ಸ್ಥಳೀಯ ಸುದ್ದಿ

ಕುರಿಕಳ್ಳತನ ಆರೋಪಿಯನ್ನು ಎತ್ತಾಕಿಕೊಂಡು ಬಂದ ಪೊಲೀಸರು.

ಧಾರವಾಡ

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕುರಿಕಳ್ಳತನದ ಆರೋಪಿಯನ್ನು ಪೊಲೀಸರು ಹಿಡಿದಿರುವುದು ಇದೀಗ ಸಿಕ್ಕಿ ಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಳ್ಳತನದ ಆರೋಪ ಇರುವವರನ್ನು ಈ ರೀತಿ ಪೊಲೀಸರು ಹಿಡಿತಾರೆ ಎನ್ನುವ ಅನುಮಾನವು ಇದೀಗ ಸಾರ್ವಜನಿಕರಿಗೆ ನಿಜವಾಗಿಬಿಟ್ಟಿದೆ.

ಹಳೆಯದಾದ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಪೊಲೀಸರ ಟೀಂ ಆರೋಪಿಯನ್ನು ಹಿಡಿದಿರುವ ವೀಡಿಯೋ ನೀಜಕ್ಕೂ ಇವರು ಪೊಲೀಸರಾಗಿ ಈ ರೀತಿ ಮಾಡ್ತಾರಲ್ಲಪ್ಪಾ ಎನ್ನುವ ಚರ್ಚೆ ವಿಷಯವಾಗಿ ಎಲ್ಲರಿಗೂ ಸುದ್ದಿಯಾಗಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಈ ಘಟನೆ‌ ನಡೆದಿದೆ.

ಶನಿವಾರ ನಡೆದ ಈ ಪ್ರಕರಣದ ‌ವೀಡಿಯೋ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button