Festival Ganesh chaturthiHubballiPolitical news

ಈದ್ಗಾ ಗಣಪತಿ ಪ್ರತಿಷ್ಠಾನ ಒಗ್ಗಟ್ಟಿಗೆ ಕೊಳ್ಳಿ ಇಟ್ಟಿತಾ ರಾಜಕೀಯ ನಡೆ!

POWERCITY NEWS: HUBBALLI

ಹಲವು ಗೊಂದಲಗಳ ನಡುವೆ ಹುಬ್ಬಳ್ಳಿಯ ಈದ್ಗಾ ಮೈದಾನದ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಶಾಂತಿಯುತವಾಗಿ ಮುಗಿದಿದೆ.ಅವಳಿನಗರದ ಚನ್ನಮ್ಮ ವೃತ್ತದಲ್ಲಿ ಭಾರಿ ಬೀಗಿ ಪೊಲಿಸ್ ಬಂದೊಬಸ್ತ್ ಕೈಗೊಳಲಾಗಿತ್ತು. ಈ ನಡುವೆಯೆ ಈದ್ಗಾ ಗಣಪತಿ ಮೂರನೇ ದಿನದ ವಿಸರ್ಜನಾ ಮೆರವಣಿಗೆಯಲ್ಲಿ ಬಿಜೆಪಿ ಶಾಸಕರಾದ ಬಸಗೌಡ ಪಾಟೀಲ್ ಯತ್ನಾಳ್ ಹಿಂದೂ ಕಾರ್ಯಕರ್ತರ ಹುರಿದುಂಬಿಸುವ ಭಾಷಣಕ್ಕೆ ಅರವಿಂದ ಬೆಲ್ಲದ ಹಾಗೂ ಮಹೇಶ್ ಟಂಗಿನಕಾಯಿ ಸಾಥ್ ನೀಡಿದರು. ಎಲ್ಲವೂ ಸುಸೂತ್ರವಾಗಿ ನಡೆದರು ಕೂಡ ಗಣಪತಿ ಪ್ರತಿಷ್ಠಾನಕ್ಕೆ ಹಗಲಿರುಳು ಶ್ರಮಿಸಿದ ಮಾರ್ಗದರ್ಶಕರನ್ನ ಮಾತ್ರ ಮೈಕ್ ನಿಂದ ದೂರ ಉಳಿಯುವಂತೆ ನೊಡಿಕೊಂಡ್ರಾ ರಾಜಕೀಯ ಮುಖಂಡರು? ಎನ್ನುವ ಪ್ರಶ್ನೆ ಇದೀಗ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಅಸಮಾಧಾನ ಹೊರಬಿಳುವಂತೆ ಮಾಡಿದೆ.

ಆಗಿದ್ದೇನು!

ಅವಳಿನಗರದ ಯಾವುದೆ ಭಾಗದಲ್ಲಿ ಹಿಂದೂಪರ ಹೊರಾಟ ನಡೆದರೆ ಸಾಕು ಅಲ್ಲಿ ಕೇಂದ್ರ ಬಿಂದುವಾಗಿ ಗುರುತಿಸಿಕೊಳ್ಳುವ ಹಾಗೂ ಹಲವೆಡೆ ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಜಯ ತಂದು ಕೊಡುವ ಅವಳಿನಗರದ ಚಾಣಾಕ್ಷ ಹಿಂದೂ ಪರ ಸಂಘಟಕ ಜಯತೀರ್ಥ ಕಟ್ಟಿಯವರನ್ನ ಸೈಡ್ ಲೈನ್‌ಗೆ ತರುವ ರಾಜಕೀಯ ಷಡ್ಯಂತ್ರ ನಡೆಯುತ್ತಿದಿಯಾ ಎನ್ನಲಾಗಿದೆ.

