ಸ್ಥಳೀಯ ಸುದ್ದಿ
ಸಹೋದರಿ ಕೊಲೆ ಯತ್ನ ಮಾಡಿದ ಸಹೋದರ

ಧಾರವಾಡ
ಹುಬ್ಬಳ್ಳಿ ಗುರೂಜಿ ಕೊಲೆ ಯತ್ನದ ನೆನಪು ಮಾಸುವ ಮುನ್ನವೆ ಮತ್ತೊಂದು ಭೀಕರ ಕೊಲೆ ಯತ್ನ ನಡೆದಿದೆ.
ಭೀಕರ ಕೊಲೆ ಯತ್ನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡದ ಮೆಹಬೂಬನಗರದಲ್ಲಿ ಈ ಘಟನೆ ನಡೆದಿದೆ.
ಹಾಡಹಗಲು ಸಹೋದರಿಗೆ ಸುತ್ತಿಗೆಯಿಂದ ಹೊಡೆದುಕೊಲೆ ಯತ್ನ ಮಾಡಿದ್ದಾನೆ ಸಹೋದರ.
ಇಕ್ಬಾಲ್ ಕುಂದಗೋಳ ಕೊಲೆ ಯತ್ನ ಮಾಡಿದ ಆರೋಪಿಯಾಗಿದ್ದು,
ಫಾತೀಮಾ ಎನ್ನುವ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಸ್ಥಳೀಯರ ಸಹಕಾರದಿಂದ ಬಚಾವಾದ ಸಹೋದರಿಯನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲು ಮಾಡಲಾಗಿದೆ.
ಹಣಕಾಸಿನ ವಿಷಯಕ್ಕೆ ಸಹೋದರಿಗೆ ಈ ಕೊಲೆ ಯತ್ನ ನಡೆದಿದೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು,
ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.