BREAKING NEWSCITY CRIME NEWSDHARWADHubballiPoliceTWINCITY

“ಶಕೀಲಾ ಬಾನು”ಅನುಮಾನಾಸ್ಪದ ಸಾವಿಗೆ ಇನ್ನೂ ಸಿಗದ ಕಾರಣ:ಇದು ಕೊಲೆಯೆ?

Shakila death secrate!

POWER CITYNEWS :CRIME NEWS

ಹುಬ್ಬಳ್ಳಿ : ಕಳೆದ ನವೆಂಬರ್ 27 ರಂದು ಕಿಮ್ಸ್ ಆಸ್ಪತ್ರೆ ಆವರಣದ ಕ್ವಾಟರ್ಸ್‌ನಲ್ಲಿ ಅನುಮಾನಾಸ್ಪದ ಸಾವಿಗಿಡಾದ ಶಕೀಲಾಬಾನು ಶೇಖ ಅವರ ಸಾವಿನ ಹಿಂದಿರುವ ಕಾರಣಕ್ಕೆ ಆಸ್ಪತ್ರೆಯ ಸಿಬ್ಬಂದಿ ಇಂದ ಹಿಡಿದು ಸಾರ್ವಜನಿಕ ವಲಯದಲ್ಲೂ ಸಹ ಕುತೂಹಲ ಮೂಡಿಸಿದೆ.

ಹೌದು ಶಕೀಲಾ ಅವರು ಸಾವಿಗೂ ಮುನ್ನ ನವನಗರದ ಪರಿಚಯಸ್ಥರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ಹೊತ್ತಿಗೆ ಮನೆಗೆ ಮರಳಿರುತ್ತಾರೆ. ಎಂದಿನಂತೆ ಮನೆಕೆಲಸ ಮುಗಿದ ಬಳಿಕ ಧಾರವಾಡದಲ್ಲಿ ವಾಸವಿರುವ ಶಕೀಲಾ ಅವರ ತಾಯಿ ಹಾಗೂ ಮಗನೊಂದಿಗೆ ದೂರವಾಣಿ ಮೂಲಕ ಸಾವಿಗೂ ಕೆಲವು ಘಂಟೆಗಳ ಮೊದಲು ಮಾತನಾಡಿಸಿದ್ದಾರೆ.

ಹೀಗೆ ದೂರವಾಣಿಯಲ್ಲಿ ಮಾತನಾಡಿದ ಶಕೀಲಾ ಮಗ ಆಸೀಫ್ ನೊಂದಿಗೆ ನಡೆಸಿದ ಸಂಭಾಷಣೆ ಎನಾಗಿತ್ತು? ಮರುದಿನ ಮನೆಯ ಬೆಡ್ ಮೇಲೆ ಮಲಗಿದ ಸ್ಥಿತಿಯಲ್ಲಿದ್ದ ಶಕೀಲಾ ಬಾನು ಕಂಡದ್ದು ಅಕ್ಷರಶಃ ಅನುಮಾನಾಸ್ಪದ ಶವವಾಗಿ. ಅದನ್ನೂ ಸಹ ಅಕ್ಕ-ಪಕ್ಕದ ಯಾರೂ ಕಂಡಿದ್ದಲ್ಲ. ಬದಲಾಗಿ ಮರುದಿನ ಬೆಳಿಗ್ಗೆ ಧಾರವಾಡದಿಂದ ಬಂದಿದ್ದ ಶಕೀಲಾ ಅವರ ಮಗ ತಾಯಿ ಶವವಾಗಿ ಮಲಗಿದ್ದನ್ನ ಕಂಡು ಅರೆ ಕ್ಷಣ ಗಾಬರಿಯಾಗಿ ಅಕ್ಕ ಪಕ್ಕದ ಜನರಿಗೆ ತಿಳಿಸಿದನಂತೆ.

ಮೊಬೈಲ್ ಸಂದೇಶ ಬಂದಿತ್ತೆ?

ಹಾಗಾದ್ರೆ ಶಕೀಲಾ ಬಾನು ಸಾವಿನ ಮೊದಲು ರಾತ್ರಿ 8:ರ ವೇಳೆಗೆ ಸಹಜವಾಗಿಯೇ ಮಗ ಹಾಗೂ ತಾಯಿಯೊಂದಿಗೆ ಮಾತನಾಡಿದ್ದಾರೆ.ಆದ್ರೆ ಶಕೀಲಾ ಬೆಳಿಗ್ಗೆ ಹೆಣವಾಗುವ ಸೂಚನೆ ಅದೆ ಮೊಬೈಲ್ ನಿಂದ ಮಗ ಆಸೀಫ್‌ಗೆ ಇ ರೀತಿ ಸಂದೇಶ ಬಂದಿತ್ತು ಎನ್ನಲಾಗಿರುವ ಸಂದೇಶದ ಮಾದರಿ (nanu saitidini nann body postmortem madisbeda policrige complaint kodbeda) ಇಂತಹದೆ ವಾಕ್ಯದಲ್ಲಿ ಬಂದಿದೆ ಎನ್ನಲಾಗುವ ಸಂದೇಶದಲ್ಲಿ ಹೇಳಿದಂತೆ ಅನುಮಾನದ ಮೆಸೇಜ್ ಇದೆ. ನಾನು ಸಾಯ್ತಿದಿನಿ ನನ್ನ ದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಬೇಡ ಪೊಲೀಸರಿಗೆ ದೂರು ಕೊಡಬೇಡ ಎಂದು ಟೈಪ್ ಮಾಡಿ ಕಳಿಸಿದ್ದರು ಎನ್ನಲಾದ ಶಕೀಲಾ ಅವರ ಮೂಬೈಲ್ ಇದುವರೆಗೂ ತನಿಖಾ ಪೊಲೀಸರ ಕೈ ಸೇರಿಲ್ಲ ವಂತೆ?

