ಹೋಳಿ ಕುಟುಂಬದಲ್ಲಿ ಮತ್ತೊಬ್ಬ ಕುಸ್ತಿ ಫೈಲ್ವಾನ್ ಎಂಟ್ರಿ
ಬೆಂಗಳೂರು
ಧಾಧಾರವಾಡದ ಜಿಲ್ಲೆಯಲ್ಲಿ ಕುಸ್ತಿಯಲ್ಲಿ ಹೋಳಿ ಕುಟುಂಬದ ಹೆಸರು ಮುಂಚೂಣಿಯಲ್ಲಿದೆ.
ಕುಸ್ತಿ ಎಂದ್ರೆ ಅದು ಹೋಳಿ ಕುಟುಂಬ ಎನ್ನುವ ಮಾತು ಇದೀಗ ಧಾರವಾಡ ಜಿಲ್ಲೆಯಷ್ಟೇ ಅಲ್ಲದೇ ಉತ್ತರ ಕರ್ನಾಟಕದ ತುಂಬೆಲ್ಲಾ ಜಗಜ್ಜಾಹೀರಾಗಿದೆ. ಇಂತಹ ಮನೆತನದಲ್ಲಿ ಇದೀಗ ಮತ್ತೊಬ್ಬ ಮರಿ ಫೈಲ್ವಾನ್ ಎಂಟ್ರಿಯಾಗಿದೆ. ಅವರೇ ಖ್ವಾಜಾ ಮೈನು ಮಾಳಗಿ.
ರಾಂಚಿಯಲ್ಲಿ ನಡೆದ ಸಬ್ ಜ್ಯೂನಿಯರ್ ಅಂಡರ್ 15 ರಾಷ್ಟ್ರ ಮಟ್ಟದ ಕುಸ್ತಿಯಲ್ಲಿ ಧಾರವಾಡ ಕಿರಿಯ ಫೈಲ್ವಾನ್ ಖಾಜಾ ಮೈನು ಮಾಳಗಿ 52 kg ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಧಾರವಾಡಕ್ಕೆ ಕೀರ್ತಿ ತಂದಿದ್ದಾನೆ.
ಈತ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಈ ಸಾಧನೆ ಮಾಡಿದ್ದಕ್ಕೆ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇವರಿಗೆ ದಾವಣಗೇರಿ ಕ್ರೀಡಾ ನಿಲಯದ ಕೋಚ್ ವಿನೋದ ಹಾಗೂ ಶಿವಾನಂದ ಅವರು ತರಬೇತಿ ಕೊಟ್ಟಿದ್ದು,ಇವರ ಸಾಧನೆಗೆ ಕಾರಣವಾಗಿದೆ.
ಸಾಧನೆ ಮಾಡಿರುವ ಈ ಬಾಲಕ ಬೇರೆ ಯಾರೂ ಅಲ್ಲಾ, ಅಂತರಾಷ್ಟ್ರೀಯ ಕುಸ್ತಿ ಪಟು ರಫೀಕ ಹೋಳಿ ಹಾಗೂ ರಕ್ಷಣಾ ವೇದಿಕೆ ರಾಜ್ಯ ರೈತ ಘಟಕದ ಕಾರ್ಯದರ್ಶಿ ರಹಿಮಾನ್ ಹೋಳಿ ಅವರ ಅಳಿಯನಾಗಿದ್ದಾನೆ.