ಸ್ಥಳೀಯ ಸುದ್ದಿ

FM station in Central jail

ಧಾರವಾಡ

ಒಂದೊಳ್ಳೆ ಸುದ್ದಿ ನಿಮ್ಮ ಪವರ್ ಸಿಟಿ ನ್ಯೂಸ್ ಕನ್ನಡದಲ್ಲಿ ನಾವು ತೊರಸ್ತಾ ಇದೀವಿ ನೋಡಿ…

ಈ ಸುದ್ದಿ ತುಂಬಾನೇ ಇಂಟರೆಸ್ಟಿಂಗ್ ಹಾಗೂ ಖುಷಿಯ ವಿಚಾರದ್ದಾಗಿದೆ.

ತಾವು ಮಾಡಿಲ್ಲದ ತಪ್ಪಿಗೋ,! ಅಥವಾ ಮಾಡಿದ ತಪ್ಪಿಗೋ! ಪಶ್ಚಾತಾಪ ಅನುಭವಿಸುತ್ತಿರುವವರ ಸುದ್ದಿ ಇದು….

ಕೆವಲ 4 ಗೋಡೆಗಳ ಮಧ್ಯೆ ಇದ್ದು, ಮುಗೀತಪ್ಪಾ ನಮ್ಮ ಜೀವನ ಇನ್ನು ಮುಂದೆ ಎನ್ನುವರಿಗೆ, ಇಂತಹ ವಾತಾವರಣದಲ್ಲಿಯೂ ಏನನ್ನಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಇಲ್ಲಿ ಸುದಾವಕಾಶ ಕಲ್ಪಿಸಿಕೊಡಲಾಗಿದೆ.

ಹೌದು ಇದು ಧಾರವಾಡದ ಕೇಂದ್ರ ಕಾರಾಗೃಹದ ಸುದ್ದಿ. ಪವರ್ ಸಿಟಿ ನ್ಯೂಸ್ ಕನ್ನಡಲ್ಲಿನ ವಿಶೇಷ ಸ್ಪೇಶಲ್ ಸ್ಟೋರಿ ಇದು. ‌


ಇಲ್ಲಿ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ಹಾಗೂ ಸಜಾಬಂಧಿಗಳಿಗೆ ಆರ್.ಜೆ ಆಗುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಕಾರಾಗೃಹದ ಅಧೀಕ್ಷಕರಾದ
ಎಂ.ಎ. ಮರಿಗೌಡ ಅವಧಿಯಲ್ಲಿ ಈ ಕಾರ್ಯ ನಡೆದಿದೆ.
ಜೈಲು ಸಿಬ್ಬಂದಿ
ಅಶೋಕ ರಾಥೋಡ ಹಾಗೂ ಇತರೆ ಸಿಬ್ಬಂದಿ ಈ FM ಕೇಂದ್ರದ ಉಸ್ತುವಾರಿ ನೋಡಿಕೊಂಡು ಹೋಗುತ್ತಿದ್ದಾರೆ.

4 ಲಕ್ಷ 60 ಸಾವಿರ ರೂಪಾಯಿ ವೆಚ್ಚದಲ್ಲಿ ಈ ಎಫ್ಎಂ ರೇಡಿಯೋ ಕೇಂದ್ರ ಆರಂಭಗೊಡಿದ್ದು, ಒಟ್ಟು 18 ಎಕರೆ ವಿಸ್ತಾರವುಳ್ಳ ಜೈಲಿನೊಳಗೆ ಮಾತ್ರ ಪ್ರಸಾರದ ವ್ಯಾಪ್ತಿ ಹೊಂದಿದೆ…

ಈ ಎಫ್.ಎಂ‌. ರೇಡಿಯೋ ಕೇಂದ್ರದಲ್ಲಿ ಬೆಳಗ್ಗೆ 7.30 ರಿಂದ 8.30 ಹಾಗೂ ರಾತ್ರಿ 7.30 ರಿಂದ 8.30 ರವರೆಗೆ ತನ್ನದೇ ವ್ಯಾಪ್ತಿ ಹೊಂದಿರುವ ಪ್ರದೇಶದಲ್ಲಿ ಪ್ರಸಾರವಾಗುತ್ತದೆ.

ಇನ್ನೊಂದು ವಿಶೇಷತೆ ಎಂದ್ರೆ ಜೈಲಿನಲ್ಲಿರುವವರು ಯಾರು ಬೇಕಾದ್ರು ಹೋಗಿ ಅಲ್ಲಿ ಹಾಡು, ಕಥೆ ಹೀಗೆ ಮುಂತಾದವುಗಳ ಕುರಿತು ಮಾತನಾಡಬಹುದಾಗಿದೆ. ಅಲ್ಲಿರುವ ಬಂಧಿಗಳ ಜನ್ಮದಿನ ಇದ್ದರು ಸಹ ಹೋಗಿ ವಿಶ್ ಸಹ ಮಾಡಬಹುದಾಗಿದೆ…

ಹೊಸ ಭವಿಷ್ಯವನ್ನು ಈ ಎಫ್.ಎಂ ಕೇಂದ್ರದ ಮೂಲಕ ಕಟ್ಟಿಕೊಳ್ಳಲು ಖೈದಿಗಳಿಗೆ ಅನುಕೂಲವಾಗಲು ಬಂಧಿಖಾನೆ ಇಲಾಖೆ ಮಾಡಿರುವ ಹೊಸ ಪ್ರಯತ್ನ ಎಲ್ಲರಿಗೂ ಖುಷಿ ಕೊಟ್ಟಿದ್ದಂತು ಸತ್ಯ….

Related Articles

Leave a Reply

Your email address will not be published. Required fields are marked *

Back to top button