ಸ್ಥಳೀಯ ಸುದ್ದಿ

midnight sand mafiya in Dharwad

ಧಾರವಾಡ

ಧಾರವಾಡದಲ್ಲಿ ಇಲ್ಲಿಯವರೆಗೂ ಅಕ್ರಮ ಮರಳು ದಾಸ್ತಾನು ಎಗ್ಗಿಲ್ಲದೇ ನಡೆಯುತ್ತಿದ್ದು, ಪವರ್ ಸಿಟಿ ನ್ಯೂಸ್ ಕನ್ನಡ ಈ ಬಗ್ಗೆ ವಿಸ್ತ್ರತವಾಗಿ ವರದಿ‌ ಮಾಡುತ್ತಲೇ ಇದೆ.

ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ವರದಿ ಎಫೆಕ್ಟ್ ಆಗಿದ್ದು, ಅಕ್ರಮ ಮರಳಿನ ದಾಸ್ತಾನಿನ ಕೇಂದ್ರಗಳ ಮೇಲೆ ರೇಡ್ ಆಗಿದೆ.

ಧಾರವಾಡದ ನಗರದಲ್ಲಿ ಬಹುತೇಕ ಮಂದಿ ಮರಳಿನ ದಾಸ್ತಾನು ಮಾಡುವ ಲೈಸೆನ್ಸ ಪರವಾನಿಗೆ ಹೊಂದಿಲ್ಲದೇ ಇರುವುದು ಹಾಗೂ ಉಳಿದೆಲ್ಲವೂ ಅಕ್ರಮವಾಗಿ ನಡೆಯುತ್ತಿವೆ ಎನ್ನುವ ಸತ್ಯ ಇದೀಗ ಬಹಿರಂಗವಾಗಿದೆ.

ನಗರದಲ್ಲಿ ಸವದತ್ತಿ ರಸ್ತೆಗೆ 3 ಅಕ್ರಮ ದಾಸ್ತಾನಿನ ಕೇಂದ್ರಗಳು,
ರಾಜ್ಯ ಹೆದ್ದಾರಿ ಕಮಾನ್ ಮುಂದೆ ,
ರೇಣುಕಾನಗರದ ಮುಂದೆ 1, ಹಾಗೂ ವೀರಭದ್ರೇಶ್ವರ ಟ್ರೇಡರ್ಸ ಅಂಗಡಿ ಮುಂದೆ ಅಕ್ರಮ ಮರಳಿನ ದಾಸ್ತಾನು, ಇದರ ಜೊತೆ ಜೊತೆಗೆ ತೇಜಸ್ವಿ ನಗರದಲ್ಲಿ 3 ,ಧಾರವಾಡದಿಂದ ಹೆಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯೆದಲ್ಲಿ 4 ಅಕ್ರಮ ಮರಳಿನ ದಾಸ್ತಾನುಗಳು, ಹಾಗೂ ಕೆಲಗೇರಿ ರಸ್ತೆಯಲ್ಲಿ ರಾಜಕೀಯ ವ್ಯಕ್ತಿಯೊಬ್ಬರ ಮನೆ ಮುಂದೆ ಒಂದು ಪಾಯಿಂಟ್ ಇದೆ.

ಇಲ್ಲಿ ಕಾನೂನಿನ ಪ್ರಕಾರ ಮರಳನ್ನು ಹೊರ ಜಿಲ್ಲೆಯಿಂದ ನೇರವಾಗಿ ತಂದ್ರೂ ಕೂಡ ಗ್ರಾಹಕರಿಗೆ ಕೊಡಬೇಕು ಅದನ್ನು ‌ಸ್ಟಾಕ್ ಮಾಡುವ ಕೆಲಸ ಯಾರೂ ಕೂಡ ಮಾರಬಾರದು ಹಾಗೇನಾದ್ರೂ ಮಾಡಿದ್ದೆ ಆದ್ರೆ ಇದು ಕಾನೂನು .

ಈ ಅಕ್ರಮ ಮರಳು ಸಾಗಾಟ ಮಾಡುವವರು ಮಿಡನೈಟ್ ಆಪರೇಶನ್ ಶುರು ಮಾಡಿದ್ದಾರೆ.

ರಾತ್ರಿ 1 ಕ್ಕೆ ನಗರದಲ್ಲಿ ವಾಹನಗಳು ತಿರುಗಾಡುತ್ತವೆ. ಇದಾದ ಮೇಲೆ ಬೆಳ್ಳಿಗ್ಗೆ 5 ರ ಸುಮಾರಿಗೆ ಮರಳಿನ ಟಿಪ್ಪರಗಳು ಮನೆ ಮುಂದೆ ಬಂದು ಮರಳು ಬಿಟ್ಟು ಹೋಗುತ್ತವೆ.

(ಮಿಡನೈಟ್ ಮರಳು ದಂಧೆ)

ಇದರಲ್ಲಿ ಕೆಲವರಿಗೆ (mm) ಹೋಗುತ್ತೆ ಎನ್ನುವ ಮಾತುಗಳು ಸತ್ಯವಾಗಿದ್ದು, ಒಂದು ಟಿಪ್ಪರ್ ವಾಹನಕ್ಕೆ (ಕೆಲವೊಂದು ಕಡೆಗಳಲ್ಲಿ ಬೇರೆ ಬೇರೆ ರೀತಿಯಾದ mm) ಕೊಟ್ಟು ಈ ದಂಧೆ ನಡೆಸುತ್ತಾರೆ.

ಇಷ್ಟೆಲ್ಲಾ ಇದ್ದರೂ ಧಾರವಾಡದ ಜಿಲ್ಲೆಯ ಹಿರಿಯ ಅಧಿಕಾರಿಯಾದ ಚಂದ್ರಶೇಖರ , ಹಾಗೂ ಮಹೇಶಗೌಡ ಅವರು ಏನನ್ನು ಕ್ರಮ ಕೈಗೊಳ್ಳದೇ ಇರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಇದಕ್ಕೆ ಅಧಿಕಾರಿಗಳು ಕೂಡ ಸಾಥ್ ಕೊಡುತ್ತಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ.

ಇಷ್ಟೆಲ್ಲಾ ಅಕ್ರಮ ನಡೆಯುವ ಬಗ್ಗೆ ಮಾಧ್ಯಮದವರಿಗೆ ಗೊತ್ತಾಗುತ್ತೆ ಆದ್ರೆ ಅಧಿಕಾರಿಗಳಿಗೆ ಏಕೆ ಗೊತ್ತಿಲ್ಲ ಎನ್ನುವುದು ಮಾತ್ರ ಕಳ್ಳ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಎನ್ನುವ ಕಥೆಯ ಹಾಗೆ ಆಗಿದೆ.

Related Articles

Leave a Reply

Your email address will not be published. Required fields are marked *

Back to top button