ಮುಂದುವರೆದ ಅಕ್ರಮ ಮರಳು ಅಡ್ಡೆಗಳ ಮೇಲಿನ ದಾಳಿ!
ಹುಬ್ಬಳ್ಳಿಯ ಸುತ್ತಮುತ್ತಲಿನ ಕೆಲವೊಂದು ಪ್ರದೇಶಗಳಲ್ಲಿ ಅಕ್ರಮ ಮರಳಿನ ದಂಧೆ ರಾಜಾ ರೋಷ ವಾಗಿ ನಡೆಸುತ್ತಿದ್ದಾರೆ.
ಇಂತಹ ಅಡ್ಡೆಗಳ ಮೇಲೆ ಇಂದು ಖಚಿತ ಮಾಹಿತಿಯ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ತೇಜಸ್ವಿನಿಯವರು ದಾಳಿ ನಡೆಸಿದ್ದಾರೆ.
ಈ ವೇಳೆ ಕುಂದಗೋಳ ಕ್ರಾಸ್ ಬಳಿಯ ಖಾಸಗಿ ಜಮಿನೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಮರಳು ತುಂಬುತ್ತಿದ್ದ ಲಾರಿ KA25 B0366 ಹಾಗೂ ನೊಂದಣಿ ಸಂಖ್ಯೆ ಇಲ್ಲದ ಲೋಡರ್ ಟ್ರ್ಯಾಕ್ಟರ್ ವಶಕ್ಕೆ ಪಡೆದು ಹುಬ್ಬಳ್ಳಿ ಹೊರವಲಯದ ಛೆಬ್ಬಿ ಹೊರ ಪೊಲಿಸ್ ಠಾಣೆಗೆ ಒಪ್ಪಿಸಿದ್ದಾರೆ.
ಅವಳಿನಗರದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇವಲ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಂದ ಅಸಾಧ್ಯ ಮಾತಾಗಿದ್ದು. ಇದಕ್ಕೆ ಸಂಭಂದಪಟ್ಟ ಟಾಸ್ಕ್ ಫೋರ್ಸ್ ಕೂಡ ಸಾಥ್ ನೀಡ ಬೇಕಿದೆ. ಕಳೆದ ಕೆಲವು ದಿನಗಳಿಂದಲೂ ಸಾರ್ವಜನಿಕರ ಧ್ವನಿಯಾಗಿ ನಿಂತಿರುವ “ಪವರ್ ಸಿಟಿ” ನ್ಯೂಸ್ ಧಾರವಾಢ ಜಿಲ್ಲೆಯಾದ್ಯಂತ ಅಕ್ರಮ ಮರಳು ದಂಧೆಕೋರರ ನಿದ್ದೆ ಗೆಡಿಸಿದ್ದಂತು ಸತ್ಯ.
ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ವಾದರೆ ಮನೆ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಗ್ರಾಹಕರಿಗೆ ಅನುಕೂಲ ವಾಗಲಿದೆ. ಮರಳು ದಂಧೆಯ ಇನ್ನಷ್ಟು ಮಾಹಿತಿ ನಿಮ್ಮ ಪವರ್ ಸಿಟಿ ನ್ಯೂಸ್ ಲ್ಲಿ.