ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಸರಿಯಾಗಿ ಪಾಲನೆಯಾಗದ ಸಿಎಂ ಆದೇಶ

ಧಾರವಾಡ

ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ರೈತಾಪಿ ವರ್ಗ ಬಡ ಕುಲಿಕಾರ್ಮಿಕರು ಕಂಗಾಲಾಗಿ ಹೋಗಿದ್ದು, ಇತ್ತ ಮನೆಯನ್ನು ಕಳೆದುಕೊಂಡು ಚಿಂತಾಕ್ರಾಂತವಾಗಿ ಕುಳಿತಿದ್ದಾರೆ.

ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇತ್ತೀಚಿ ಒಂದು ಪರಿಷ್ಕೃತ ಆದೇಶ ಮಾಡಿದ್ದು ಈ ಆದೇಶ ಬಹುಪಾಲು ಧಾರವಾಡ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಆಗಿದೆ.

ಈ ಆದೇಶದಲ್ಲಿ ಏನಿದೆ ಎಂದ್ರೆ ಬಹುತೇಕ ಮನೆಗಳು 2019 ರಲ್ಲಿ ಬಿದಿದ್ದು, ಅವುಗಳಿಗೆ ಸಿ* ಕೆಟಗರಿ ಅಂತಾ ಈಗಾಗಲೇ 50 ಸಾವಿರ ಪರಿಹಾರ ಕೊಡಲಾಗಿದೆ.

ಲಕಮಾಪೂರ ಗ್ರಾಮದಲ್ಲಿ ಬಿದ್ದ ಮನೆಗಳು ಸಧ್ಯದ‌ ಚಿತ್ರಣ ಇವು…

ಉಳಿದಂತೆ ಹೆಚ್ಚುವರಿಯಾಗಿ ಅಕಾಲಿಕ ಮಳೆಯಿಂದ ಮನೆಗಳು ಬಿದ್ದರೆ ಬಡಕುಟುಂಬದ ಜನರಿಗೆ ಆರ್ಥಿಕ ನೆರವಾಗಿ ಸೂರು ಒದಗಿಸಿಕೊಡಲು A ಕೆಟಗರಿ B ಕೆಟಗರಿ ಮಾಡಿಕೊಟ್ಟು ಪರಿಹಾರ ದೊರಕಿಸಿ ಕೊಡಿ ಎಂದು ಆದೇಶ ಮಾಡಿದ್ದಾರೆ ಸಿಎಂ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಅವರು.

ಆದ್ರೆ ಧಾರವಾಡ ಜಿಲ್ಲೆಯಲ್ಲಿ ಕೆಲವು ಮಾತ್ರ ಕಂದಾಯ ಅಧಿಕಾರಿಗಳು ಮಾಡಿದ ಯಟವಟನಿಂದ ಇದೀಗ ನಿಜವಾದ ಫಲಾನುಭವಿಗಳಿಗೆ ಪರಿಹಾರವೂ ಸರಿಯಾಗಿ ಸಿಗುತ್ತಿಲ್ಲಾ.

ಸಿ ಕೆಟಗರಿಯಲ್ಲಿ ಪರಿಹಾರ ಸಿಕ್ಕಂತಹ ನಿಜವಾದ ಫಲಾನುಭವಿಗಳು 2 ವರ್ಷದಿಂದ ಪೂರ್ಣ ಬಿದ್ದಿರುವ ಮನೆಗಳನ್ನು ಕಟ್ಟಿಕೊಳ್ಳಲಾಗದೇ, ತಗಡಿನ ಶೆಡಗಳಲ್ಲಿ ಹಾಗೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಉದಾಹರಣೆ ಸಮೆತ ಹೆಸರಿನ ಸಮೇತ ಪವರ ಸಿಟಿ ನ್ಯೂಸ ಕನ್ನಡ ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಿ ಜಿಲ್ಲಾಡಳಿತದ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ ನೀವೇ ನೋಡಿ..

ಇತ್ತೀಚಿಗೆ ಸುರಿದ ಅಕಾಲಿಕ ಮಳೆಗೆ ಹಾಗೂ ಈ ಹಿಂದೆ ಆದ ಮಳೆಗೂ ಕೂಡ ಧಾರವಾಡ ತಾಲೂಕಿನ ಯಾದವಾಡ ಹಾಗೂ ಲಕಮಾಪೂರ ಗ್ರಾಮಗಳಲ್ಲಿ ಮನೆಗಳು ಪೂರ್ಣ ಪ್ರಮಾಣದಲ್ಲಿ ಬಿದ್ದರೂ ಸಹಿತ ಕೆವಲ *ಸಿ ಕೆಟಗರಿ ಹಾಕಿ ರೈತರಿಗೆ ಪರಿಹಾರದ ಹಣ ದೊರಕದಂತೆ ಮಾಡಿದ್ದಾರೆ.

ಈ ಬಗ್ಗೆ ನೊಂದಿರುವ ಜನರು ನಾಳೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂದೆ ದಾಖಲಾತಿಗಳ ಸಮೇತ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಪವರ್ ಸಿಟಿ‌ನ್ಯೂಸ್ ಕನ್ನಡದ ಹತ್ತಿರ ಇನ್ನು ಇಂತಹದೇ ಸಾಕಷ್ಟೂ ಉದಾಹರಣೆ ಮನೆ ಬಿದ್ದು ಸೂಕ್ತ ಪರಿಹಾರ ಸಿಗದೇ ಇರುವ ಲಿಸ್ಟ ಕೂಡ ಇದೆ.

ಈ ಅತಿದೊಡ್ಡ ಸಮಸ್ಯೆಯನ್ನು ಜನಪ್ರೀಯ ಧಾರವಾಡ‌ದ ಜಿಲಾಧಿಕಾರಿ‌ ನಿತೇಶ ಪಾಟೀಲ್ ಯಾವ ರೀತಿ ಬಗೆಹರಿಸಿಕೊಡ್ತಾರೆ ಎ‌ನ್ನುವುದನ್ನು ರೈತರು ಎದುರು‌ ನೋಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button