ಬಿಜೆಪಿಯ ಪ್ರಕೋಷ್ಠಗಳ ರಾಜ್ಯ ಸಹ- ಸಂಯೋಜಕ ಹುಬ್ಬಳ್ಳಿಯ ಫೈಯರ್ ಬ್ರಾಂಡ್ ಎಂದೆ ಖ್ಯಾತಿ ಹೊಂದಿರುವ ಹಾಗೂ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷ ಜಯತಿರ್ಥ ಕಟ್ಟಿ ಇ ಹಿಂದಿನಿಂದಲೂ ಈದ್ಗಾದಲ್ಲಿ ಗಣಪತಿ ಪ್ರತಿಷ್ಠಾನಕ್ಕೆ ಸಾಕಷ್ಟು ಕಾನೂನಾತ್ಮಕ ಹೋರಾಟ ನಡೆಸಿದವರಲ್ಲಿ ಕೂಡ ಒಬ್ಬರು.ಅದರಂತೆಯೇ ಯಶಸ್ವಿಯೂ ಕೂಡ ಆಗಿದ್ದಾರೆ. ಆದರೆ ಈದ್ಗಾ ಗಣಪತಿ ಪ್ರತಿಷ್ಠಾನ ಬರು ಬರುತ್ತ ರಾಜಕೀಯ ತಿರುವು ಪಡೆದು ಕೊಂಡ ಬೆನ್ನಲ್ಲೇ ಬಿಜೆಪಿ‌‌ ನಾಯಕರ ವೇದಿಕೆ ಭಾಷಣಗಳು ಜಯತೀರ್ಥ ಕಟ್ಟಿಯವರನ್ನ ಮರೆಮಾಚಿದವು. ಬಿಜೆಪಿ ಹಿಂದೂ ಪರ ಸಂಘಟಕರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳತ್ತದೆ. ಇಂತಹ ಪರಿಣಾಮಕಾರಿ ಬೆಳವಣಿಗೆಗಳಿಂದಲೆ ಪ್ರಾಮಾಣಿಕ ಹಿಂದೂ ಪರ ಹೋರಾಟಗಾರರ ಸಂಖ್ಯೆಯೂ ಕೂಡ ಅವಳಿನಗರದಲ್ಲಿ ಕ್ಷಿಣಿಸುತ್ತಿದೆ.

ಜಯತೀರ್ಥ ಕಟ್ಟಿ ಬಡ ಕುಟುಂಬ ದಿಂದ ಬಂದಿದ್ದರು ಸಹ ಕಾಯಕದಲ್ಲೆ ಪರಮಾತ್ಮನ ಕಂಡ ವ್ಯಕ್ತಿತ್ವ ಅವರದಾಗಿದೆ. ಇನ್ನೂ ಕಳೆದ ಬಾರಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಲಘಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯೂ ಆಗಿದ್ದನ್ನ ಮರೆಯುವಂತಿಲ್ಲ. ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿಸಿದ್ದು ಕೂಡ ಅಷ್ಟೇ ನಿಗೂಢಕರ ಸಂಗತಿಯಾದರೆ. ಇತ್ತ ಈದ್ಗಾದಲ್ಲಿ ಗಣಪತಿ ಪ್ರತಿಷ್ಠಾನದ ಅನುಮತಿಗಾಗಿ ನಡೆದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಕೂಡ ವಿಸರ್ಜನೆಯ ವೇಳೆ ಸೌಜನ್ಯಕ್ಕೂ ಸಹ ವೇದಿಕೆ ಮೇಲೆ ಕರೆಯದಿರುವುದು ಕಟ್ಟಿಯವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು ಹಿಂದೂ ಪರ ಸಂಘಟನೆಗಳಲ್ಲಿ ಒಗ್ಗಟ್ಟು ಮುರಿದು ಬೀಳುವ ಮುನ್ಸೂಚನೆ ಯಾಗಿದೆ ಎನ್ನುತ್ತಾರೆ ರಾಜಕೀಯ ಪ್ರಜ್ಙಾವಂತರು.

M R DAKHANI

POWERCITY NEWS

Related Articles

Leave a Reply

Your email address will not be published. Required fields are marked *

Back to top button