ಸ್ಥಳೀಯ ಸುದ್ದಿ

3 Shayaane Comedy Film ಮೇ 27 ಕ್ಕೆ ರಿಲೀಸ್

ಧಾರವಾಡ

ಇದೇ ಮೇ ೨೭ ರಂದು ತೆರೆಕಾಣಲಿದೆ ಬೆಳಗಾವಿಯ ಸಂಜಯ್ ಸುಂಠಕರ್ ನಿರ್ದೇಶನದ “ತೀನ್ ಶ್ಯಾನೆೆ” ಚಲನಚಿತ್ರ.
ಹೌದುಬಾಲಿವುಡ್‌ ಚಿತ್ರರಂಗದಲ್ಲಿ ಬೆಳಗಾವಿಯ ಸಂಜಯ್ ಸುಂಠಕರ್ ನಿರ್ಮಾಪಕರಾಗಿ ಬಿಗ್ ಬಜೆಟ್‌ನಲ್ಲಿ ನಿರ್ಮಿಸಿದ ಚಲನಚಿತ್ರ “ತೀನ್ ಶ್ಯಾನೆ” ಇದೇ ಮೇ ೨೭ ರಂದು ದೇಶಾದ್ಯಂತ ತೆರೆಕಾಣಲಿದೆ.

ಚಿತ್ರದ ಟೀಸರ್

ಚಿತ್ರದ ಕಥಾ ಲೇಖಕರರು ಮತ್ತು ನಿರ್ದೇಶಕರಾದ ಅನೀಸ್ ಅವರು ಸಾಮಾಜೀಕ ಸಂದೇಶ ನೀಡುವ ಕಥೆಯನ್ನು ಬರೆದಿದ್ದು, ಬದುಕಿನಲ್ಲಿ ರಾತ್ರೋರಾತ್ರಿ ಶ್ರೀಮಂತರಾಗಲು ಯುವಪೀಳಿಗೆ ಶಾರ್ಟ್ಕಟ್‌ಗಳನ್ನು ಹುಡುಕಬಾರದು ಕಠಿಣ ಶ್ರಮವನ್ನು ವಹಿಸಿದರೇ ಮಾತ್ರ ಯಶಸ್ಸಿನ ಶಿಖರವನ್ನೇರಬಹುದೆಂಬ ಸಂದೇಶವನ್ನು ನೀಡಿದ್ದಾರೆ.

ಕೋರೊನಾ ಕಾಲದಲ್ಲಿ ತಮ್ಮ ಎಸ್‌ಎಸ್ ಫೌಂಡೇಶನ್‌ನ ಮೂಲಕ ಬಡವರಿಗೆ, ವಿಧವೆಯರಿಗೆ ಮತ್ತು ಅನಾಥರಿಗೆ ನಿರ್ಮಾಪಕ ಸಂಜಯ್ ಸುಂಠಕರ ಸಹಾಯ ಮಾಡಿದ್ದಾರೆ.
ಈಗ ಮತ್ತೊಂದು ಉಪಕ್ರಮಕ್ಕೆ ಅವರು ಮುಂದಾಗಿದ್ದಾರೆ. ಇವರು ಪ್ರಥಮಬಾರಿಗೆ ನಿರ್ಮಿಸಿದ ಈ ಚಲನಚಿತ್ರದಲ್ಲಿ ೫ ಗೀತೆಗಳಿವೆ.
ಸಂಭಲ ಜಾ ಸಾಂಗ್‌ನಲ್ಲಿ ಮರಾಠಿ ಬಿಗ್‌ಬಾಸ್ ವಿನ್ನರ್ ಹೀನಾ ಪಾಂಚಾಲ್ ಅವರು ನಟಿಸಿದ್ದು, ಇವರ ನಟನೆ ಬಾಲಿವುಡ್‌ನ ಮಲಾಯಿಕಾ ಅರೋರಾ, ನೂರಾ ಫತಹೇ, ಸೇರಿದಂತೆ ಇನ್ನುಳಿದ ನಟಿಯರನ್ನ ನಾಚಿಸುವಂತಿದೆ.
೩೦ ಏಪ್ರೀಲ್‌ನಲ್ಲಿ ರೀಲಿಸ್ ಆದ ಈ ಗೀತೆಗೆ ೪,೬೨,೩೨೧ ವಿವ್ಸ್ ದೊರೆತಿವೆ.

೬ ಮೇದಂದು ಮೌಲಾ ಮೇರೆ ಮೌಲಾ ಸೂಫಿ ಪ್ರಕಾರದ ಗೀತೆ ರೀಲಿಸ್ ಆಗಿದ್ದು, ಇದಕ್ಕಂತೂ ೩,೯೫,೯೭೦ ವಿವ್ಸ್ಗಳು ದೊರೆತಿವೆ.

