
POWER CITYNES: GADAG/LAKSHMESHWAR
ಗದಗ/ಹುಬ್ಬಳ್ಳಿ:
ಕನ್ನಡದ ಖ್ಯಾತ ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ಹಿನ್ನಲೆಯಲ್ಲಿ ಗ್ರಾಮಿಣ ಭಾಗದ ಯುವಕರು ಕಟೌಟ್ ನಿಲ್ಲಿಸಲು ಹೋಗಿ ವಿದ್ಯುತ್ ಸ್ಪರ್ಶದಿಂದ ಭಾರೀ ಅನಾಹುತ ಸಂಭವಿಸಿದ್ದು ಮೂವರು ಯುವಕರು ಸ್ಥಳದಲ್ಲೇ ದುರ್ಮರಣಕ್ಕಿಡಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಣಗಿ ಗ್ರಾಮದಲ್ಲಿ ಸಂಭವಿಸಿದೆ.
ನಟ ಯಶ್ ಅವರ ಮೇಲಿನ ಅಭಿಮಾನದಿಂದ ತಮ್ಮ ಸೂರಣಗಿ ಗ್ರಾಮದಲ್ಲಿ ಯಶ್ ಅವರ 25ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದ ಯುವಕರು ತಡರಾತ್ರಿ ಸಂಭ್ರಮದಿಂದ ನೆಚ್ಚಿನ ನಟನ ಬರ್ಥಡೆ ಆಚರಿಸುವ ಹುಮ್ಮಸ್ಸಿನಲ್ಲಿದ್ದ ಯುವಕರು ಬೃಹತ್ ಕಟೌಟ್ ಹಿಡಿದು ನಿಲ್ಲಿಸಲು ಮುಂದಾಗಿದ್ದರು ಇ ವೇಳೆ ಕಿರಿದಾದ ಸ್ಥಳದಲ್ಲಿ ಮೇಲಿರುವ ಹೈ ವೋಲ್ಟೇಜ್ ವಿದ್ಯುತ್ ತಂತಿಯನ್ನು ಯಾರೂ ಗಮನಿಸದೆ ಮೇಲೆತ್ತಿದಾಗ ಕಟೌಟ್ ಗೆ ವಿದ್ಯುತ್ ಪ್ರವಹಿಸಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಕೆಲ ಯುವಕರು ಆಸ್ಪತ್ರೆಯ ಪಾಲಾಗಿದ್ದಾರೆ.

ಮೃತರನ್ನು ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಹನುಮಂತ ಹರಿಜನ್ (21) ಮುರಳಿ ನಡವಿನಮನಿ
(20), ನವೀನ್ ಗಾಜಿ(19)ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಇನ್ನುಳಿದ ನಾಲ್ಕು ಯುವಕರಾದ ಮಂಜುನಾಥ,ದೀಪಕ,ಪ್ರಕಾಶ ಮತ್ತು ನಾಗಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನ ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಟ ಯಶ್ ಅವರ ಮೇಲಿನ ಹುಚ್ಚು ಅಭಿಮಾನದಿಂದ ಮಧ್ಯರಾತ್ರಿಯೇ ಬರ್ತ್ ಡೇ ಪ್ಲಾನ್ ಮಾಡಿದ್ದ ಯುವರು ಬೃಹತ್ ಕಟೌಟ್ ನಿಲ್ಲಿಸುವಾಗ ವಿದ್ಯುತ್ ತಂತಿಗೆ ತಗುಲಿ ಅವಘಡ ಸಂಭವಿಸಿದ್ದು ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.
