Ecmo ಚಿಕೆತ್ಸೆ ಎಸಡಿಎಂ ಆಸ್ಪತ್ರೆಯಲ್ಲಿಯೂ ಲಭ್ಯ
ಧಾರವಾಡ
ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವೆಂಟಿಲೇಟರಗಿಂತ ಅಡ್ವಾನ್ಸ ಕೃತಕ ಶ್ವಾಸಕೋಶ ಎಂದು ಕರೆಯಲ್ಪಡುವ Ecmo (ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್)
ಇದೊಂದು ಜೀವರಕ್ಷಕ ವಿಧಾನವಾಗಿದೆ. ಇದನ್ನು ಬಳಸಿಕೊಂಡು ಎಸ್ಡಿಎಂ ಆಸ್ಪತ್ರೆಯಲ್ಲಿ 26 ವರ್ಷದ , 15 ವರ್ಷದ, 24 ವರ್ಷದ ಹಾಗೂ 60 ವರ್ಷ ಮೇಲ್ಪಟ್ಟ 60 ವರ್ಷದ ಹಾಗೂ
69 ವರ್ಷದ ಒಟ್ಟು 5 ಮಂದಿ ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕೆತ್ಸೆ ಮಾಡಲಾಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಎಸ್ಡಿಎಂ ವೈದ್ಯರು ತಿಳಿಸಿದ್ರು.
ಎಸ್ಡಿಎಂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೈದ್ಯರಾದ ಡಾ.ಗುಣವತಿ ಜಕರಡ್ಡಿ, ಡಾ,ನಾಗೇಶ, ಇಕಮೊ ಉಪಕಣದ ಬಗ್ಗೆ ಮಾಹಿತಿ ನೀಡಿದ್ರು. 30 ಲಕ್ಷ ವೆಚ್ಚದ ಈ ಇಕಮೊ
ಮಷಿನ್ ವೆಂಟಿಲೇಟರಗಿಂತ ಅಡ್ವಾನ್ಸ ಆಗಿದ್ದು, ನ್ಯೂಮೋನಿಯಾ, ಹೃದಯ ವೈಫಲ್ಯ ಸೇರಿದಂತೆ,ಹೆಪ್ಪುಗಟ್ಟಿದ ರಕ್ತವನ್ನು ದೇಹದಿಂದ ತೆಗೆಯುವ ಅತ್ಯಂತ ಅತ್ಯಾಧುನಿಕ ಚಿಕೆತ್ಸೆ ಇದಾಗಿದೆ.
ಭಾರತದಲ್ಲಿ ದಿವಂಗತ ಡಾ.ಎಸ್.ಪಿ ಬಾಲಸುಬ್ರಮಣ್ಯಂ ಹಾಗೂ ತಮಿಳುನಾಡಿನ ಮಾಜಿ ಸಿಎಂ ಜೆ.ಜಯಲಲಿತಾ ಅವರಿಗೆ ಇಂತಹ ಚಿಕೆತ್ಸೆ ಕೊಡಲಾಗಿದೆ ಎಂದರು.
ಈಗಾಗಲೇ ಎಸ್ಡಿಎಂ ಆಸ್ಪತ್ರೆಯಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ. ರಾಜ್ಯದ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಇಂತಹ ಅತ್ಯಾಧುನಿಕ ಮಷಿನ್ಗಳನ್ನು ಆಸ್ಪತ್ರೆಗಳಲ್ಲಿ
ಅಳವಡಿಸಲಾಗಿದ್ದು, ಇಂತಹ ಚಿಕೆತ್ಸೆ ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಎಸಡಿಎಂ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು. 4 ಲಕ್ಷ ರೂಪಾಯಿ ವೆಚ್ಚದ ಈ ಚಿಕೆತ್ಸೆಯ ಸದುಪಯೋಗವನ್ನು ರೋಗಿಗಳು
ಪಡೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ರು.