೧೫ ಮೇ ದಂದು ಜರಾ ಜರಾ ಸೀ ಬಾತ್ ಪೇ ರೂಟ್ ಜಾನಾ ಬಸ್ ಕ್ಯಾ ರಿಲೀಸ್ ಆಗಿದ್ದು, ೨,೯೬,೧೮೩ ವಿವ್ಸ್ಗಳು ದೊರೆತಿವೆ.
ಜಬ್‌ಸೆ ಹುವೀ ಮೇ ಜವಾನ್ ಸಾಂಗ್‌ನಲ್ಲಿ ಅಮೃತಾ ಅವರು ಅಭಿನಯಿಸಿದ್ದಾರೆ. ಬಾಲಿವುಡ್‌ನ ಸಲಮಾನ್, ಅಮೀರ್, ಶಾರೂಕ್ ಖಾಣ್ ಅವರನ್ನ ಶೋಕೇಸ್ ಮಾಡಲಾಗಿದೆ. ಮೇ ೨೦ ರಂದು ಈ ಗೀತೆ ರಿಲಿಸ್ ಆಗಿದ್ದು, ಕೇವಲ ನಾಲ್ಕೇ ದಿನದಲ್ಲಿ ೨,೪೧,೯೫೪ ವಿವ್ಸ್ ಸೋಷಿಯಲ್ ಮಿಡೀಯಾದಲ್ಲಿ ದೊರೆತಿವೆ.

ಒಂದಕ್ಕಿAತ ಒಂದು ಗೀತೆಗಳು ಹಿಟ್ ಆಗುತ್ತಿದ್ದು, ಸುಪ್ರಸಿದ್ಧ ನೃತ್ಯ ನಿರ್ದೇಶಕ ಚೀನಿ ಪ್ರಕಾಶ ಕೋರಿಯೋಗ್ರಾಫಿ ಮಾಡಿದ್ದಾರೆ. ಎಲ್ಲ ಗೀತೆಗಳಿಗೂ ೧೩,೯೬,೪೨೮ ಕ್ಕೂ ಹೆಚ್ಚು ವಿವ್ಸ್ಗಳು ಸಿಗುತ್ತಿವೆ. ಚಿತ್ರದಲ್ಲಿ ಐಟಂ ಸಾಂಗ್‌ಗಳನ್ನು ರೀತು ಪಾಟಕ್ ಹಾಡಿದ್ದಾರೆ. ಅರ್ಪೀತಾ ಚಕ್ರವರ್ತಿ ಮತ್ತು ಜಾವೇದ್ ಅಲಿ ಅವರು ಜರಾ ಜರಾ ಸೀ ಬಾತ್ ಪೇ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.
ಬ್ರಾಂಡೆಕ್ಸ್ ಮ್ಯೂಸಿಕ್‌ನಲ್ಲಿ ಈ ಎಲ್ಲ ಗೀತೆಗಳು ರಿಕಾರ್ಡ್ ಆಗಿವೆ.
ಚಿತ್ರದಲ್ಲಿ ಎಲ್ಲ ಸುಪ್ರಸಿದ್ಧ ನಟ-ನಟಿಯರು ಅಭಿನಯಿಸಿದ್ದಾರೆ. ಮೇ ೨೭ ರಂದು ದೇಶಾದ್ಯಂತ ತೆರೆಕಾಣಲಿದ್ದು, ಉತ್ತರ ಕರ್ನಾಟಕದ ಬೆಳಗಾವಿಯವರೇ ಆದ ನಿರ್ಮಾಪಕ ಸಂಜಯ್ ಸುಂಠಕರ್ ಅವರು ನಿರ್ಮಿಸಿದ ಮೊದಲ ಚಿತ್ರ ಇದಾಗಿದೆ. ಆದ್ದರಿಂದ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಗರು ನೋಡಿ ಯಶಸ್ವಿಗೊಳಿಸಬೇಕೆಂದು, ನಿರ್ದೇಶಕ ಅನೀಸ್ ಬಾರುದ್‌ವಾಲೆ, ಫಾರ್ಚೂನ್ ಲೈಫ್ ಲೈನ್ ಮೀಡಿಯಾ ಆ್ಯಂಡ್ ಎಂಟರ್‌ಟೈನ್‌ಮೆAಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಜುಬೇರ್ ಎಸ್. ಶೇಖ್ ಸೇರಿದಂತೆ ಚಿತ್ರತಂಡ ಥಿಯೇಟರ್‌ಗೆ ಹೋಗಿ ವಿಕ್ಷೀಸಬೇಕೆಂದು ಆಹ್ವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button