ಸ್ಥಳೀಯ ಸುದ್ದಿ

ಬಸ್ ಚಾಲಕನ ಮಗನಿಗೆ 2 ಚಿನ್ನದ ಪದಕ

ಧಾರವಾಡ

ಧಾರವಾಡದ ಕೃಷಿ ವಿವಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದ್ರು.

ರಾಯಚೂರು ಜಿಲ್ಲೆ ಲಿಂಗಸೂಗುರಿನ ಕೆಎಸ್ಆರ್‌ಟಿ ಸಿ ಚಾಲಕರಾಗಿರುವ ಬಸವರಾಜ ಮತ್ತು ನಾಗರತ್ನ ಅವರ ಮಗನಾದ ಪಿ.ಆನಂದಕುಮಾರ್ ಅವರು ಬಿ.ಎಸ್ಸಿ ಕೃಷಿ ಪದವಿಯನ್ನು 9.407 OGPA ಅಂಕಗಳನ್ನು ಗಳಿಸಿ, ಎರಡು ಚಿನ್ನದ ಪದಕಗಳೊಂದಿಗೆ ತೇರ್ಗಡೆಯಾಗಿ.2021-22 ನೇ ಸಾಲಿನ ಚಿನ್ನದ ಹುಡುಗನಾಗಿ ಹೊರಹೊಮ್ಮಿದ್ದಾರೆ.

ಪಿಯುಸಿ ಯಲ್ಲಿ ಶೇ. 97 ಅಂಕಗಳನ್ನು ಗಳಿಸಿದ್ದರು.

35 ನೇ ಘಟಿಕೋತ್ಸವದಲ್ಲಿ ಕೃಷಿ ವಿವಿ ಸ್ವರ್ಣ ಪದಕ, ಸೀತಾರಾಮ್ ಜಿಂದಾಲ್ ಫೌಂಡೇಷನ್ ಸ್ವರ್ಣ ಪದಕವನ್ನು ಪಡೆದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಸಿವಿಲ್ ಸರ್ವಿಸ್ ತರಬೇತಿಯನ್ನು ಪಡೆಯುತಿದ್ದಾರೆ. ಗ್ರಾಮೀಣಾಭಿವೃದ್ಧಿ ವಿಷಯದೊಂದಿಗೆ ನಾಗರಿಕ ಸೇವಾ ಪರೀಕ್ಷೆ ಪಾಸು ಮಾಡುವುದು ನನ್ನ ಆಶಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button