ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಅವಳಿನಗರದಲ್ಲಿ ಮತ್ತೆ ಝಳಪಿಸಿದ ತಲ್ವಾರ್ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ!

ಹುಬ್ಬಳ್ಳಿ

ಹಳೆಹುಬ್ಬಳ್ಳಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಝಳಪಿಸಿದ ತಲ್ವಾರ ಇಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ.

ಕ್ಷುಲಕ ಕಾರಣಕ್ಕೆ ಸೆಂಟ್ರಿಂಗ್ ಮೇಸ್ತ್ರಿ ಹಾಗೂ ಆತನ ಸಹೋದರನ ಮೇಲೆ ಆರ ರಿಂದ ಏಳು ಜನರ ತಂಡವೊಂದು ತಲ್ವಾರನಿಂದ ಮಾರಣಾಂತಿಕ ದಾಳಿ ನಡೆಸಿ ಸ್ಥಳದಿಂದ ಪರಾರಿಯಾದ ಘಟನೆ ಹಳೆ ಹುಬ್ಬಳ್ಳಿಯ ಆನಂದ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವರನ್ನು ಘೋಡಕೆ ಪ್ಲಾಟದ ನಿವಾಸಿ ಜಿಲಾನಿ ಶೇಖ್ (40) ಹಾಗೂ ಆತನ ಸಹೋದರ ಜಾವೀದ್ (28) ಎಂದು ಗುರುತಿಸಲಾಗಿದೆ.

ವೃತ್ತಿಯಲ್ಲಿ ಸೆಂಟ್ರೀಂಗ್ ಮೇಸ್ತ್ರಿ ಯಾಗಿರುವ ಜಿಲಾನಿ ತನ್ನಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೆ ಪೇಮೆಂಟ್ ಕೊಡುತ್ತಿದ್ದ ಆದ್ರೆ ರಫೀಕ ಬಳಗ್ಯಾರ,ಅಲ್ತಾಪ್ ಗೌಂಡಿ ,ಅಸ್ಲಂ,ಅಡ್ಡಾ ರಫೀಕ ಎಂಬುವವರು ಅಲ್ಲೀಯೆ ಸಿಗರೇಟ್ ಸೇದುತ್ತ ನಿಂತಿದ್ದರು ಎನ್ನಲಾಗಿದೆ.

ಆದ್ರೆ ಗುಂಪಿನಲ್ಲಿದ್ದ ರಫೀಕ ಬಳಗ್ಯಾನುರ ಎಂಬಾತ ಜಿಲಾನಿಯೊಂದಿಗೆ ಕಾಲು ಕೆದರಿ ಜಗಳಕ್ಕೆ ಬಂದು ಜಿಲಾನಿಗೆ ಆವಾಜ್ ಹಾಕಿ ಮನೆಗೆ ಹೋಗಿ ತಲ್ವಾರ ಗಳೊಂದಿಗೆ ಬಂದವರೆ ಜಿಲಾನಿ ಹಾಗೂ ಆತನ ಸಹೋದರನ ಮೇಲೆ ದಾಳಿ ನಡೆಸಿ ಆತನ ಬಳಿಯಿದ್ದ 70,00/ನಗದು ಹಾಗೂ ಚಿನ್ನದ ಸರ ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಇವರನ್ನು ಸ್ಥಳೀಯರೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇನ್ನೂ ಘಟನೆಯ ಸುದ್ದಿ ತಿಳಿದು ಆಸ್ಪತ್ರೆಗೆ ಭೇಟಿ ನಿಡಿದ ಕಾನೂನು ಸುವ್ಯವಸ್ಥೆ ಡಿಸಿಪಿ ಸಾಹೀಲ್ ಭಾಗ್ಲಾ ಘಟನೆಯ ಕುರಿತು ತನಿಖೆ ನಡೆಸುತ್ತಿದ್ದ ಆರೋಪಿಗಳನ್ನು ಶೀಘ್ರವೆ ಬಂದಿಸುವುದಾಗಿ ತಿಳಿಸಿದ್ದಾರೆ.

ಪವರ್ ಸಿಟಿ ನ್ಯೂಸ್ app play store ನಲ್ಲಿ ಲಭ್ಯ.

https://powercity.news/2022/06/old-hubli-voilence/

Related Articles

Leave a Reply

Your email address will not be published. Required fields are marked *

Back to top button