ಬ್ಲಾಕ್ ಅಧ್ಯಕ್ಷನೆ ಕೊಲೆ ಯತ್ನದ ನೇರ ಆರೋಪಿ : ಪ್ರಕರಣ ದಾಖಲು!
ಹುಬ್ಬಳ್ಳಿ
ಅವಳಿ ನಗರದಲ್ಲಿ ಕಳ್ಳತನ,ದರೋಡೆ,ಕೊಲೆ,ಸುಲಿಗೆ,ಕೊಲೆಯತ್ನದಂತಹ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇವೆ. ಹೀಗೆ ಹಳೆಹುಬ್ಬಳ್ಳಿಯ ಆನಂದನಗರದಲ್ಲಿ ಇದೆ ದಿನಾಂಕ 14/6/2022 ರಂದು ಅಣ್ಣ ತಮ್ಮಂದಿರ ಮೇಲೆ ರಾತ್ರಿ 9ರ ಆಸುಪಾಸಿನಲ್ಲಿ ತಲ್ವಾರ ಗಳೊಂದಿಗೆ ಬಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾದ ಪ್ರಕರಣ ಕೂಡ ಈಗ ಸ್ಥಳೀಯ ರಾಜಕೀಯ ವ್ಯಕ್ತಿಗಳ ಹಸ್ತ ಕ್ಷೇಪದಿಂದ ಆರೋಪಿಗಳು ಕಾನೂನು ಚೌಕಟ್ಟು ಮೀರಿ ಪಾರಾಗಲು ಯತ್ನಿಸಿಲುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಆನಂದನಗರದ ವೆಲ್ ಕಮ್ ಹಾಲ್ ಬಳಿ ಇಬ್ಬರು ಸಹೋದರರ ಮೇಲೆ ಹರಿತವಾದ ಆಯುಧಗಳಿಂದ ಕೊಲೆಗೆ ಯತ್ನಿಸಿದ್ದರು. ದಾಳಿಯ ವೇಳೆಗೆ ಗಂಭೀರ ವಾಗಿ ಗಾಯಗೊಂಡು ರಕ್ತಸಿಕ್ತ ವಾಗಿ ನರಳುತ್ತಿದ್ದ. ಘೋಡಕೆ ಪ್ಲಾಟ್ ನಿವಾಸಿ ಜಿಲಾನಿ ಶೇಖ ಹಾಗೂ ಆತನ ಸಹೋದರ ಜಾವೀದ ಶೇಖ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಐದು ದಿನಗಳ ಕಾಲ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಮೂಲೆಗುಂಪಾಗಿದ್ದಾರೆ.
ಆದರೆ ಕೃತ್ಯವೆಸಗಿದವರು ಮಾತ್ರ ಪೊಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕೊರ್ಟಲ್ಲಿ ಮೂವರು ಆರೋಪಿತರು ಶರಣಾದರೆ, ಇಬ್ಬರು ಠಾಣೆಗೆ ವ್ಯಕ್ತಿಯೊಬ್ಬರ ಮೂಲಕ ಹಳೆಹುಬ್ಬಳ್ಳಿ ಪೊಲಿಸರಿ ಶರಣಾದಂತೆ ನಾಟಕ ವಾಡಿ ಪೊಲಿಸರಿಗೆ ಶೆಡ್ಡು ಹೊಡೆದಿದ್ದಾರೆ. ಇನ್ನುಳಿದವರು ನಿರಿಕ್ಷಣಾ ಜಾಮಿನು ಅರ್ಜಿಗಾಗಿ ಇನ್ನಿಲ್ಲದ ಒತ್ತಡ ಪೊಲಿಸರ ಮೇಲೆ ಹೇರುತ್ತಿದ್ದಾರೆ.ಇಂತಹ ಗುಂಡಾ ಪ್ರವೃತ್ತಿಯವರನ್ನ ಸ್ವತಃ ಕಾಂಗ್ರೇಸ್ ಪಕ್ಷವೆ ತಿದ್ದುವುದಂತು ಹಗಲು ಕನಸೆ ಸರಿ.
