ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಅವಳಿನಗರದ ಪಾಲಿಕೆಯ ರಾಯಭಾರಿಯಾಗಿ ನಟ ಅನಿರುಧ್ದ!

ಹುಬ್ಬಳ್ಳಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಶ್ರಯದಲ್ಲಿ ಇಂದು ನಡೆದ ಕಸದ ಮೂಲದಿಂದ ತ್ಯಾಜ್ಯ ವಿಂಗಡನೆ ಹಾಗೂ ಮನೆಯಂಗಳದಲ್ಲೆ ಗೊಬ್ಬರ ತಯಾರಿಸುವ ಮಾಹಿತಿ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಯಾಂಡಲ್ ವುಡ್ ಚಿತ್ರನಟ ಅನಿರುದ್ಧ ಹುಬ್ಬಳ್ಳಿ -ಧಾರವಾಢ ಮಹಾನಗರ ಪಾಲಿಕೆಯ ಸ್ವಚ್ಛತಾ ರಾಯಭಾರಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರ್ಡ್ ನಂಬರ್ 52 ರ ಪಾಲಿಕೆ ಸದಸ್ಯರಾದ ಚೇತನ್ ಸಹದೇವ್ ಹಿರೇಕೆರೂರ ಮಾತನಾಡಿ ಅವಳಿನಗರದ ಪಾಲಿಕೆ ಕಳೆದ ದಶಕಗಳಿಂದಲೂ ಸ್ವಚ್ಚತೆಯ ಬಗ್ಗೆ ಸಾಕಷ್ಟು ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲೆ ಬಂದಿದೆ.
ಇ ಹಿಂದೆ ಕನ್ನಡದ ಖ್ಯಾತ ಚಿತ್ರ ನಟ ದಿವಂಗತ ಡಾಕ್ಟರ್ ಪುನೀತ್ ರಾಜಕುಮಾರ ಅವರು ಸಹ ರಾಯಭಾರಿಯಾಗಿ ಎಲ್ಲರಲ್ಲೂ ಸ್ಪೂರ್ತಿ ಯಾಗಿದ್ದರು. ಆದರೆ ಈ ದಿನ ಮತ್ತೆ ನಮ್ಮ ಜೊತೆ ಖ್ಯಾತ ಚಿತ್ರ ನಟ ಅನಿರುದ್ಧ ಅವರು ನಮ್ಮ ಅವಳಿನಗರಕ್ಕೆ ಸ್ವಚ್ಚತೆಯ ಅರಿವು ಮೂಡಿಸಲು ರಾಯಭಾರಿ ಯಾಗಿರುವುದು ಸಂತಸ ತಂದಿದೆ ಎಂದು ಅಭಿಪ್ರಾಯ ಪಟ್ಟರು.

ಡಾಲರ್ಸ ಕಾಲೋನಿ ಉದ್ಯಾನವನ !

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಉಪ ಆಯುಕ್ತರಾದ ಬನಶಂಕರಿ ವಲಯ ಕಚೇರಿ 7ರ ಸಹಾಯಕ ಆಯುಕ್ತರಾದ ಗಿರೀಶ್ ತಳವಾರ್ ಹಾಗೂ ಸಮತಾ ಸೇನಾ ರಾಜ್ಯಾಧ್ಯಕ್ಷರಾದ ಗುರುನಾಥ್ ಉಳ್ಳಿಕಾಶಿ, ರಾಘವೇಂದ್ರ ಉಳ್ಳಿಕಾಶಿ,ಶಂಕರ್ ಕಾಲವಾಡ ,ಪ್ರಮೋದ್ ಕೃಷ್ಣನ್ ಸಂತೋಷ್ ಶೆಟ್ಟಿ, ಸಾಗರ್ ಹಿರೇಕೆರೂರು,ನಾಗರಾಜ್ ಕರಡಕಲ್ ಹಾಗೂ ವಲಯ ಕಚೇರಿ ೭ರ ಎಲ್ಲ ಸಿಬ್ಬಂದಿಗಳು ಹಾಗೂ ಡಾಲರ್ಸ್ ಕಾಲೋನಿಯ ನಾಗರಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button