ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಬೇಂದ್ರೆ ಬಸ್ ಚಾಲಕನ ಅವಾಂತರಕ್ಕೆ ಬೈಕ್ ಗಳ ಬಲಿ!

ಹುಬ್ಬಳ್ಳಿ

ಬಸ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಪಕ್ಕದಲ್ಲಿನ ಎರಡು ಬೈಕ್ ಗಳನ್ನು ಜಖಂಗೊಳಿಸಿದ ಘಟನೆ ಉಣಕಲ್ ಬಳಿ ನಡೆದಿದೆ.

ನಗರ ಬೇಂದ್ರೆ ಸಾರಿಗೆ ಬಸ್ಸೊಂದು ಧಾರವಾಡದಿಂದ ಹುಬ್ಬಳ್ಳಿಯ ಕಡೆ ಹೊರಟಿತ್ತು. ಈ ವೇಳೆ ಬಸ್ ಚಾಲಕನಾದ
ಬಸವರಾಜ ಶಾಂತಪ್ಪ ಕುಂದಗೋಳ (35) ಎಂದು ಗುರಿಸಲಾಗಿದೆ.

ಉಣಕಲ್ ಗಾರ್ಡನ್ ಗೆಟ್ ಎದುರಿನ ಹುಬ್ಬಳ್ಳಿ ರಸ್ತೆ ಮಾರ್ಗ ವಾಗಿ ಹೊರಟಿದ್ದ ಬಸ್ ಚಾಲಕನು ಮೂರ್ಛೆ ಹೋದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ಎಡಬದಿಯಲ್ಲಿ ನಿಲ್ಲಿಸಲಾದ ವಾಹನಗಳ ಮೇಲೆ‌ ಹರಿದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಚಾಲಕನ ಸ್ಥಿತಿ ಕಂಡು ಸಾರ್ವಜನಿಕರೆ ಆಟೋದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪೊಲಿಸರು ಸ್ಥಳ ಪರಿಸಿಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆದ್ರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್ ಚಾಲಕರ ಆರೋಗ್ಯ ತಪಾಸಣೆ ಸೆರಿದಂತೆ ಹಲವು ಮುಂಜಾಗೃತಾ ಕ್ರಮ ಕೈಗೊಂಡರೆ ಮತ್ತಷ್ಟು ಅಪಘಾತ ತಡೆಯ ಬಹುದು.
ಇಲ್ಲವಾದಲ್ಲಿ ಅವಳಿನಗರದಲ್ಲಿ ಗಂಭೀರ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ಎನಂತಿರಿ!

Related Articles

Leave a Reply

Your email address will not be published. Required fields are marked *

Back to top button