ಸ್ಥಳೀಯ ಸುದ್ದಿ

ಬಾಲ ಸೇವಾ ಯೋಜನೆಯಡಿ ಲ್ಯಾಪ್‍ಟಾಪ್ ವಿತರಣೆ

ಧಾರವಾಡ

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಪೋಷಕರ ಕುಟುಂಬದ ಸದಸ್ಯರ ಆರೈಕೆಯಲ್ಲಿ ಪಾಲನೆ, ಪೋಷಣೆ ಮತ್ತು ರಕ್ಷಣೆ ಪಡೆಯುತ್ತಿದ್ದ ಜಿಲ್ಲೆಯ ನವಲಗುಂದ ತಾಲೂಕಿನ ಮಲ್ಲಿಕಾರ್ಜುನ ಶಿವಯೋಗಿಸ್ವಾಮಿ ಮರಕುಂಬಿಮಠ ಬಾಲಕನು ಎಸ್.ಎಸ್.ಎಲ್.ಸಿ ಮುಗಿಸಿ ಐ.ಟಿ.ಐ. ಶಿಕ್ಷಣ ಪಡೆಯುತ್ತಿದ್ದಾರೆ.

ಬಾಲಸೇವಾ ಯೋಜನೆಯಡಿ ಲ್ಯಾಪ್‌ಟಾಪ್‌‌ನ್ನು ಈ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಕಮಾಲಾ ಬೈಲೂರ, ರಕ್ಷಣಾಧಿಕಾರಿಗಳಾದ ಅಶ್ವಿನಿ ಉಳ್ಳಿಗೇರಿ, ಪ್ರಕಾಶ ಕೊಡ್ಲಿವಾಡ ಹಾಗೂ ಕಾವ್ಯ ಗಾಳಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button