ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಕೊಲೆಯಾಗಿದ್ದ ಗ್ರಾಪಂ ಸದಸ್ಯನ ಪತ್ನಿ “ಪುಷ್ಪಾ ಪಟದಾರಿ” ಆತ್ಮಹತ್ಯೆ!

ಹುಬ್ಬಳ್ಳಿ: ಕೆಲದಿನಗಳ ಹಿಂದೆ ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಪಟದಾರಿಯ ಮೇಲೆ ಗಂಗಿವಾಳ ರಾಯನಾಳ ಗ್ರಾಮದ ನಡುವೆ ರಾತ್ರಿ ವೇಳೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.
ಏತನ್ಮಧ್ಯೆ ಪೊಲೀಸರು ಅದೆ ಗ್ರಾಮದ ಮೇಟಿ ಕುಟುಂಬದ ಐದಾರು ಆರೋಪಗಳನ್ನ ಬಂದಿಸಿ ಜೈಲಿಗೂ ಅಟ್ಟಿದ್ದರು.

ಆದರೆ ಕೊಲೆಯಾದ ದುರ್ದೈವಿಯ ಪತ್ನಿ ಪುಷ್ಪಾ ದೀಪಕ್ ಪಟದಾರಿ ಇದೊಂದು ರಾಜಕೀಯ ಉದ್ದೇಶ ಪೂರ್ವಕವಾಗಿ ನಡೇದ ಕೊಲೆಯಾಗಿದೆ ಎಂದು ಆರೋಪಿಸಿ ಹಲವು ಬಾರಿ ನ್ಯಾಯಕ್ಕಾಗಿ ತನ್ನೇರಡು ಮಕ್ಕಳ ಸಮೇತ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆ ಎದುರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಳು. ಅದರಂತೆ ಇದೆ ಹಳೆಹುಬ್ಬಳ್ಳಿ ಪೊಲಿಸ್ ಠಾಣೆಯ ಪೊಲಿಸರು ಕೂಡ ಕೊಲೆಗೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿ ಪುಷ್ಪಾ ಮತ್ತು ಆಕೆಯ ಮೈದುನ ಸಂಜೈ ಪಟದಾರಿ ಕೆಲವು ದಾಖಲೆಗಳನ್ನು ನೀಡಿದ್ರು. ಅಷ್ಟೆ ಅಲ್ಲದೆ ಎಸಿಪಿ ಆರ್ ಕೆ ಪಾಟೀಲ್ ಬಗ್ಗೆ ನೂ ಅನುಮಾನ ವ್ಯಕ್ತಪಡಿಸಿದ್ದರು.

ಆತ್ಮಹತ್ಯೆ ಮಾಡಿಕೊಂಡ ಪುಷ್ಪಾ ಪಟದಾರಿ!

ಇಷ್ಟರಲ್ಲೆ ಪ್ರಕರಣವನ್ನ ಸಿಒಡಿ ತನಿಖೆಯೂ ಆರಂಭಗೊಂಡಿತ್ತು. ಪ್ರಕರಣದ ಎಲ್ಲದಕ್ಕೂ ಉತ್ತರ ಸಿಗುವ ಮುನ್ನವೆ ದೀಪಕ್ ಸಾವನ್ನು ಅರಗಿಸಿಕೊಳ್ಳದ ಆತನ ಪತ್ನಿ ಮಕ್ಕಳ ಭವಿಷ್ಯದ ಬಗ್ಗೆಯೂ ಯೊಚಿಸದೆ ನವನಗರದ ನಾದಿನಿಯ ಮನೆಯಲ್ಲಿ ನೆಣಿಗೆ ಶರಣಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಎನೆ ಆಗಲಿ ಕೊಲೆಗೆಡುಕರ ಕ್ರೌರ್ಯಕ್ಕೆ ಗ್ರಾಮ ಪಂಚಾಯತಿ ಸದಸ್ಯ ದೀಪಕ್ ಬಲಿಯಾದರೆ ಆತನ ಹಿಂದೆ ಆತನ ಮಡದಿಯೂ ಕೂಡ ಸೂಸೈಡ್ ಮಾಡಿಕೊಂಡದ್ದು ಎಷ್ಟು ಸರಿ.

Related Articles

Leave a Reply

Your email address will not be published. Required fields are marked *

Back to top button