ಸ್ಥಳೀಯ ಸುದ್ದಿ

ತೆನೆ ಬಿಟ್ಟು ಕಮಲದಲ್ಲಿ ಅರಳಿದ ನಾಯಕ

ಧಾರವಾಡ

ಅತ್ಯಂತ ಉತ್ಸಾಹದಿಂದ ಹಾಗೂ ಭಾರಿ ಜಿದ್ದಾಜಿದ್ದಿನ ಮೂಲಕ ರಂಗೇರಿದ್ದ ಚುನಾವಣೆಯಲ್ಲಿ ಹೊರಟ್ಟಿ ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ 4597 ಮತಗಳನ್ನು ಪಡೆದರೆ, ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದ ಬಸವರಾಜ ಹೊರಟ್ಟಿ ಅವರು 9266 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ.


ಒಟ್ಟು 15583 ಮತಗಳ ಪೈಕಿ, 14360 ಮತಗಳು ಚಲಾವಣೆ ಆಗಿವೆ.
ಇದರಲ್ಲಿ 1223 ಮತಗಳು ತಿರಸ್ಕೃತವಾಗಿವೆ.
ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ಗಡದಿನ್ನಿ ಕೆವಲ 223 ಮತಗಳನ್ನು ಪಡೆದು ಹೀನಾಯವಾಗಿ ಸೋತಿದ್ದಾರೆ.
ಒಟ್ಟು 7 ಅಭ್ಯರ್ಥಿಗಳು ಈ ಬಾರಿ ಪಶ್ಚಿಮ ಪದವಿಧರ ಕ್ಷೇತ್ರದಿಂದ ಚುನಾವಣೆ ನಿಂತಿದ್ದರು.
ಹೊರಟ್ಟಿ ಅವರು 8 ನೇ ಬಾರಿಗೆ ಗೆಲವು ಸಾಧಿಸುವ ಮೂಲಕ ತಮಗಿಲ್ಲಾ ಯಾರು ಸರಿಸಾಟಿ ನಾಯಕರು ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button