CITY CRIME NEWSHubballiViral Image

ಕಟ್ಟಿಗೆ ರಾಸಿಗೆ ಬೆಂಕಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳ ದೌಡು!

POWERCITY NEWS : HUBBALLI.

ಹುಬ್ಬಳ್ಳಿ : ಯಾರೋ ಕಿಡಿಗೆಡಿಗಳು ಕಟ್ಟಿಗೆ ರಾಸಿಗೆ ಬೆಂಕಿ ಹಚ್ಚಿದ ಘಟನೆ ನಗರದ ಗಿರಣಿ ಚಾಳ ಬಳಿಯ ಮೈದಾನದಲ್ಲಿ ನಡೆದಿದೆ.

ಪಾಳು ಬಿದ್ದಿದ್ದ ಭಾರತಮಿಲ್ಲ ತೆರವಿನ ನಂತರ ಆ ಜಾಗದಲ್ಲಿನ ಅಪಾರ ಪ್ರಮಾಣದ ಕಟ್ಟಿಗೆಗಳನ್ನು ಗಿರಣಿ ಚಾಳದ ಆಟದ ಮೈದಾನದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಜಮೆ ಮಾಡಲಾಗಿತ್ತು. ಇದರಿಂದ ಅಕ್ಕ ಪಕ್ಕ ನಿವಾಸಿಗಳಿಗೂ ಹುಳ ಹುಪ್ಪಡಿಗಳ ಕಾಟವು ಹೆಚ್ಚಾಗಿತ್ತು ಎನ್ನಲಾಗಿದೆ.

ಆದರೆ ಇಂದು ಏಕಾ ಎಕಿ ಯಾರೊ ಕಿಡಿಗೆಡಿಗಳು ಸ್ಥಳದಿಂದ ಕಾಲ್ಕಿತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ತಾಸಿಗೂ ಹೆಚ್ಚಿನ ಸಮಯದ ವರೆಗೆ ಬೆಂಕಿ ನಂದಿಸಲು ಕಾರ್ಯಪೃವೃತ್ತ ರಾಗಿದ್ದಾರೆ.

ಖಾಸಗಿ ಒಡೆತನದ ಕಟ್ಟಿಗೆ ರಾಸಿ ಇದಾಗಿದ್ದು ಪಾಲಿಕೆ ಜಾಗವನ್ನು ದುರ್ಬಳಕೆ ಮಾಡುತ್ತಿರುವುದರಿಂದ ಪಾಲಿಕೆ ಆಯುಕ್ತರು ಕಟ್ಟಿಗೆಗಳನ್ನು ತಂದಿಟ್ಟು ಅವಾಂತರ ಸೃಷ್ಟಿಸಿದ ಮಹಾನುಬಾವರ ಮೇಲೆ ಕಾನೂನು ಕ್ರಮ ಜರುಗಿಸುತ್ತಾರಾ? ಎಂಬುದನ್ನ ಕಾದು ನೋಡ ಬೇಕಿದೆ.

RAJA DAKHANI

Related Articles

Leave a Reply

Your email address will not be published. Required fields are marked *

Back to top button