BJPಯ16 ಪಾಲಿಕೆ ಸದಸ್ಯರಿಂದ ರಾಜೀನಾಮೆ ಎಚ್ಚರಿಕೆ ಪತ್ರ: ಶೆಟ್ಟರ್ ಗೆ ಟಿಕೆಟ್ ನೀಡುವಂತೆ ಹೆಚ್ಚಿದ ಒತ್ತಡ!
ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡುವಲ್ಲಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ಇಂದು ಬಿಜೆಪಿ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರುಗಳು ತಮ್ಮ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ಪತ್ರ ಬರೆದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಇನ್ನೂ ಸತತ ಆರು ಬಾರಿ ಗೆಲುವು ಕಂಡ ಜಗದೀಶ್ ಶೆಟ್ಟರ್ ಅವರಿಗೆ ಅವಳಿನಗರದ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲು ಹೈ ಕಮಾಂಡ್ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಬೆಸರಗೊಂಡ ಪಾಲಿಕೆ ಸದಸ್ಯರು, ಜಗದೀಶ್ ಶೆಟ್ಟರ್ ಗೆ ಬೆಂಬಲ ಸೂಚಿಸಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರುಗಳಾದ 1)ಮಲ್ಲಿಕಾರ್ಜುನ ಗುಂಡೂರ, 2)ರಾಜಣ್ಣ ಕೊರವಿ, 3)ಉಮೇಶಗೌಡ ಕೌಜಗೇರಿ, 4)ತಿಪ್ಪಣ್ಣ ಮಜ್ಜಿಗಿ,
5)ಸೀಮಾ ಮುಗಲಿಶೆಟ್ಟರ
6) ಸಂತೋಷ ಚವ್ಹಾಣ,
7) ಮಹದೇವಪ್ಪ ನರಗುಂದ,
8) ಬೀರಪ್ಪ ಖಂಡೇಕರ,
9) ಉಮಾ ಮುಕುಂದ,
10) ವೀರಣ್ಣ ಸವಡಿ,
11) ರೂಪಾ ಶೆಟ್ಟಿ,
12)ಕಿಶನ್ ಬೆಳಗಾವಿ,
13) ವೀಣಾ ಬರದ್ವಾಡ,
14)ಸರಸ್ವತಿ ಧೋಂಗಡಿ, 15)ಚಂದ್ರಿಕಾ ವೆಂಕಟೇಶ ಮೇಸ್ತ್ರಿ,
16)ಮೀನಾಕ್ಷಿ ವಂಟಮೂರಿ ಈ ಜನ ಬಿಜೆಪಿ ಪಾಲಿಕೆ ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.