ಸ್ಥಳೀಯ ಸುದ್ದಿ
8.3 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡಿದ ಗ್ರಾಮೀಣ ಶಾಸಕರು
ಧಾರವಾಡ
ತಾಲೂಕಿನ ನರೇಂದ್ರ ಗ್ರಾಮದಲ್ಲಿ 8.3 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಮೃತ ದೇಸಾಯಿ ಅವರು ಭೂಮಿ ಪೂಜೆ ನಡೆಸಿದ್ರು.
ಕಾಮಗಾರಿಗಳ ವಿವರ.
- ಧಾರವಾಡ ತಾಲೂಕಿನ 2021-22 ನೇ ಸಾಲಿನ ನರೇಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಂದ್ರ ಡಿ.ಎಮ್. ನರೇಂದ್ರ ಕೆ.ಎಮ್. ನರೇಂದ್ರ ಕುಂಭಾಪೂರ ಮತ್ತು ದಾಸನಕೊಪ್ಪ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಕಾಮಗಾರಿ.
ಅಂದಾಜು ಮೊತ್ತ- 5.8 ಕೋಟಿ - ನರೇಂದ್ರ ಗ್ರಾಮದ ಎನ್.ಎಚ್-4 ರಿಂದ ಲೋಕೂರು ಜಿ.ಮು.ರ ಕಿ.ಮೀ 0.00 ರಿಂದ ಕಿ.ಮೀ 3.00 ವರೆಗೆ ಕಾಮಗಾರಿ.
ಅಂದಾಜು ಮೊತ್ತ- 1 ಕೋಟಿ - ನರೇಂದ್ರ ಗ್ರಾಮದ ಗುಡ್ಡದ ಬಸವಣ್ಣನ ರಸ್ತೆಯಿಂದ ಯಾದವಾಡ ಸೀಮೆ ರಸ್ತೆ ಸುಧಾರಣೆ (ವ್ಹಿ. ಆರ್. 126/0086).
ಅಂದಾಜು ಮೊತ್ತ-60.00 ಲಕ್ಷ - ನರೇಂದ್ರ ಗ್ರಾಮದಿಂದ ದಾಸನಕೊಪ್ಪಕ್ಕೆ ಹೋಗುವ ಹೊಲದ ದಾರಿ ಸುಧಾರಣೆ (ವ್ಹಿ. ಆರ್. 261).
ಅಂದಾಜು ಮೊತ್ತ-52.00 ಲಕ್ಷ - ನರೇಂದ್ರ-9 ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ.
ಅಂದಾಜು ಮೊತ್ತ-16.50 ಲಕ್ಷ - ನರೇಂದ್ರ ಗ್ರಾಮದ ಹೊಸಕೇರಿ ಓಣಿಯಲ್ಲಿ ಗರಡಿ ಮನೆ ನಿರ್ಮಾಣ.
ಅಂದಾಜು ಮೊತ್ತ-05.00 ಲಕ್ಷ - ನರೇಂದ್ರ ಗ್ರಾಮದ ದೇವಗಿರಿ ಓಣಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಸಿದ್ಧಾರೂಢ ಯುವಕ ಮಂಡಳದ ಕಟ್ಟಡ ಉದ್ಘಾಟನೆ (ಮಾನ್ಯ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರ ಅನುದಾನ ಅಡಿಯಲ್ಲಿ).
- ನರೇಂದ್ರ ಗ್ರಾಮದ ಶ್ರೀ ಹನುಮಂತ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಚೆಕ್ ವಿತರಣೆ.
- ನರೇಂದ್ರ ಗ್ರಾಮದ ಶ್ರೀ ಉಡಚಮ್ಮ ದೇವಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚೆಕ್ ವಿತರಣೆ ಹಾಗೂ ಧಾರವಾಡ ತಾಲೂಕಿನ ನರೇಂದ್ರ ಶ್ರೀ ಗ್ರಾಮದೇವಿ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚೆಕ್ ವಿತರಣೆ ಸೇರಿದಂತೆ
ನರೇಂದ್ರ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರದಂದು ಶಾಸಕ ಅಮೃತ ದೇಸಾಯಿ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗಂಗವ್ವ ನಿರಂಜನ್, ತಿರಕಯ್ಯ ಹಿರೇಮಠ, ನಾಗರಾಜ್ ಹೋಟೆಹೋಳಿ, ಸುದತ್ತ ದೇಸಾಯಿ, ಮಂಜುನಾಥ್ ಈಳಗೆರ, ವಿಜಯ್ ದೇಶಮುಖ, ಲಕ್ಷ್ಮಿ ಸಿಂಧೆ, ಸುಶೀಲಾ ಪಾಟೀಲ್, ಮಾದೇವಿ ಪೂಜಾರ್,ಶಾಂತು ಗಾಡ್ದನವರು,ರಾಯನಗೌಡ ಪಾಟೀಲ್,ಆತ್ಮಾನಂದ್ ಹುಂಬೇರಿ,ಈರಪ್ಪ ಘಂಟಿ, ಶಂಕರ ಕೊಮಾರದೇಸಾಯಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.