್ದಳು. ಈ ಮಧ್ಯೆ ಜೋಗಿಶ್ ಜೊತೆ ಪ್ರೀತಿಯಲ್ಲಿದ್ದಾಗ ಹಲವು ಕಡೆ ಸುತ್ತಾಡಿದ್ದ ಇವರಿಬ್ಬರು, ಮಹಿಳೆಯಿಂದ ಒಂದಿಷ್ಟು ಹಣ ಸಹ ಪಡೆದಿದ್ದ ಜೋಗೀಶ್.ಇತ್ತೀಚಿಗೆ ಹೊಸ
ಯುವತಿ ಜೊತೆ ಓಡಾಟ ಶುರು ಮಾಡಿದ್ದ ಜೋಗಿಶ್
ಇಷ್ಟೇ ಆಗಿದ್ದರೆ ಎಲ್ಲವೂ ಸರಿಯಾಗಿಯೇ ಇರುತ್ತಿತ್ತು. ಆದರೆ, ಜೋಗಿಶ್ ಇತ್ತೀಚಿಗೆ ಹೊಸ ಯುವತಿ ಜೊತೆ ಓಡಾಟ ಶುರು ಮಾಡಿದ್ದ. ಈ ವಿಚಾರ ತಿಳಿದ ಆರೋಪಿ ಮಹಿಳೆ ವಿವೇಕನಗರದ ಜೋಗಿಶ್ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ.
ಈ ವೇಳೆ ಜಗಳ ಅತಿರೇಕಕ್ಕೆ ಹೋಗಿ ಮಹಿಳೆ ಚಾಕುವಿನಿಂದ ಆತನ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾಳೆ. ಹೌದು ಅಸ್ಸಾಂಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿ ಮಹಿಳೆ, ವಿಲ್ಸನ್ ಗಾರ್ಡ್ನಲ್ಲಿರುವ ಆಕೆಯ ಸಂಬಂಧಿಕರ ಮನೆಯಲ್ಲಿದ್ದಳು. ಈ ವೇಳೆ ಪೊಲೀಸರು ಆಕೆಯನ್ನ ಬಂಧಿಸಿದ್ದಾರೆ.
ಸದ್ಯ ಗಾಯಾಳು ಜೋಗೀಶ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