ಆದರೆ ಅವಳಿನಗರದ 63 ನೆ ವಾರ್ಡಿನ ಕಾಂಗ್ರೇಸ್ ಅಧ್ಯಕ್ಷನಾಗಿರುವ ಅಜ್ಮೀರ ನಗರದ ನಿವಾಸಿ ಆರೋಪಿ ಮಹ್ಮದ ಗೌಸ್ ಬಳಿಗಾರ್ ಹಾಗೂ ಸಹೋದರರು ತಲ್ವಾರ್ ಹಿಡಿದು ಆದಿನ ಬೈಕ್ ಗಳನ್ನ ಏರಿ ದಾಳಿಗೆ ಹೊದದ್ದನ್ನ ಕಂಡ ಆನಂದ ನಗರದ ಕೆಲವರು ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದಾರೆ.
ಆನಂದನಗರದಲ್ಲಿ ಬಹುತೇಕ ಕುಟುಂಬ ಗಳು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಬಡ ಜನ ಒಂದೆಡೆಯಾದರೆ. ಇತ್ತ ಪೊಲೀಸರ ಸಲುಗೆ ಬೆಳೆಸಿ ತಾವು ಮಾಡಿದ್ದೆ ದರ್ಬಾರ್ ಎಂದು ಮೆರೆಯುತ್ತಿರುವ ಪುಡಿ ರೌಡಿಗಳು ಒಂದೆಡೆಯಾಗಿದ್ದಾರೆ.
ಇನ್ನೂ ಇಲ್ಲೀನ ಸಾರ್ವಜನಿಕರು ಇಂತಹ ಘಟನೆಯನ್ನು ಖಂಡಿಸಿದ್ದಲ್ಲದೆ ತಪ್ಪಿತಸ್ಥರ ಮೇಲೆ ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸಿದ್ದಲ್ಲಿ ಸಮಾಜಘಾತುಕ ಶಕ್ತಿಗಳನ್ನ ಹತ್ತಿಕ್ಕಬಹುದಾಗಿದೆ ಎಂದಿದ್ದಾರೆ.
ಆದರೆ ಚಿಕಿತ್ಸೆ ಯ ಬಳಿಕ ಆಸ್ಪತ್ರೆಯಿಂದ ಮನೆ ಸೇರಿದ ಜೆಲಾನಿ ಶೇಖ ಇನ್ನೂ ಕೂಡ ಆತಂಕದಲ್ಲಿದ್ದರೆ. ಸಹೋದರ ಜಾವೀದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಕೆಲವು ದಿನಗಳ ಹಿಂದೆ ಇದೆ ಆನಂದ ನಗರದಲ್ಲಿ ಕೇವಲ ಗುಟ್ಕಾ ವಿಷಯಕ್ಕೆ ನಡೆದ ಕೊಲೆ ಹಾಗೂ ಪ್ರಚೋದನಾ ಕಾರಿ ಪೊಸ್ಟ್ ಸಂಭಂದಿಸಿದಂತೆ ನಡೆದ ಘಟನೆಗಳು ತನಿಖಾ ಹಂತದಲ್ಲಿರುವಾಗಲೆ ಮತ್ತಷ್ಟು ಭಯ ಹುಟ್ಟಿಸಿದೆ 14 ರಾತ್ರಿ ನಡೆದ ಸಹೋದರರ ಮೇಲಿನ ದಾಳಿ.
ಘಟನೆಯ ಕುರಿತು ಹಳೆಹುಬ್ಬಳ್ಳಿಯ ಪೊಲಿಸರು ಇದುವರೆಗೂ ಮಾಹಿತಿ ಬಿಟ್ಟು ಕೊಡದೆ ತನಿಖೆ ಮುಂದು ವರೆಸಿದ್ದಾರೆ. ಇನ್ನೂ ಹಿರಿಯ ಪೊಲಿಸ್ ಅಧಿಕಾರಿಗಳ ನಿರ್ದೆಶನದಂತೆ ಕೊಲೆಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಎಪ್ ಎಸ್ ಭಜಂತ್ರಿ ಯವರ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಿದ್ದಾರಂತೆ.