ಧಾರವಾಡಸ್ಥಳೀಯ ಸುದ್ದಿ

ಪವರ್ ಸಿಟಿ ನ್ಯೂಸ್ ಆ್ಯಪ್ ಹಾಗೂ ಸ್ಟುಡಿಯೋ ಉದ್ಘಾಟನೆ ಮಾಡಿದ : ಶಾಸಕ ಅರವಿಂದ ