ಸ್ಥಳೀಯ ಸುದ್ದಿ

ಹಾರೋಬೆಳವಡಿಯಲ್ಲಿ ಶಿವಲೀಲಾ ಕುಲಕರ್ಣಿ ಭರ್ಜರಿ ರೋಡ್ ಶೋ

ಧಾರವಾಡ

ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಬೇಟೆ ನಡೆಸಿದರು.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದು, ಅವರ ಪರವಾಗಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಹಾರೋಬೆಳವಡಿ ಗ್ರಾಮದಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ಶಿವಲೀಲಾ ಅವರ ಮೆಲೆ ಹಾರೋಬೆಳವಡಿ ಗ್ರಾಮದ ಯುವಪಡೆ ಪುಷ್ಪಮಳೆ ಸುರಿಸುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು.

ಈ ವೇಳೆ ಮಾತನಾಡಿದ ಶಿವಲೀಲಾ ಕುಲಕರ್ಣಿ, ಹಾರೋಬೆಳವಡಿ ಗ್ರಾಮದ ಧಾರವಾಡ ಜಿಲ್ಲೆಯ ಕಟ್ಟಕಡೆಯ ಗ್ರಾಮ. ಈ ಗ್ರಾಮ ಸಾಕಷ್ಟು ಅಭಿವೃದ್ಧಿ ಕಾಣಬೇಕಿತ್ತು. ಆದರೆ, ಈ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಬಿಜೆಪಿ ಶಾಸಕರ ಕಾರ್ಯವೈಖರಿ ಐದು ವರ್ಷಗಳ ಕಾಲ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರ ಕಾರ್ಯವೈಖರಿಗೆ ಬೇಸತ್ತವರೇ ಹೆಚ್ಚು ಎಂದರು.

ಈ ಬಾರಿಯ ಚುನಾವಣೆಯಲ್ಲಿ ವಿನಯ್ ಕುಲಕರ್ಣಿಯವರ ಗೆಲುವು ನಿಶ್ಚಯವಾಗಿದೆ. ಹೀಗಾಗಿಯೇ ಕಸಿವಿಸಿಗೊಂಡಿರುವ ಬಿಜೆಪಿ ನಾಯಕರು ನಮ್ಮ ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ನಡೆಸುವ ಮುಖಾಂತರ ನಮ್ಮನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಏನೇ ಹುನ್ನಾರ ಮಾಡಿದರೂ ಈ ಬಾರಿ ವಿನಯ್ ಕುಲಕರ್ಣಿಯವರ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಹಾರೋಬೆಳವಡಿ ಗ್ರಾಮದ ರೋಡ್ ಶೋ ನಂತರ ಶಿವಲೀಲಾ ಕುಲಕರ್ಣಿಯವರು ಕಬ್ಬೇನೂರು ಹಾಗೂ ಕಲ್ಲೆ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸುವ ಮೂಲಕ ವಿನಯ್ ಕುಲಕರ್ಣಿ ಪರ ಮತಯಾಚನೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button