ಸ್ಥಳೀಯ ಸುದ್ದಿ
ವಿದ್ಯುತ್ ಅವಘಡ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ಸಾವು
ಕಲಬುರಗಿ: ವಿದ್ಯುತ್ ತಗುಲಿದ ಪರಿಣಾಮ ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟು, ತಂದೆ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದ ಧನಗರ ಗಲ್ಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಝರಣಮ್ಮ (45), ಮಹೇಶ (18), ಸುರೇಶ (20) ಮೃತ ದುರ್ದೈವಿಗಳಾಗಿದ್ದಾರೆ.ನಿನ್ನೆ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ವಿದ್ಯುತ್ ತಂತಿ ಕಡಿದು ನೆಲಕ್ಕೆ ಬಿದ್ದಿತ್ತು. ರಾತ್ರಿ ಮಳೆ ಜೋರಾದಾಗ ದನಗಳನ್ನು ಆಶ್ರಯಕ್ಕೆ ಸ್ಥಳಾಂತರಿಸಲು ಕುಟುಂಬ ತೆರಳಿತ್ತು. ಬಾಗಿಲೆದುರು ನಿಂತಿದ್ದ ನೀರಿನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದು ವಿದ್ಯುತ್ ಪಸರಿಸಿತ್ತು.ಈ ವೇಳೆ ರಾತ್ರಿ ಮನೆಯಿಂದ ಹೊರ ಬಂದ ನಾಲ್ವರಿಗೂ ವಿದ್ಯುತ್ ಶಾಕ್ ಪ್ರವಹಿಸಿ ತಾಯಿ ಮತ್ತು ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತಂದೆ ಅಂಬಣ್ಣನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.