ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ಬೆಂಗೇರಿಯ ರೌಡಿ ಶೀಟರ್ ಅಲ್ತಾಪ್ ಬೇಪಾರಿ ಬಂಧನ!
![](https://www.powercity.news/wp-content/uploads/2022/06/print-137791829.jpg)
ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣಾ ಸರಹದ್ದಿನ ಕುಖ್ಯಾತ ರೌಡಿಶೀಟರ ಅಲ್ತಾಫ್ ಬೇಪಾರಿ ವಯಸ್ಸು 34 ಸಾ: ನಾಗಶೆಟ್ಟಿಕೊಪ್ಪ ಹುಬ್ಬಳ್ಳಿ ಈತನನ್ನು
ಗೂಂಡಾ ಕಾಯಿದೆಯಡಿಯಲ್ಲಿ ಬಂಧಿಸಿ ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
![](http://powercity.news/wp-content/uploads/2022/06/IMG-20220603-WA0028.jpg)
ಕಳೆದ 13 ವರ್ಷಗಳಲ್ಲಿ ಹಲವಾರು ಕೊಲೆ,ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ ಮುಂತಾದ ಅಪರಾಧ ಕೃತ್ಯಗಳಲ್ಲಿ ಈತನು ಭಾಗಿಯಾಗಿದ್ದನು.
![](http://powercity.news/wp-content/uploads/2022/06/IMG-20220603-WA0027.jpg)
ಕಳೆದ ವರ್ಷದ ಬೆಂಗೇರಿ ಮಾರ್ಕೆಟನಲ್ಲಿ ವಿರೇಶ ಹೆಗಡ್ಯಾಳ ಎಂಬುವವರ ಇವರ ಹತ್ಯೆಯಲ್ಲಿ ಮುಖ್ಯ ಆರೋಪಿಯಾಗಿದ್ದನು. ಆಗ ಈತನನ್ನು ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗಿತ್ತು. ಮತ್ತೆ ತನ್ನ ಹಳೆ ಚಾಳಿ ಮುಂದುವರೆಸಿದ್ದರಿಂದ ಈತ ಮತ್ತಷ್ಟು
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು. ಮತ್ತು ತನ್ನ ಸಹಚರರೊಂದಿಗೆ ಅಪರಾಧ ಚಟುವಟಿಕೆಗಳಲ್ಲಿ
ತೊಡಗುವ ಸಂಭವನೀಯ ಇರುವುದರಿಂದ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆಗಳು ಇದ್ದುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಿಲಾಗಿದ್ದು ಕಾನೂನು ಕ್ರಮ ಜರುಗಿಸಲಾಗಿದೆ.
![](https://www.powercity.news/wp-content/uploads/2022/06/print-137791829-694x560.jpg)