ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಮತದಾರರ ಮಾಹಿತಿ ಸಂಗ್ರಹಿಸುತ್ತಿದ್ದ “ASR”ಖಾಸಗಿ ಕಂಪನಿಯ ಯುವಕರು ಪೊಲಿಸ್ ವಶಕ್ಕೆ!

ಹುಬ್ಬಳ್ಳಿ: ಕಳೆದ ತಿಂಗಳಿನಿಂದಲೂ ರಾಜ್ಯದಲ್ಲಿ ಮತದಾರ ಪಟ್ಟಿಯಲ್ಲಿನ ಹೆಸರುಗಳನ್ನು ಉದ್ದೇಶ ಪೂರ್ವಕವಾಗಿ ರದ್ದು ಮಾಡಿದ್ದಾರೆಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಆರೋಪಿಸಿದೆ.

ಸಾಂಧರ್ಭಿಕ ಚಿತ್ರ!

ಆದರೆ ಅದು ರಾಜ್ಯ ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತ ವಾದಂತೆ ಕಾಣದೆ! ನಿನ್ನೆಯಿಂದ ಅವಳಿನಗರ ಹುಬ್ಬಳ್ಳಿ ಧಾರವಾಡದಲ್ಲೂ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಅಳಿಸಿ ಹಾಕಿದೆ ಎಂದು ಆರೋಪಿಸಿ ಪಶ್ಚಿಮ ವಿಧಾನಸಭಾ ಕ್ಷೇತ್ರದ ಆನಂದನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಸರ್ವೆ ಮಾಡುತ್ತಿದ್ದವರನ್ನು ರಜತ್ ಉಳ್ಳಾಗಡ್ಡಿ ಮಠ ಮತ್ತು ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೇಹಲಿ ಮೂಲದ ASR ಖಾಸಗಿ ಕಂಪನಿಯ ಯುವಕರನ್ನು ಹಳೆಹುಬ್ಬಳ್ಳಿಯ ಪೋಲಿಸ್ ಠಾಣೆಗೆ ಒಪ್ಪಿಸಿದ ಘಟನೆ ನಡೆದಿದೆ.

ರಜತ್ ಉಳ್ಳಾಗಡ್ಡಿ ಮಠ!

ಈ ಹಿನ್ನೆಲೆಯಲ್ಲಿ ಜಲ್ಲಾಧಿಕಾರಿ ಗುರುದತ್ ಹೆಗಡೆ ಹಾಗೂ ಪಾಲಿಕೆ ಆಯುಕ್ತ ಗೋಪಾಲಕೃಷ್ಣ,ಮತ್ತು ಕ್ರೈಮ್ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ್ ಅವರು ಠಾಣೆಗೆ ಭೇಟಿ ನೀಡಿ ಘಟನೆಯ ಕುರಿತು ರಜತ್ ಉಳ್ಳಾಗಡ್ಡಿ ಅವರಿಂದ ವಿವರಣೆ ಪಡೆಯುತ್ತಿದ್ದಾರೆ.

ಆದರೆ ರಜತ್ ಉಳ್ಳಾಗಡ್ಡಿ ಕೇವಲ ಕೆಲಸ ಅರಸಿ ಬಂದು ಸರ್ವೆ ನಡೆಸುತ್ತಿದ್ದ ಯುವಕರ ಮೇಲೆ ಮಾತ್ರ ಕಾನೂನು ಕ್ರಮ ಜರುಗಿಸದೆ.ಅವರನ್ನು ಇಲ್ಲಿಗೆ ಕರೆಸಿಕೊಂಡು ಕೆಲಸವಕೊಟ್ಟವರನ್ನ ಮೊದಲು ವಿಚಾರಣೆ ನಡೆಸಿದರೆ ಮಾತ್ರ ನಿಜವಾದ ಸತ್ಯ ಹೊರಬರುತ್ತೆ ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಸಾಂಧರ್ಭಿಕ ಚಿತ್ರ!

ಆದರೆ ಕೆಲವೊಂದು ಮತಕ್ಷೇತ್ರದ ಸಾವಿರಾರು ಜನರ ಮತದಾರ ಪಟ್ಟಿಯಿಂದ ಹೆಸರು ರದ್ದುಗೊಂಡಿವೆ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಕಾಂಗ್ರೆಸ್ ಮುಖಂಡರು.

ಸಾಂಧರ್ಭಿಕ ಚಿತ್ರ!

ಇ ಕುರಿತು ಅವಳಿನಗರದ ಜನತೆಗೆ ಜಿಲ್ಲಾಡಳಿತ ಸ್ಪಷ್ಟತೆ ನೀಡಬೆಕಿದೆ.
ಆಯಾ ಭಾಗದ ಜನಪ್ರತಿನಿಧಿಗಳು ಕೂಡ ಉತ್ತರಿಸಬೇಕಿದೆ. ಮತದಾರ ಪಟ್ಟಿ ಸರ್ವೆ ಕಾರ್ಯವನ್ನು ಖಾಸಗಿ ಕಂಪನಿಗಳಿಗೆ ನೀಡುವುದು ಎಷ್ಟು ಸರಿ! ಎನ್ನುವ ಪ್ರಜ್ಞಾವಂತ ನಾಗರಿಕರ ಪ್ರಶ್ನೇಗೆ ಉತ್ತರ ಸಿಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button