ಸ್ಥಳೀಯ ಸುದ್ದಿ

ಗುತ್ತಿಗೆದಾರನಿಂದ ರಸ್ತೆಯ ಕಳಪೆ ಕಾಮಗಾರಿ ಸಾರ್ವಜನಿಕರ ಹಿಡಿಶಾಪ

ಧಾರವಾಡ

ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ಧಾರವಾಡದ ಕ್ಲಾಸ್ 1 ಕಾಂಟ್ರಾಕ್ಟರ್ ತರಾತುರಿಯಲ್ಲಿ ಮಾಡಿದ ರಸ್ತೆ ಕಾಮಗಾರಿ ಇದು.

ಶರಣಪ್ಪ ಸವಡಿ ಎನ್ನುವ ಗುತ್ತಿಗೆದಾರ ಈ‌ ರಸ್ತೆ ನಿರ್ಮಾಣದ ಗುತ್ತಿಗೆ ನೋಡಿಕೊಂಡಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ರಸ್ತೆ ಕಾಮಗಾರಿ ಇದು.

ಮಾಳಾಪೂರದ AFS ಹಾಲ್ ಮುಂಭಾಗದಿಂದ ಎತ್ತಿನಗುಡ್ಡವರೆಗೂ ಇರುವ ಡಾಂಬರ್ ರಸ್ತೆ ಇದು.

ಸುಮಾರು 2 ವರೆ ಕಿ.ಮೀ ಉದ್ದದ ಈ ರಸ್ತೆ ಮೊದಲು ಸಿಮೆಂಟ್ ರಸ್ತೆ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ 2 ವರೆ ಕೋಟಿ ಅನುದಾನ ಮೀಸಲಿಡಲಾಗಿತ್ತು.

ನಂತರದಲ್ಲಿ ಇದನ್ನು ಡಾಂಬರ್ ರಸ್ತೆ ಮಾಡಲಾಗಿದೆ. ಅದು ಕೂಡ ಕೆವಲ 3 ತಿಂಗಳಲ್ಲಿ ಕಳಪೆಯಾಗಿದೆ ಎಂದು ಆಗಿರುವ ಡಾಂಬರಿಕರಣದಿಂದ ಗೊತ್ತಾಗಿದೆ.

ಈ ರಸ್ತೆ ಕಾಮಗಾರಿ ಅವ್ಯವಸ್ಥೆ ಎಷ್ಟರಮಟ್ಟಿಗೆ ಇದೆ ಎಂದ್ರೆ ಗುತ್ತಿಗೆ ಪಡೆದ ಗುತ್ತಿಗೆದಾರ ರಸ್ತೆಯ 2 ಬದಿಗಳಲ್ಲಿ ಗಟಾರ ನಿರ್ಮಿಸಿದೇ ಒಂದೇ ಭಾಗದಲ್ಲಿ ಗಟಾರ ನಿರ್ಮಾಣ ಮಾಡಿದ್ದಾರೆ. ಅದು ಸಹ ಪೂರ್ತಿಯಾಗಿಲ್ಲಾ.‌

ಈ ಸಮಸ್ಯೆಯನ್ನು ಇದೀಗ ಗುತ್ತಿಗೆದಾರ ಯಾವ ರೀತಿ ‌ಬಗೆಹರಿಸಿ‌‌ ಮಾಡಿದ ತಪ್ಪಿಗೆ ಪುನ: ರಸ್ತೆ ರಿಪೇರಿ ಮಾಡಿಕೊಡ್ತಾರೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

Related Articles

Leave a Reply

Your email address will not be published. Required fields are marked *

Back to top button