ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಸರಣಿ ಕಳ್ಳತನ

ಧಾರವಾಡ
ಧಾರವಾಡ ನಗರದಲ್ಲಿ ನಗರದ AFS ಹಾಲ್ ಹತ್ತಿರ ಇರುವ ಅಂಗಡಿಗಳ ಸರಣಿ ಕಳ್ಳತನ ನಡೆದಿದೆ.

ಉಪನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಅಂಗಡಿಗಳಿಗೆ ನುಗ್ಗಿದ ಕಳ್ಳರು ಅಂಗಡಿಯಲ್ಲಿನ ಸಿಗರೇಟ ಪ್ಯಾಕೆಟ್, ಗುಟ್ಕಾ ಪ್ಯಾಕೇಟ್ ಸೇರಿದಂತೆ ಒಟ್ಟು 40 ಸಾವಿರ ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ.

ಕಳ್ಳರು ಕಳ್ಳತನ ಮಾಡಿಕೊಂಡು ಓಡಿ ಹೋಗುವ ವಿಡಿಯೋ
ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಈ ಬಗ್ಗೆ ಉಪನಗರ ಪೊಲೀಸ್ ಠಾಣೆಗೆ ತೆರಳಿ ಕಳ್ಳತನವಾಗಿರುವ ಅಂಗಡಿ ಮಾಲೀಕರು ದೂರು ಕೊಟ್ಟಿದ್ದಾರೆ.