ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ನೆಡುತೋಪು ಅಭಿಯಾನ!

ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜೂ. 7:

ಆಜಾದಿ ಕಾ ಅಮೃತ ಮಹೋತ್ಸವದ ನೆನಪಿಗಾಗಿ ದೇಶದಾದ್ಯಂತ 75,000 ಸಸಿಗಳನ್ನು ನೆಡಲು ಸಾರ್ವಜನಿಕ ಉದ್ಯಮ ಇಲಾಖೆಯ ಉಪಕ್ರಮದ ಭಾಗವಾಗಿ ಇಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೆಡುತೋಪು ಅಭಿಯಾನವನ್ನು ಆಯೋಜಿಸಲಾಗಿತ್ತು.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ತನ್ನ ಪ್ರತಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ 50 ಸಸಿಗಳನ್ನು ನೆಡಲು ಯೋಜಿಸಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಹಾಂಗ್ ಕಾಂಗ್ ಆರ್ಕಿಡ್ ಎಂದು ಕರೆಯಲ್ಪಡುವ ಮಂದಾರ ಮರದ ಸುಮಾರು 51 ಸಸಿಗಳನ್ನು ನೆಡಲಾಯಿತು.

ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಪ್ರಮೋದ್ ಕುಮಾರ್ ಠಾಕ್ರೆ ಅವರು ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು. ಧಾರವಾಡದ ಹಿರಿಯ ಅಂಚೆ ಅಧೀಕ್ಷಕರಾದ ವಿ. ಎಸ್.ಎಲ್ ನರಸಿಂಹ ರಾವ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ವಿಮಾನ ನಿಲ್ದಾಣದ ಸುತ್ತಲಿನ ಉತ್ತಮ ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಹಸಿರು ಅಭಿವೃದ್ಧಿಪಡಿಸಲು ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಮಧ್ಯಸ್ಥಗಾರರು ಮುಂದಾಗಬೇಕು. ಈ ಸಸಿಗಳು ದೊಡ್ಡ ಮರಗಳಾಗಿ ಬೆಳೆದಾಗ ಈ ಅಭಿಯಾನ ಯಶಸ್ವಿಯಾಗಲಿದೆ. ನೆಟ್ಟ ಮರಗಳ ಸಂರಕ್ಷಣೆಗೆ ಅಣಿಯಾಗಬೇಕು ಎಂದು ವಿಮಾನ ನಿಲ್ದಾಣದ ನಿರ್ದೇಶಕ ಎಸ್. ಪ್ರಮೋದ್ ಕುಮಾರ್ ಠಾಕ್ರೆ ಕರೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button