ಸ್ಥಳೀಯ ಸುದ್ದಿ

13 ತಿಂಗಳ ಆಡಳಿತದಲ್ಲಿ ಜನಸೇವಕನಾಗಿ ಅವಳಿನಗರದ ಅಭಿವೃದ್ಧಿ ‌ಮಾಡಿರುವ ತೃಪ್ತಿ‌ ಇದೆ ಎಂದ ಮಾಜಿ ಮೇಯರ್ ಅಂಚಟಗೇರಿ

ಧಾರವಾಡ

ಸ್ಮಾರ್ಟ‌ಸಿಟಿ ಯೋಜನೆ ಮೂಲಕ ಅವಳಿನಗರದಲ್ಲಿ ಅಭಿವೃದ್ಧಿಗೆ ಹೊಸ ಆಯಾಮದ ವೇಗ ಕೊಟ್ಟ ಅಭಿವೃದ್ಧಿ ಚಿಂತಕ‌ ಮಾಜಿ ಮೇಯರ್ ಅಂಚಟಗೇರಿ ಹೊಸದಾಗಿ ಆಯ್ಕೆಯಾದ ಮೇಯರ್ ಹಾಗೂ ಉಪಮೇಯರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾನ್ಯರೆ,

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರನಾಗಿ ಹದಿಮೂರು ತಿಂಗಳು ಆಡಳಿತ ನಡೆಸಲು ಸಹಕಾರ ಮಾರ್ಗದರ್ಶನ ನೀಡಿದ ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಶ್ರೀ ಪ್ರಲ್ಹಾದ ಜೋಶಿ ಜಿಲ್ಲಾಧ್ಯಕ್ಷರು ಶ್ರೀ ಸಂಜಯ ಕಪಟಕರ ಉಪಮಹಾಪೌರರು ಶ್ರೀಮತಿ ಉಮಾ ಮುಕ್ಕುಂದ ಬಿಜೆಪಿ ಹಿರಿಯ ಮುಖಂಡರು ಮಹಾನಗರ ಪಾಲಿಕೆ ಸದಸ್ಯರು ಸಿಬ್ಬಂದಿ ಹಾಗು ಅವಳಿನಗರದ ಜನತೆಗೆ ಶಿರಬಾಗಿ ನಮನಗಳನ್ನು ಸಲ್ಲಿಸುವೆ.

ಕಳೆದ ಅವಧಿಯಲ್ಲಿ ಪಕ್ಷಾತೀತವಾಗಿ ಜನರ ಸೇವೆಗೈದ ತೃಪ್ತಿ ಇದೆ ಹಾಗೂ ಮುಂಬರುವ ದಿನಮಾನಗಳಲ್ಲಿ ಜನಸೇವೆಗೈಯಲು ಕಟಿಬದ್ಧನಾಗಿರುತ್ತೇನೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಮಾದರಿ ನಗರವಾಗಲು ಶ್ರಮಿಸುತ್ತೇನೆ.
ಮತ್ತೊಮ್ಮೆ ಎಲ್ಲ ಹಿತೈಷಿಗಳಿಗೆ ನಮನಗಳನ್ನು ಸಲ್ಲಿಸುತ್ತ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಪ್ರಸ್ತುತ ನೂತನ ಮಹಾಪೌರರಾದ ಆತ್ಮೀಯ ಸಹೋದರಿ ಶ್ರೀಮತಿ ವೀಣಾ ಬರದ್ವಾಡ ರವರು ಹಾಗೂ ಉಪ ಮಹಾಪೌರರಾದ ಆತ್ಮೀಯ ಸ್ನೇಹಿತರಾದ ಶ್ರೀ ಸತೀಶ ಹಾನಗಲ್ ರವರಿಗೂ ಸಹ ಮುಂಬರುವ ದಿನಗಳಲ್ಲಿ ಅವಳಿನಗರದ ಶ್ರೇಯೋಭಿವೃದ್ಧಿಗಾಗಿ ಸಹಕಾರ ನೀಡುತ್ತೇನೆ.

ಇಂತಿ‌ ತಮ್ಮ ಸೇವಕ
ಈರೇಶ ಅಂಚಟಗೇರಿ
ಮಾಜಿ ಮಹಾಪೌರರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

Related Articles

Leave a Reply

Your email address will not be published. Required fields are marked *

Back to top button