ಸ್ಥಳೀಯ ಸುದ್ದಿ

3.5ಕೋಟಿ ವೆಚ್ಚದಲ್ಲಿ ಇಂಗು ಕೆರೆ ನಿರ್ಮಾಣಕ್ಕೆ ಶಾಸಕ ಅಮೃತ ದೇಸಾಯಿ ‌ಚಾಲನೆ

ಧಾರವಾಡ

ಧಾರವಾಡ ತಾಲೂಕಿನ ಉಪ್ಪಿನ ಬೇಟಗೇರಿ ಗ್ರಾಮದಲ್ಲಿ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಅಂದಾಜು 3 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿರಕ್ತಮಠ ಹತ್ತಿರ ಲದ್ದಿಗಟ್ಟಿ ಹಳ್ಳಕ್ಕೆ
ಇಂಗು ಕೆರೆ ನಿರ್ಮಾಣ ಹಾಗೂ ಶಹಾಪೂರಮಠ ರಸ್ತೆ ಚಿಕ್ಕ ಹಳ್ಳಕ್ಕೆ ಬಿಸಿಬಿ (Bridge Cum Barrage)
ನಿರ್ಮಾಣ ಕಾಮಗಾರಿಗೆ ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕ ಅಮೃತ ದೇಸಾಯಿ, ಉಪ್ಪಿನ ಬೆಟಗೇರಿ ಗ್ರಾಮದ ಶ್ರೀಗಳು ಹಾಗೂ ಹಿರಿಯರ ಬೇಡಿಕೆಯಂತೆ ಇಂಗು ಕೆರೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಗ್ರಾಮದ ಸಮಗ್ರ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಅವುಗಳನ್ನು ಪ್ರತಿ ಗ್ರಾಮಕ್ಕೂ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಈಗಾಗಲೇ ಧಾರವಾಡ ಗ್ರಾಮೀಣ ಕ್ಷೇತ್ರದ ಎಲ್ಲ ಪ್ರಮುಖ ರಸ್ತೆಗಳ ಸುಧಾರಣೆ, ಕುಡಿಯುವ ನೀರು ಸರಬರಾಜು, ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.
ಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಅದಕ್ಕೂ ಮುನ್ನ ಅಂದಾಜು 2 ಕೋಟಿ ವೆಚ್ಚದಲ್ಲಿ ಗ್ರಾಮದ ಶಹಾಪೂರಮಠ ರಸ್ತೆ ಚಿಕ್ಕ ಹಳ್ಳಕ್ಕೆ ಬಿ.ಸಿ.ಬಿ (Bridge Cum Barrage) ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಉಪ್ಪಿನ ಬೇಟಗೇರಿ ಗ್ರಾಮದ ವಿರಕ್ತಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು ಹಾಗೂ ಕರ್ನಾಟಕ ಬಯಲು ಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿಯ‌ ಅಧ್ಯಕ್ಷರಾದ ಶ್ರೀ ತವನಪ್ಪ ಅಷ್ಟಗಿ, ಕಸ್ತೂರಿ ತವನಪ್ಪ ಅಷ್ಟಗಿ, ಗ್ರಾಮದ ಹಿರಿಯರಾದ ಸಿ.ಬಿ ಮಸೂತಿ ಅಧ್ಯಕ್ಷ ತೆ ವಹಿಸಿದ್ದಾರು. ರಾಮಲಿಂಗಪ್ಪ ನವಲಗುಂದ, ಕಸ್ತೂರಿ ಅಷ್ಟಗಿ, ಬಾಬಾ ಮೋಹಿದ್ದೀನ ಚೌಧರಿ, ಕೆ.ಸಿ ಪುಡಕಲಕಟ್ಟಿ, ಸಂತೋಷಗೌಡ ಪಾಟೀಲ, ಬಸವರಾಜ ಹೊಸೂರ, ಧರೆಪ್ಪ ಬೊಬ್ಬಿ, ಮಹಾವೀರ ಅಷ್ಟಗಿ, ಮಹೇಶ ಯಲಿಗಾರ, ಸೇರಿದಂತೆ ಗ್ರಾಮಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *