ಚಿತ್ರದುರ್ಗ

ಬತ್ತಿದ ಬೋರವೆಲ್ ನಲ್ಲಿ ಉಕ್ಕಿದ ಗಂಗೆ

ಚಿತ್ರದುರ್ಗ

ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಐತಿಹಾಸಿಕ ಭರಮಣ್ಣನಾಯಕನ ಕೆರೆಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಬರುತ್ತಿದೆ. ಹೀಗಾಗಿ ಕೆರೆ ಭರ್ತಿಯಾಗಲು ಎರಡು ಅಡಿ ಬಾಕಿ ಇದೆ.
ಸಿರಿಗೆರೆ, ಹಳೇರಂಗಾಪುರ, ಅಳವುದರ, ಜಮ್ಮೆನಹಳ್ಳಿ, ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಸಿರಿಗೆರೆ ಸಮೀಪದ ಶಾಂತಿಸಾಗರದ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಇದರಿಂದ ಹೊರಬರುತ್ತಿರುವ ನೀರು ಮತ್ತು ಅರಬಘಟ್ಟ ಹಳ್ಳ ಸೇರಿ ಕೊಳಹಾಳು ಗ್ರಾಮದ ಚೌಡಮ್ಮನಹಳ್ಳದ ಮೂಲಕ ಭರಮಸಾಗರದ ದೊಡ್ಡಕೆರೆ ಸೇರುತ್ತಿದೆ.

ತುಂಗಭದ್ರಾ ನದಿಯಿಂದ ಭರಮಸಾಗರ ಕೆರೆಗೆ ಬರುತ್ತಿರುವ ನೀರಿನ ಪೈಪ್‌ಲೈನ್ ಹಳೇಬಾತಿ ಸಮೀಪ ಹೊಡೆದು ನೀರು ಪೋಲಾಗುತ್ತಿರುವುದರಿಂದ 5 ಮೋಟರ್‌ಗಳನ್ನು ನಿಲ್ಲಿಸಲಾಗಿದೆ. ಹೀಗಿದ್ದರೂ ಸಹ ನಿರಂತರ ಮಳೆಯಿಂದ ಕೊಳಹಾಳು ಹಳ್ಳದ ಮಾರ್ಗವಾಗಿ ಅಪರಾ ಪ್ರಮಾಣದ ನೀರು ಬರುತ್ತಿದ್ದು ಕೆರೆ ಆವರಣವನ್ನು ಸೇರುತ್ತಿದ್ದು ರೈತರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದೆಡೆ ನೀರು ಹೆಚ್ಚಾಗಿ ಹೊಲಗಳಲ್ಲಿ ನಿಂತಿದ್ದು ರೈತರ ಬೆಳೆದ ಬೆಳೆಗಳು ಜಲಾವೃತವಾಗಿವೆ ಎಂದು ಕೊಳಹಾಳು ಗ್ರಾಮ.ಪಂ.ಸದಸ್ಯ ಕೆ.ಇ.ರಾಜಪ್ಪ ನೋವು ತೊಡಿಕೊಂಡರು.

ಎಡೆಬಿಡದೆ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಅಂತರ್ಜಲಮಟ್ಟ ಹೆಚ್ಚಾಗಿ ಕೊಳಹಾಳ್ ಗೊಲ್ಲರಹಟ್ಟಿಯ ಭಾಗಜ್ಜರ ನಾಗಣ್ಣನವರ ಹೊಲದಲ್ಲಿ ಇದ್ದ ೪೦೦ ಅಡಿ ಆಳದ ಹಳೆಯ ಬೋರ್‌ವೆಲ್‌ನಲ್ಲಿ ನೀರು ತನ್ನಿಂದ ತಾನೆ ಹೊರಬರುತ್ತಿರುವುದನ್ನು ನೋಡಿದ ರೈತರ ಮುಖದಲ್ಲಿ ಸಂತಸ ಇಮ್ಮಡಿಯಾಗಿದೆ. ಇದಕ್ಕೆ ಕಾರಣ ಕೆರೆ ತುಂಬಿಸುವ ಯೋಜನೆಯ ರುವಾರಿಗಳಾದ ತರಳಬಾಳು ಶ್ರೀಗಳ ಶ್ರಮ ಎಂದು ರೈತ ಮುಖಂಡ ವೀರಭದ್ರಪ್ಪ ಸಂತೋಷ ವ್ಯಕ್ತಪಡಿಸಿದರು.


ಚಾಪೆಯಂತೆ ಮಲಗಿದೆ ರಾಗಿ: ಅಕಾಲಿಕ ಮಳೆಯಿಂದ ಕೊಳಹಾಳು ನರೇಂದ್ರ ಕುಮಾರ್ ಅವರ ಒಂದೂವರೆ ಎಕರೆ ರಾಗಿ ಚಾಪೆಯಂತೆ ಮಲಗಿದೆ. ಕೊಯ್ಲಿಗೆ ಬಂದಿದ್ದ ರಾಗಿಯ ತೆನೆಯಲ್ಲಿ ಮೊಳಕೆಯೊಡೆದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಳಹಾಳು ಹಳ್ಳದ ರಭಸಕ್ಕೆ ನಿಂಗವ್ವನಾಗ್ತಿಯಳ್ಳಿ, ಕರಿಯಮ್ಮನಹಟ್ಟಿ ರಸ್ತೆ ಸಂಪೂರ್ಣಕೊಚ್ಚಿಕೊAಡು ಹೋಗಿದ್ದು ಹೊಲಗಳಿಗೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಜಮೀನುಗಳಿಗೆ ಹೋಗಲು ರೈತರು ಹರಸಾಸಪಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button