ಸ್ಥಳೀಯ ಸುದ್ದಿ

ಕಲಿಸಿದ ಗುರುಗಳ ಮನೆ ಮನೆಗೆ ತೆರಳಿ ಶಿಕ್ಷಕರ ದಿನಾಚರಣೆ ಆಚರಿಸಿದ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ

Click to Translate

ಹುಬ್ಬಳ್ಳಿ

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಕಲಿಸಿದ ಗುರುಗಳ ಮನೆ ಮನೆಗೆ ತೆರಳಿ ಸನ್ಮಾನಿಸಿ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಶಿಕ್ಷಕರ ದಿನಾಚರಣೆ ಆಚರಿಸಿದರು.
ಅವರು ಇಂದು ಪ್ರಾಥಮಿಕ ಶಿಕ್ಷಣ ನೀಡಿದ ಹುಬ್ಬಳ್ಳಿ ತಾಲ್ಲೂಕಿನ ಹೆಬಸೂರ ಗ್ರಾಮದಲ್ಲಿರುವ ನಿವೃತ್ತ ಶಿಕ್ಷಕರಾದ ಫಕ್ಕೀರಪ್ಪ ಮೊರಬದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿರುವ ನಿವೃತ್ತ ಶಿಕ್ಷಕರಾದ ಕಪ್ಪತಪ್ಪ ಬೀರಪ್ಪ ಕಳ್ಳಿಮನಿ ಹಾಗೂ ನವಲಗುಂದದಲ್ಲಿ ಹೈಸ್ಕೂಲ ಹಂತದಲ್ಲಿ ಶಿಕ್ಷಣ ನೀಡಿದ ನವಲಗುಂದ ಮಾಡೆಲ್ ಹೈಸ್ಕೂಲ್‌ನ ಮುಖ್ಯೋಧ್ಯಾಪಕರಾದ ಎಸ್.ಎಮ್. ಪಟ್ಟಣಶೆಟ್ಟಿ, ದೈಹಿಕ ಶಿಕ್ಷಕರಾದ ಆರ್.ಬಿ. ಕಮತರ ಹಾಗೂ ಕಾಲೇಜ ಹಂತದ ಶಿಕ್ಷಣ ನೀಡಿದ ನವಲಗುಂದ ಶಂಕರ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಅಂದಿನ ಪ್ರಾಚಾರ್ಯರಾದ ಡಾ: ಬಿ.ಸಿ. ಪೂಜಾರ ಹಾಗೂ ಎಲ್ಲ ಗುರುಗಳ ಮನೆ ಮನೆಗೆ ತೆರಳಿ ವಿಶೇಷ ರೀತಿಯಲ್ಲಿ ಶಿಶ್ಯನಾಗಿ ಶಿಕ್ಷಕರ ದಿನಾಚರಣೆ ಆಚರಿಸಿ ಡಾ: ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆ ನೆನಪಿನ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸುವ ದಿನದಂದು ಕಲಿಸಿದ ಗುರುಗಳ ಆಶೀರ್ವಾದದಿಂದ ವಿದ್ಯಾರ್ಥಿ ಜೀವನದಲ್ಲಿ ಹೋರಾಟ ಮಾಡುತ್ತಾ ವಿದ್ಯಾರ್ಥಿ ನಾಯಕನಾಗಿ ನಿರಂತರವಾಗಿ ರೈತ ಹಾಗೂ ಅಭಿವೃದ್ಧಿಪರ ಹೋರಾಟ ಮಾಡುತ್ತಾ ರೈತ ಬಂಡಾಯದ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ, ಸಂಪುಟ ದರ್ಜೆಯ ಸ್ಥಾನಮಾನದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಮಾಡಲು ಸಂವಿಧಾನ ಬರೆದ ಡಾ: ಬಿ.ಆರ್. ಅಂಬೇಡ್ಕರ ಅವರ ಮಾರ್ಗದರ್ಶನದ ಇತಿಹಾಸ ಒಂದು ಕಡೆ ನನಗೆ ಅಧಿಕಾರ ನೀಡಿದ್ದರೆ ಅದಕ್ಕೆ ನನಗೆ ಶಿಕ್ಷಣ ನೀಡಿ ಎತ್ತರಕ್ಕೆ ಬೆಳೆಸಿ ಸಾರ್ವಜನಿಕ ಜೀವನದಲ್ಲಿ ಸೇವೆ ಮಾಡಲು ಅವಕಾಶ ನೀಡಲು ಕಾರಣರಾದ ಕಲಿಸಿದ ಎಲ್ಲ ಗುರುಗಳನ್ನು ಜೀವನದಲ್ಲಿ ನಾನು ಎಂದೂ ಮರೆಯಲಾರೆ ಎಂದು ಅಪಾರ ಗೌರವದಿಂದ ಶಿಕ್ಷಕರನ್ನು ಎನ್.ಹೆಚ್. ಕೋನರಡ್ಡಿ ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ನವಲಗುಂದ ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಸ್ಥಾಯೀ ಸಮಿತಿ ಚೇರಮನ್, ಸುರೇಶ ಮೇಟಿ, ಸದಸ್ಯರುಗಳಾದ ಜೀವನ ಪವಾರ, ಮಂಜು ಜಾಧವ, ಮಹಾಂತೇಶ ಭೋವಿ, ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಮಜ್ಜಗಿ ಮುಖಂಡರುಗಳಾದ ರಾಮಪ್ಪ ಕಾಲವಾಡ, ನಾರಾಯಣ ನಲವಡಿ, ಚಾಂದುಸಾಬ ನದಾಫ, ಬಸಪ್ಪ ಯರಗುಪ್ಪಿ, ಶಲವಡಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳಿ, ಸಿದ್ದಲಿಂಗಪ್ಪ ಅಂಗಡಿ, ದೇವಪ್ಪ ವಗ್ಗರ, ಶ್ರೀನಿವಾಸ ಮರಡ್ಡಿ, ಮಹಾಂತೇಶ ವಗ್ಗರ, ಅಡಿವೆಪ್ಪ ಕಂಬಳಿ, ರವಿ ಯರಗುಪ್ಪಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button