ಸ್ಥಳೀಯ ಸುದ್ದಿ

ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟನೆ

ಧಾರವಾಡ

ಮಕ್ಕಳಲ್ಲಿ ವ್ಯವಹಾರಿಕ ಅಧ್ಯಯನ ಮೂಡಿಸುವ ಸಲುವಾಗಿ‌ ಧಾರವಾಡ ರಂಗಾಯಣದಲ್ಲಿ ಬೇಸಿಗೆ ಶಿಬಿರ ಆಯೋಜಿಸಿದ್ದು, ರವಿವಾರದ‌ ದಿನ ಮಕ್ಕಳ ಸಂತೆ‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಮಕ್ಕಳ ಸಂತೆಯನ್ನು ಖ್ಯಾತ ಹಿರಿಯ ವಕೀಲರಾದ ಶ್ರೀ ಅರುಣ ಜೋಶಿ ಅವರು ಉದ್ಘಾಟನೆ ಮಾಡಿದ್ರು. ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕರಾದ ಶ್ರೀ ರಮೇಶ ಪರವೀನಾಯ್ಕ್ ಅವರು‌ ಉಪಸ್ಥಿತರಿದ್ದರು.

ಮಕ್ಕಳ ವ್ಯವಹಾರಿಕ ಜ್ಞಾನವನ್ನು ಅರಿತ ಪೋಷಕರು ತಮ್ಮ ಮಕ್ಕಳು ಹೀಗೂ ಇದ್ದಾರೆ ಎನ್ನುವುದನ್ನು ನೋಡಿ ಖುಷಿ ಪಟ್ಟರು.

ಮಕ್ಕಳ ಸಂತೆಯಲ್ಲಿ ಮಕ್ಕಳ ನಡೆ ಹಳ್ಳಿಯ ಕಡೆ ಎನ್ನುವ ಕಲ್ಪನೆ ಹೆಚ್ಚಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ‌ ಹಿರಿಯ ವಕೀಲರಾದ ಅರುಣ ಜೋಶಿ ಅವರು, ಇಂದಿನ ದಿನಗಳಲ್ಲಿ ಫಿಜ್ಜಾ ಬರ್ಗರ್ ತಿನ್ನುವ ಮಕ್ಕಳು ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಆಹಾರದ ಪದ್ಧತಿ ಕಡೆಗೆ ಹೆಚ್ಚಿನ ಆದ್ಯತೆ ಕೊಟ್ಟು ಆರೋಗ್ಯವನ್ನು‌ ಸಧೃಡವಾಗಿ ಮಾಡಿಕೊಳ್ಳಬೇಕು. ಇಂದಿನ ಮಕ್ಕಳೇ ನಾಡಿನ ಭವ್ಯ‌ ಪ್ರಜೆಗಳು ಎಂದು ಹೇಳಿದ್ರು.

ಬಹಳಷ್ಟು ಮಂದಿ‌ ಪೋಷಕರು ತಮ್ಮ ಮಕ್ಕಳು ಪಾಲ್ಗೊಂಡಿದ್ದ ಸಂತೆಯಲ್ಲಿ ಖರೀದಿ ಮಾಡಿ ಸಂತೆಯನ್ನು ಯಶಸ್ವಿಗೊಳಿಸಿದ್ರು..

Related Articles

Leave a Reply

Your email address will not be published. Required fields are marked *

Back to top button