ಸ್ಥಳೀಯ ಸುದ್ದಿ

ದಣಿವರಿಯದ ಸಾಮಾಜಿಕ ದನಿ: ಗುರುರಾಜ್ ಹೂಗಾರ!

ಹುಬ್ಬಳ್ಳಿ: ದುಡಿಮೆ ಅರಸಿ ಹುಬ್ಬಳ್ಳಿಯತ್ತ ಮುಖಮಾಡಿ ಬಂದಿದ್ದ ಒಬ್ಬ ಸಾಧರಣ ವ್ಯಕ್ತಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಇಂದು ಸಮಾಜದ ಜವಾಬ್ದಾರಿಯುತ ಪತ್ರಕರ್ತನಾಗಿ ಹೊರ ಹೊಮ್ಮಿ ಇಂದಿನ ಪತ್ರಿಕೋದ್ಯಮ ಪೀಳಿಗೆಗೆ ಮಾದರಿಯಾಗಿದ್ದಾರೆ.

ಇ ಸುದಿನ ಪತ್ರಕರ್ತರಾದ ಶ್ರೀಯುತ ಗುರುರಾಜ್ ಹೂಗಾರವರಿಗೆ 63ನೇಯ ಹುಟ್ಟು ಹಬ್ಬದ ಸಂಭ್ರಮವೂ ಕೂಡ ಹೌದು. ಹಸನ್ಮೂಖಿಯಾದ ಇವರು ಸದಾ ಲವಲವಿಕೆಯಿಂದಲೆ ಎಲ್ಲರೊಂದಿಗೆ ಬೆರೆಯುವ ಗುರುರಾಜ್ ಹೂಗಾರ ಎಂದರೆ ಪ್ರತಿಯೊಬ್ಬರಿಗೂ ಪ್ರೀತಿ.

ಮೊದ ಮೊದಲು ಹೋಟೆಲ್ ಉದ್ಯಮದಲ್ಲಿ ಗುರುತಿಸಿ ಕೊಂಡಿದ್ದ ಗುರುರಾಜ್ ಅವರು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿಯೆ ಹಲವು ವರ್ಷಗಳ ಕಾಲ ಸುತ್ತಮುತ್ತಲಿನ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಾಗೂ ಬೇರೆ ಬೇರೆ ಜಿಲ್ಲೆ ಹಾಗೂ ಊರುಗಳಿಂದ ಬರುತ್ತಿದ್ದ ಸಾರ್ವಜನಿಕರಿಗೆ ಹುಬ್ಬಳ್ಳಿಯ ಪತ್ರಕರ್ತರ ಭವನದ ಹೋಟೆಲ್ ಅಂದ್ರೆ ಊಟ ಸವಿದೆ ಹೋಗುತ್ತಿದ್ದರು.

ಆದರೆ ಗುರುರಾಜ್ ಹೂಗಾರ ಅವರು ಪತ್ರಿಕೋದ್ಯಮದಲ್ಲಿಯೂ ಕೆಲವು ತಿಂಗಳುಗಳ ಕಾಲ ಹವ್ಯಾಸಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಅವರು ನಂತರದ ದಿನಗಳಲ್ಲಿ ಹೋಟೆಲ್ ಉದ್ಯಮಕ್ಕೆ ವಿದಾಯ ಹೇಳಿ ಸಂಪೂರ್ಣ ಪತ್ರಿಕೋದ್ಯಮದತ್ತ ಆಸಕ್ತಿ ತೋರಿದರು.

ನಂತರದ ದಿನಗಳಲ್ಲಿ ದಿನಪತ್ರಿಕೆ ಯಾದ ಹಸೀರು ಕ್ರಾಂತಿ ಹಾಗೂ ಇಂದು ಸಂಜೆ ಪತ್ರಿಕೆಗಳ ಮೂಲಕ ಅವಳಿನಗರದ ಪ್ರಜ್ಞಾವಂತ ನಾಗರಿಕರ ಗಮನ ಸೆಳೆದಿದ್ದಾರೆ.

ಒಬ್ಬ ಸಾಧರಣ ವ್ಯಕ್ತಿ ಇದೀಗ “ಇಂದು ಮುಂಜಾನೆ” ಎಂಬ ಕನ್ನಡ ಸಂಜೆ ಪತ್ರಿಕೆಯನ್ನ ಸ್ಥಾಪಿಸಿ‌ ಸಮಾಜಕ್ಕೆ ಲೋಕಾರ್ಪಣೆ ಗೊಳಿಸಿದ್ದಾರೆ.

ಈ ದಿಸೆಯಲ್ಲಿಯೆ ಪತ್ರಿಕೋದ್ಯಮದ ಸಾಧನೆಗೆ ಗುರುರಾಜ್ ಹೂಗಾರವರಿಗೆ ಈಗಾಗಲೇ ಇವರ ಸೇವೆಯನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button