ಚಿತ್ರದುರ್ಗ

ಶಾಂತಿವನ ಬ್ಯಾರೇಜ್‌ ಭರ್ತಿ:ʼಗಂಗಾ ಕಲ್ಯಾಣʼ ಕಲ್ಪಿಸಿದ ತರಳಬಾಳು ಶ್ರೀಗಳಿಗೆ ನಮೋ ನಮಃ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಭರಮಸಾಗರ ಹೋಬಳಿಯ ಸಿರಿಗೆರೆ ಸಾಂತಿವನದ ಶಾಂತಿ ಸಾಗರ ಬ್ಯಾರೇಜ್‌ ಭರ್ತಿಯಾಗಿದೆ. ಬಾರಿ ಪ್ರಮಾಣದ ನೀರು ಹರಿಯುತ್ತಿದ್ದು ತರಳಬಾಳು ಜಗದ್ದುಗರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶಾಂತಿವನದ ಬ್ಯಾರೇಜ್‌ನಿಂದ ನೀರು ಹೊರ ಹೋಗುತ್ತಿರುವ ದೃಶ್ಯ ನೋಡಿ ಸಂತಸ ವ್ಯಕ್ತಪಡಿಸಿದರು.


ಮೈದುಂಬಿ ಹರಿದ ಶಾಂತಿಸಾಗರ ಜಲಾಶಯ: ಈ ಬಾರಿಯ ಕುಂಭದ್ರೋಳ ಮಳೆಗೆ ಪ್ರಸ್ತುತ ವರ್ಷ ಎರಡು ಬಾರಿ ಶಾಂತಿಸಾಗರ ಜಲಾಶಯ ಭರ್ತಿಯಾಗಿದ್ದು ಸುತ್ತಮುತ್ತಲ ಗ್ರಾಮದ ರೈತಾಪಿ ವರ್ಗದ ಸಂಸಕ್ಕೆ ಪಾವರೇ ಇಲ್ಲದಂತಾಗಿದೆ. ಶನಿವಾರ ಬೆಳಿಗ್ಗೆ ಶಾಂತಿವನದ ಬ್ಯಾರೇಜ್‌ ವೀಕ್ಷಣೆ ವೇಳೆ ಶ್ರೀಗಳು ಆಗಮಿಸುತ್ತಿದ್ದಂತೆ ಶ್ವಾನವೊಂದು ಗುರುಗಳಿಗೆ ಪ್ರೀತಿ ತೋರಿತು. ಮನುಷ್ಯ ಮಾತ್ರವಲ್ಲ ಮುಗ್ದ ಪ್ರಾಣಿ ಪ್ರೀತಿಯ ಗೌರವ ವಂದನೆ ಸಲ್ಲಿಸುತ್ತೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಾಯಿತು.


ತ್ರಿವೇಣಿ ಸಂಗಮದಂತೆ ಕಾಣುವ ಬ್ಯಾರೇಜ್‌ನಿಂದ ನೀರು ಹೊರಹೋಗುತ್ತಿದ್ದು ಧುಮ್ಮಿಕ್ಕುವ ನೀರನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನ ಸಾಗರದಂತೆ ಹರಿದು ಬರುತ್ತಿದ್ದಾರೆ. ಮಠದ ಭಕ್ತರು ಶ್ರೀಗಳನ್ನು ಕಾಣಲು ಶಾಂತಿವನಕ್ಕೆ ಬಂದರೆ ಪ್ರಕೃತಿಯ ಸೊಬಗನ್ನು ಆನಂದಿಸುತ್ತಾರೆ. ಸಂಜೆಯ ವೇಳೆ ಹಕ್ಕಿಗಳ ಚಿಲಿಪಿಲಿ ನಾದ ನೊಂದ ಮನಗಳಿಗೆ ಮುದ ನೀಡುತ್ತದೆ. ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಭಕ್ತ ಗಣ ಎದೆಯೊಳಗಿನ ನೋವುಗಳಿಗೆ ಇಲ್ಲಿ ನೆಮ್ಮದಿಯೂ ಸಿಗುತ್ತದೆ.


ಶ್ರೀಗಳ ʼಗಂಗಾ ಕಲ್ಯಾಣʼಕ್ಕೆ ಭಕ್ತಗಣ ಸಂತಸ: ತರಳಬಾಳು ಜಗದ್ಗುರುಗಳು ಕಾಯಕ ಯೋಗಿಗಳು. ಬಸವಣ್ಣಂತೆ ಕಾಯಕವೇ ಕೈಲಾಸ ತತ್ವ ಶಿರಸಾ ಪಾಲಿಸಿಕೊಂಡು ಬರುತ್ತಿದ್ದಾರೆ. ಬರದ ನಾಡಾಗಿದ್ದ ಭರಮಸಾಗರ ರೈತಾಪಿ ವರ್ಗದ ಪಾಲಿಗೆ ತುಂಗಭದ್ರೆಯಿಂದ ನೀರು ತಂದು ಆಧುನಿಕ ಭಗೀರಥರಾಗಿದ್ದಾರೆ. ಸ್ವಾಮೀಜಿಗಳ ಈ ಮಹಾ ಕಾರ್ಯಕ್ಕೆ ಭಕ್ತಗಣ ಶಿರಸಾ ನಮಸ್ಕರಿಸುತ್ತಿದ್ದಾರೆ. ʼನಿತ್ಯಕಲ್ಯಾಣ ʼ… ʼಮತ್ತೆ ಕಲ್ಯಾಣಕ್ಕಿಂತʼ ಭಿನ್ನವಾಗಿ ಗಂಗಾ ಕಲ್ಯಾಣ ಕಲ್ಪಿಸಿದ ತರಳ ಬಾಳು ಜಗ್ದುಗುರಗಳಿಗೆ ನಮಿಸುತ್ತಿದ್ದಾರೆ.

ತರಳಬಾಳು ಶ್ರೀಗಳ ಕಾರ್ಯ ನಾವೆಂದೂ ಮರೆಯುವುದಿಲ್ಲ

ತರಳಬಾಳು ಶ್ರೀಗಳಿಗೆ ನೀರು ಅಂದರೆ ಜೀವಾಮೃತವಿದ್ದಂತೆ. ಆಧುನಿಕ ಭಗೀರಥರಾಗಿ ಜನರ ದಾಹವನ್ನು ತೀರಿಸಿ ರೈತರ ಬಾಳಿಗೆ ಬೆಳಕಾಗಿರುವ ತರಳಬಾಳು ಶ್ರೀಗಳಿಗೆ ನಮ್ಮ ರೈತಾಪಿ ವರ್ಗ ಋಣಿಯಾಗಿರುತ್ತೇವೆ. ಅವರ ಮಾರ್ಗದರ್ಶನದಲ್ಲಿ ಕೆರೆ ತುಂಬಿಸುವ ಕಾಯಕ ನಡೆಯುತ್ತಿದ್ದು ರೈತರ ಬವಣೆ ನೀಗುವ ಕಾಲ ಬಂದಿದೆ. ಶ್ರೀಗಳಿಗೆ ಹೃದಯಪೂರ್ವಕ ನಮನಗಳು-
ಚೌಲಿಹಳ್ಳಿ ಶಶಿಪಾಟೀಲ್‌, ಕೆರೆ ಸಮಿತಿ ಅಧ್ಯಕ್ಷ

Related Articles

Leave a Reply

Your email address will not be published. Required fields are marked *

Back to top button