ಹೌದು ಸಂದೇಶ ಬಂದಿತ್ತು ಎನ್ನಲಾದ ಮೂಬೈಲ್ ಪೊಲೀಸರ ಕೈಗೆ ಇದು ವರೆಗೂ ಸಿಕ್ಕಿಲ್ಲ. ಹಾಗಾದ್ರೆ ಇ ಸಂದೇಶ ಕಳಿಸಿದ್ದು ಸ್ವತಃ ಶಕೀಲಾ ಅವರಾ ಅಥವಾ ಇವರ ಹಿಂದೆ ಇನ್ನಾವುದರ ದೂರುದ್ದೇಶ ಇದೀಯಾ?

ಕೆಲವರು ಹೇಳುವ ಪ್ರಕಾರ ಶಕೀಲಾ ಅವರಿಗೆ ಹೈ ಶುಗರ್ ಇತ್ತು ಎನ್ನೋದು. ಆದ್ರೆ ಅದಕ್ಕೆ ಸಂಭಂಧ ಪಟ್ಟ ಮಾತ್ರೆಗಳು ಅವರ ಬಳಿ ಲಭ್ಯವಿವೆ. ಅನ್ನೋದು ಮೇಲ್ನೋಟಕ್ಕೆ ಮನೆಯಲ್ಲೇ ಸಿಕ್ಕಿವೆ. ಒಂದು ವೇಳೆ ಆತ್ಮಹತ್ಯೆಯೆ ಮಾಡಿಕೊಂಡಿದ್ದರು ಸಹ ಅಂತಹ ‌ಬಲವಾದ ಕಾರಣಗಳು ಕೂಡ ಇಲ್ಲವೆನಿಸುತ್ತೆ.

ಸತತ ಇಪ್ಪತ್ತು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ನಿಷ್ಕಳಂಕವಾಗಿ ಸೇವೆಗೈದ ಶಕೀಲಾ ತುಂಬಾ ಸರಳ ಸ್ವಭಾವ ವ್ಯಕ್ತಿತ್ವ ಹೊಂದಿದ್ದವರಾಗಿದ್ದರೆಂದು ಅವರ ಆಪ್ತರು ಹೇಳುತ್ತಾರೆ. ಇದ್ದ ಒಬ್ಬ ಮಗನನ್ನು ಚೆನ್ನಾಗಿ ಬೆಳೆಸಿ ಪರಿಪೂರ್ಣ ಶಿಕ್ಷಣ ಕೊಡಿಸುವಲ್ಲಿ ಯಶಸ್ಸು ಕಂಡಿದ್ದರು. ಇನ್ನೂ ವೈವಾಹಿಕ ಜೀವನದಲ್ಲಿ ಕಳೆದ ಕೆಲವು ವರ್ಷಗಳಿಂದ ಪತಿಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.

ಶವವಾಗಿ ಬಿದ್ದ ಶಕೀಲಾ ಅವರ ಬಾಯಿಯಿಂದ ನೊರೆ ಹೊರೆಬಂದಿತ್ತು ಎನ್ನುವುದಾದರೆ ದೇಹದಲ್ಲಿ ವಿಷ ಪದಾರ್ಥಗಳು ಸೇರಿಕೊಂಡರೆ ಮಾತ್ರ ದೆಹದಿಂದ ಇಂತಹ ಲಕ್ಷಣಗಳು ಕಂಡು ಬರುತ್ತದೆ ಎನ್ನುವುದು ವೈದ್ಯಕೀಯ ಸಾಮಾನ್ಯ ಅನಿಸಿಕೆ ಯಾಗಿದೆ.

ಇನ್ನೂ ಎಲ್ಲ ಮೂಲಗಳಿಂದ ತನಿಖೆ ನಡೆಸುತ್ತಿರುವ ವಿದ್ಯಾನಗರ ಪೊಲೀಸರು ಸಾವಿಗೆ ನಿಖರವಾದ ಕಾರಣ ಹಾಗೂ ಸಂದೇಶ ಕಳಿಸಿದ ಶಕೀಲಾ ಅವರ ಮೂಬೈಲ್ ಶೋಧ ಕಾರ್ಯ ಮುಂದು ವರೆದಿದೆ. ಇದೀಗ ಸಾವಿನ ನಂತರ ನಡೆದ ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಸೇಲ್ ವರದಿ ಬಳಿಕ ಸಾವಿನ ಪ್ರಕರಣ ತಿರುವು ಪಡೆಯುವ ಸಾಧ್ಯತೆ ಇದೆ.

Raja dakhani
POWER CITYNEWS!

Related Articles

Leave a Reply

Your email address will not be published. Required fields are marked *

Back to top button