Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ನಯಾನಗರ ಸುಕ್ಷೇತ್ರದಲ್ಲಿ ಶ್ರೀಗಳ ಬರ್ತಡೆ ಸಂಭ್ರಮ

ಬೈಲಹೊಂಗಲ

ಬೆಳಗಾವಿ‌ ಜಿಲ್ಲೆಯ ‌ಬೈಲಹೊಂಗಲ ತಾಲೂಕಿನ ನಯಾನಗರದ ಸುಕ್ಷೇತ್ರದಲ್ಲಿ ಇಂದು ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಅವರ‌ 39 ನೇ ವರ್ಷದ ಜನ್ಮದಿನಾಚರಣೆ ಆಚರಿಸಲಾಯಿತು.

ಬೆಳವಡಿ ಪ್ರಾಥಮಿಕ ಆರೋಗ್ಯ ‌ಕೇಂದ್ರದಲ್ಲಿ ಶ್ರೀಗಳು ಸ್ವಯಂ ರಕ್ತದಾನ‌ ಮಾಡಿದ್ರು. ಶ್ರೀಗಳ ಬರ್ತಡೆ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ನೂರಾರು ಮಂದಿ‌ ಭಕ್ತರು ‌ಪಾಲ್ಗೊಂಡು, ರಕ್ತದಾನ ಮಾಡಿದ್ರು.

ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿ, ಸಸಿಗಳನ್ನು ವಿತರಣೆ ಮಾಡಿದ್ರು.

ಇದೇ ವೇಳೆ ಶ್ರೀಗಳ‌ಪಾದ ಪೂಜೆಯನ್ನು ನೇರವೆರಿಸಲಾಯಿತು.

ಬರ್ತಡೆ ಕಾರ್ಯಕ್ರಮದಲ್ಲಿ ಶ್ರೀಗಳು ಭಕ್ತರನ್ನು ಉದ್ದೇಶಿಸಿ ಮಾತನಾಡಿ, ಈಗಿನ ಸಮಾಜದಲ್ಲಿ ಧರ್ಮ ಉಳಿಯಬೇಕಾಗಿದೆ.‌ಆದಷ್ಟು ನೊಂದವರಿಗೆ ಒಳ್ಳೆಯದನ್ನು ಮಾಡುವುದರ ಮೂಲಕ ಇದು ಸಾಧ್ಯವಾಗುತ್ತದೆ. ಬರ್ತಡೆಯನ್ನು ಅದ್ದೂರಿಯಾಗಿ‌ ಆಚರಣೆ ಮಾಡಿದ ಶಿಷ್ಯವೃಂದಕ್ಕೆ ಧನ್ಯವಾದ ಎಂದರು.

ವಿಶೇಷವಾದ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಶುಭಕೊರಲು ದೂರದ ಊರುಗಳಿಂದ ಗಣ್ಯರು ಭಕ್ತರು‌ ಮಠಕ್ಕೆ ಆಗಮಿಸಿದ್ರು.‌

Related Articles

Leave a Reply

Your email address will not be published. Required fields are marked *