ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ದಲಿತರ ಮೇಲಿನ ದೌರ್ಜನ್ಯ ಖಂಡಿಸಿ : ಕರ್ನಾಟಕ ದಲಿತ ವಿಮೊಚನಾ ಸಮೀತಿ ಪ್ರತಿಭಟನೆ!

ಹುಬ್ಬಳ್ಳಿ

ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ದಲಿತ ವರ್ಗದ ನೌಕರರು ಮತ್ತು ಡಾ.ಬಿ ಆರ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಅಪಮಾನ ಹಾಗೂ ಕೂಲಿ ಕಾರ್ಮಿಕನ ಮೇಲೆ ಹಲ್ಲೆ‌ ಸೇರಿದಂತೆ ದಲಿತರ ಮೇಲೆ ನಡೆಯುತ್ತಿರುವ ಅನ್ಯಾಯ ಹಾಗೂ ದಬ್ಬಾಳಿಕೆಗಳನ್ನ ಪೊಲಿಸ್ ಇಲಾಖೆ ನಿರ್ಲಕ್ಷ್ಯಿಸುತ್ತಿದೆ ಎಂದು ಆರೋಪಿಸಿ. ಹುಬ್ಬಳ್ಳಿಯ ತಹಸಿಲ್ದಾರ ಕಚೇರಿ ಎದುರು ಕರ್ನಾಟಕ ದಲಿತ ವಿಮೋಚನಾ ಸಮೀತಿಯಿಂದ ಪ್ರತಿಭಟನೆ ನಡೆಸುವ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸಿದ್ಧಾರ್ಥ್ ಮಲ್ಲಮ್ಮನವರ. ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಶಶಿಕಲಾ ಪರಮೇಶ್ವರ ಇವರು ನೀಡಿದ ಕಿರುಕುಳಕ್ಕೆ ದೂರು ನೀಡಿದರು ಪೊಲಿಸರು ಬಂದಿಸಿ ಕಾನೂನು ಕ್ರಮ ಜರುಗಿಸದೆ ಇರವುದು. ಇದೆ ರೀತಿ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಹಾಡ ಹಗಲೆ ದಲಿತ ಯುವಕ ಪುಂಡಲೀಕ ಮಾದರ ಎಂಬುವನ ಮೇಲೆ ಎಂಟ್ಹತ್ತು ಜನರು ಮನಬಂದಂತೆ ಥಳಿಸಿ ಸೆಗಣಿ ತಿನ್ನಿಸಿ ಅಪಮಾನ,ಜೀವ ಬೆದರಿಕ ಹಾಕಿದ ಕುರಿತು ದೂರು ದಾಖಲಿಸಿದರು ರೋಣ ತಾಲೂಕಿನ ಪೊಲಿಸರ ಕಾನೂನು ಕ್ರಮ ಜರುಗಿಸದೆ ಇರುವುದು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಬಂಗಾರಿ ಕ್ಯಾಂಪಸ್ ನಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ಕೆಸರು ಎರಚಿದ್ದರ ಕುರಿತು ದಲಿತ ಸಂಘಟನೆಗಳು ದೂರು ನೀಡಿದರು ಪೊಲೀಸರು ಕ್ರಮ ಜರುಗಿಸದೆ ಇರುವುದನ್ನ ಗಮನಿಸಿದರೆ ರಾಜ್ಯದಲ್ಲಿ ಉದ್ದೇಶ ಪೂರ್ವಕವಾಗಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತೀವೆ ಕೂಡಲೇ ಸರಕಾರ ಇ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ “ಕರ್ನಾಟಕ ದಲಿತ ವಿಮೋಚನಾ ಸಮೀತಿಯಿಂದ” ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಸಿಧ್ದಾರ್ಥ್ ಮಲ್ಲಮ್ಮನವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಿದ್ದಾರೆ.

ಇ ವೇಳೆ ಸುರೇಶ ಖಾನಾಪುರ, ಓಂಕಾರ ವೀರಾಪೂರ,ಅನೀಲ್ ಗೋನಾಳ್, ಶ್ರೀಧರ್ ಕಂದಗಲ್,ರಮೇಶ್ ಕೊದ್ದಡ್ಡಿ,ಕೆಂಚಪ್ಪ ಮಲ್ಲಮ್ಮನವರ,ಸಿದ್ದು ಗುತ್ತಲ್,ಮೈಲಾರಪ್ಪ ಹಂಚಿನ ಮನಿ,ಶೀವರಾಜ್ ಮಾದರ್,ವಿಜಯ ಹರಿಜನ,ಉಮೇಶ್ ಮಾದರ,ಅಕ್ಷಯ ಅಮರಾಪೂರ,ನಿಂಗಪ್ಪ ಬರಮಣಿ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *