ಸ್ಥಳೀಯ ಸುದ್ದಿ

ಅಂಗಡಿಗೆ ಬೆಂಕಿ ಮೇಯರ್ ಭೇಟಿ ಪರಿಶೀಲನೆ

ಧಾರವಾಡ

ಧಾರವಾಡದ ನೆಹರು ಮಾರುಕಟ್ಟೆಯಲ್ಲಿನ ಅಡಿಕೆ ವ್ಯಾಪಾರಸ್ಥರಾದ ಅಬ್ದುಲ‌ರೆಹಮಾನ ರಾಜೇಸಾಬ ಹೆಬ್ಬಳ್ಳಿಯವರ ಮಳಿಗೆಯಲ್ಲಿ ಶನಿವಾರ ರಾತ್ರಿ ಬೆಂಕಿ ಬಿದ್ದು ಅವಘಡ ಸಂಭವಿಸಿ, ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿತ್ತು.

ಈ ಸಂದರ್ಭದಲ್ಲಿ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಅವರು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಅವರ ಮಳಿಗೆಗೆ ಭೇಟಿ ನೀಡಿ ಅವರಿಗಾದ ತೊಂದರೆಗಳನ್ನು ವೀಕ್ಷಣೆ ಮಾಡಿ ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿಯ ಸಹಕಾರ ಹಾಗು ಎಲ್ಲ ರೀತಿಯ ಸಹಾಯ ನೀಡಲು ಸೂಚಿಸಿದ್ರು.

ಈ ಸಂದರ್ಭದಲ್ಲಿ ಭಾಗದ ಪಾಲಿಕೆ ಸದಸ್ಯರು ಶಂಭು ಸಾಲಿಮನಿ, ಬಿಜೆಪಿ ಮುಖಂಡರು ರವಿ ಯಲಿಗಾರ, ಉದಯ ಯಂಡಿಗೇರಿ ಹಾಗೂ ಸ್ಥಳೀಯ ವ್ಯಾಪಾರಸ್ಥರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button