ಸ್ಥಳೀಯ ಸುದ್ದಿ
ಯುವತಿಯ ತಂದೆಯಿಂದ ಯುವಕನಿಗೆ ಚಾಕುವಿನಿಂದ ಇರಿತ

ಧಾರವಾಡ
ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಅಪ್ಪ ಚಾಕುವಿನಿಂದ ಇರಿದ ಘಟನೆ ಧಾರವಾಡದ ಸೈದಾಪೂರದ ಓಣಿ ಅಂಬಾಭವಾನಿ ಗುಡಿಯ ಹತ್ತಿರ ನಡೆದಿದೆ.

ಶ್ರೀಕಾಂತ ಬಡಿಗೇರ ಎನ್ನುವನಿಂದ ಯುವಕನಿಗೆ ಚಾಕು ಇರಿತವಾಗಿದೆ.
ಶಶಾಂಕ ಮೂಗನ್ನವರ ಎಂಬ ಯುವಕನಿಗೆ ಚಾಕು ಇರಿತಕ್ಕೊಳಗಾಗಿ, ಚಾಕು ಇರಿತದ ಪರಿಣಾಮ ಯುವಕನ ಹೊಟ್ಟೆಯಲ್ಲಿನ ಕರುಳು ಹೊರಗೆ ಬಂದಿದ್ದು, ತಕ್ಷಣೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಯುವಕನ್ನು ರವಾನೆ ಮಾಡಲಾಗಿದೆ.
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.