ಸ್ಥಳೀಯ ಸುದ್ದಿ

ಹಾಡ ಹಗಲೆ ಕಳ್ಳತನ ಮಾಡಿದ್ದ ಕುಖ್ಯಾತ ಕಳ್ಳ ಗೊಪ್ಯಾ ಮತ್ತವನ ಸಹಚರರ ಬಂಧನ

ಕಲಘಟಗಿ‌

ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಯೊಂದರ ಹಗಲಿನ ಸಮಯದಲ್ಲಿ ಕಳ್ಳತನ‌ ಮಾಡಿ ಪೊಲಿಸರಿಗೆ ಚಾಲೆಂಜ್ ಮಾಡಿದ್ದ. ಪ್ರಕರಣವನ್ನು ಪತ್ತೆ ಹಚ್ಚುವ ಮೂಲಕ ಕುಖ್ಯಾತ ಕಳ್ಳರನ್ನು ಹೆಡೆ ಮುರಿ ಕಟ್ಟುವಲ್ಲಿ ಕಲಘಟಗಿ ಪೊಲೀಸರ ತಂಡ ಯಶಸ್ವಿಯಾಗಿದ್ದು 10 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ನಿಜ.. ಕಲಘಟಗಿಯಲ್ಲಿ ಕಳೆದ ವಾರ18-04-2022 ರಂದು ನಡೆದ ಘಟನೆ ನಡೆದಿದೆ.

ಇ ಕುರಿತು ಕಲಘಟಗಿ ಪಟ್ಟಣದ ಗಾಂಧಿನಗರದ ನಿವಾಸಿ ವಾಮನರಾವ್ ದೇಶಪಾಂಡೆ ಎಂಬುವವರಿಗೆ ಸೇರಿದ ಮನೆಯಲ್ಲಿ ಭಾರಿ ಪ್ರಮಾಣದ ನಗದು
,ಚಿನ್ನಾಭರಣ ದೋಚಿದ್ದ ಹುಬ್ಬಳ್ಳಿ ಮೂಲದ 3 ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಎಸ್ಪಿ ಕೃಷ್ಣಕಾಂತ್, ಡಿವೈಎಸಪಿ ಸಂಕದ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಸಿಪಿಐ ಪ್ರಭು ಸುರಿನ ಹಾಗೂ ಅವರ ತಂಡ ಇ ಮೂವರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದು ರಾಜ್ಯದ ಹಲವು ಠಾಣೆಗಳಲ್ಲಿ ಇವರ ವಿರುದ್ಧದ ಕಳ್ಳತನದ ಅಪರಾಧ ಕೃತ್ಯ ಗಳಿರುವ ಸಾಧ್ಯತೆ ಇದ್ದು ಆರೋಪಿಗಳನ್ನು ಬಂಧಿಸಿದ್ದಾರೆ.

ಆದರೆ ಬಂಧಿತರಲ್ಲಿ ಪ್ರಮುಖ ನಾಗಿರುವ ಆನಂದ ನಗರದ ನಿವಾಸಿ ಕಳ್ಳ ಗೋಪಾಲ್@ಗೋಪ್ಯಾ ವಾಲ್ಮೀಕಿ,ಮತ್ತು ಹಸನ ಬೇಗ ಹಾಗೂ ನಾಸೀರ ಮಂಡಲ ಎಂಬುವವರನ್ನ ಬಂದಿಸಿದ್ದು ಇವರು ಮೂಲತಃ ಹುಬ್ಬಳ್ಳಿ ಮೂಲದವರಾಗಿದ್ದಾರೆ.

ಘಟನೆಯ ಎರಡ್ಮೂರು ದಿನದ ಅಂತರದಲ್ಲಿ ಆರೋಪಿಗಳನ್ನು ಕಂಬಿಯ ಹಿಂದೆ ನಿಲ್ಲಿಸಿದ್ದಕ್ಕೆ. ಹಣ ಕಳೆದುಕೊಂಡಿದ್ದ ಕುಟುಂಬದವರು ಕಲಘಟಗಿ ಠಾಣೆಯ ಸಿಪಿಐ ಅವರಿಗೆ ಕೃತಜ್ಞತೆ ‌ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button