HubballiPolitical newsUncategorized

ಮುತಾಲಿಕ್ ಗಡಿಪಾರು ಮಾಡುವಂತೆ ಆಗ್ರಹಿಸಿದ ಮುಸ್ಲಿಮ್ ಮುಖಂಡರು!

POWERCITY NEWS :

ಹುಬ್ಬಳ್ಳಿ

ಈದ್ಗಾ ಮೈದಾನ ಗಣಪತಿ ವಿಸರ್ಜನಾ ಸಮಯದಲ್ಲಿ ಸಾರ್ವಜನಿಕ ವಾಗಿ ಒಂದು ಕೊಮಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಭಂದಪಟ್ಟಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕರನ್ನು ಗಡಿಪಾರು ಮಾಡುವಂತೆ ಮುಸ್ಲಿಂ ಮುಖಂಡರು ದೂರು ನೀಡಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದ ಮೂರು ದಿನದ ಗಣೇಶ ವಿಸರ್ಜನೆ ವೇಳೆಯಲ್ಲಿ ಸ್ಥಳೀಯ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದ ಮುತಾಲಿಕ್ ವಿರುದ್ದ
ಹು-ಧಾ ಪೊಲೀಸ್ ಆಯುಕ್ತರ ಕಚೇರಿಗೆ ಭೆಟಿ ನೀಡಿ ಮನವಿ ಸಲ್ಲಿಸಿದ ಮುಸ್ಲಿಂ ಮುಖಂಡರು ಶ್ರೀ ರಾಮಸೇನೆಯ ಪ್ರಮೋದ್ ಮುತಾಲಿಕ ಮುಸ್ಲಿಮ್ ಸಮಾಜದ ಭಾವನೆಗಳಿಗೆ ಘಾಸಿ ಮಾಡುವ ಕೆಲಸ ಮಾಡುತ್ತಲೆ ಬಂದಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಗಳು ಮನುಕುಲಕ್ಕೆ ಮಾರಕವಾಗುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನ ಮುತಾಲಿಕ್ ಮಾಡುತ್ತಲೆ ಬಂದಿದ್ದಾರೆ.ಅವರ ಪ್ರಚೋದನಕಾರಿ ಹೇಳಿಕಗಳು ಖಂಡನೀಯ ಎಂದು ಮುಸ್ಲೀಂ ಸಮಾಜದ ಮುಖಂಡ ಅಶ್ಪಾಕ್ ಕುಮಟಾಕರ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ ವಿರುಧ್ಧ ಹರಿಹಾಯ್ದರು.
ಈ ಹಿನ್ನೆಲೆಯಲ್ಲಿ ಸಮಾಜದ ಶಾಂತತೆಗೆ ಭಂಗ ತರುವ ಕೆಲಸಮಾಡುವ ಮುತಾಲಿಕ್ ಅವರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡುವಂತೆ ಅವಳಿನಗರದ ಪೊಲಿಸ್ ಆಯುಕ್ತರನ್ನು ಒತ್ತಾಯಿಸಿದರು.
ವಿಸರ್ಜನೆ ವೇಳೆ ಮುಂಬರುವ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅಡ್ಡಿಪಡಿಸಿದರೆ ಮಸೀದಿಗಳಲ್ಲೂ ಗಣೇಶ ಪ್ರತಿಷ್ಠಾಪನೆ ಮಾಡ್ತೀವಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆನ್ನಲ್ಲೇ ನಿನ್ನೆಯೇ ಮುತಾಲಿಕ್ ವಿರುದ್ಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

hubballi

Related Articles

Leave a Reply

Your email address will not be published. Required fields are marked *

Back to top button