ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ರೈತರೆ ನಮ್ಮ ಮುಂದಿನ ನಾಯಕರು: ಆಮ್ ಆದ್ಮಿ ಪಕ್ಷ!

Power city news ಹುಬ್ಬಳ್ಳಿ: ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ
ಹುಬ್ಬಳ್ಳಿಯ ಯಾತ್ರಿನಿವಾಸ ಭವನದಲ್ಲಿ ಇಂದು ರಾಜ್ಯದ ರೈತರ ಪುನಶ್ಚೇತನದ ಸಭೆ ಹಮ್ಮಿಕೊಳ್ಳಲಾಯಿತು. ಇಂದು ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ರೈತರು ಪಾಲ್ಗೊಂಡು ತಮ್ಮ ಅಭಿಪ್ರಾಯ ಹಾಗೂ ಸಲಹೆ ಮತ್ತು ಪಕ್ಷದ ಪ್ರನಾಳಿಕೆಯಲ್ಲಿ ರೈತರ ಪರ ಇರಬೇಕಾದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಅದರಂತೆ ರೈತರ ಎಲ್ಲಾ ಸಲಹೆ ಸೂಚನೆಗಳನ್ನು ಪಕ್ಷದ ರಾಜ್ಯ ನಾಯಕರು ಪ್ರಣಾಳಿಕೆಯಲ್ಲಿ ಸೇರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು. ಮತ್ತು ಪಕ್ಷ ಸಂಘಟನೆಯ ಬಗ್ಗೆ ಎಲ್ಲಾ ಆಯಾಮಗಳಿಂದ ಮುಕ್ತವಾಗಿ ಚರ್ಚಿಸಲಾಯಿತು. ಇದರಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಗಳಲ್ಲಿ ರೈತಾಪಿ ವರ್ಗದ ಅಭ್ಯರ್ಥಿಗಳು ಸ್ಪರ್ಧಿಸಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೆಕಿದೆ. ಮತ್ತು ತಮಗೆ ಬೇಕಾದ ಸರ್ಕಾರದ ಸವಲತ್ತುಗಳನ್ನು ರೈತರೆ ನೇರವಾಗಿ ರೈತರಿಗೆ ಕಲ್ಪಿಸುವ ವ್ಯವಸ್ಥೆಯಾಗಬೆಕಿದೆ. ಆ ಬಗ್ಗೆ ಆಪ್ ಪಕ್ಷದ ರಾಜ್ಯ ನಾಯಕರು ಎಲ್ಲಾ ರೈತರಿಗೆ ಆಮ್ ಆದ್ಮಿ ಪಕ್ಷದಿಂದಾ ಸ್ಪರ್ದಿಸಲು ಅವಕಾಶ ಮಾಡಿಕೊಡುವ ಭರವಸೆ ನೀಡಿದರು.

ಪಂಜಾಬ್ ಮಾದರಿಯಲ್ಲಿ ಕರ್ನಾಟಕದ ರೈತರಿಗೂ ಉತ್ತಮ ಕೃಷಿ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ರೈತರ ಕುರಿತಾದ ಪ್ರಣಾಳಿಕೆಗಳನ್ನು ಸಿದ್ದಪಡಿಸಲು ಚರ್ಚಿಸಲಾಯಿತು.

ಸಭೆಯ ನಿರ್ಣಯಗಳು:

1) . ರೈತರ ಪುನಶ್ಚೇತನ ಸಂಕಲ್ಪ ಯಾತ್ರೆ ಬೆಂಬಲಿಸುವ ಮಿಸ್ ಕಾಲ್ 70650 96464 ಗೆ ಕರೆ ಮೂಲಕ ಈ ಆಂದೋಲನದಲ್ಲಿ ಪಾಲ್ಗೊಳ್ಳಲು ಕರೆ ನೀಡಲಾಯಿತು.
2) . ರಾಜ್ಯ ರೈತ ಘಟಕದ ಸಂಚಾಲನಾ ಸಮಿತಿ ವಿಸ್ತರಿಸಲು ನಿರ್ಧರಿಸಲಾಯಿತು.
3) . ಪ್ರಣಾಳಿಕೆಯಲ್ಲಿ ಸೇರಿಸುವ ನಾಲ್ಕು ಪ್ರಮುಖ ಅಂಶಗಳನ್ನು ಅಂಗೀಕರಿಸಿತು.
4) . ಅದರಲ್ಲಿ Threshold Yield ಮಾನದಂಡದಲ್ಲಿ ಆಮ್ ಆದ್ಮಿ ಪಕ್ಷ ಖಾತ್ರಿ
ಆಧಾರದ ಮೇಲೆ Threshold Yield ನಿರ್ಧರಿಸಲು ನಿರ್ಣಯಿಸಲಾಯಿತು.
5) . ಬೆಳೆವಿಮೆ ಖಾಸಗಿ ಕಂಪನಿ ತೆಗೆದು ಹಾಕಿ ಅದರ ಬದಲಾಗಿ ಈ ಮೊದಲಿನಂತೆಯೇ ಸರಕಾರದ ನಿಗಮವಾಗಿರಲಿ.
6). ಕೃಷಿ ಕೂಲಿಕಾರರ ಅಭ್ಯುದಯಕ್ಕೆ ನರೇಗಾ ಯೋಜನೆಯ ಅಡಿಯಲ್ಲಿ ಕೃಷಿ ಚಟುವಟಿಕೆಗಳನ್ನು ಒಳಗೊಳ್ಳುವ ನಿರ್ಣಯ.
7) . ಕಳಸಾ – ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಒತ್ತಾಯಿಸಿ ಹೋರಾಟದ ನಡೆಸುವ ಕುರಿತು ತೀರ್ಮಾನಿಸಲಾಗಿದೆ‌.

ಸುದ್ದಿ ಗೋಷ್ಠಿಯಲ್ಲಿ ಜೆ.ಎನ್ ಕಾಳಿದಾಸ, ರಾಜ್ಯ ಘಟಕದ ಅಧ್ಯಕ್ಷರು
ರವಿಚಂದ್ರ ನೆರಬೆಂಚಿ, ರಾಜ್ಯ ಮುಖಂಡರು
ಮುತ್ತಪ್ಪ ಕೋಮಾರ, ರೈತ ಮುಖಂಡರು ಮತ್ತು ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಮತ್ತು
ವಿಕಾಸ ಸೊಪ್ಪಿನ, ಜಿಲ್ಲಾ ಕಾರ್ಯದರ್ಶಿ

Related Articles

Leave a Reply

Your email address will not be published. Required fields are marked *

Back to top button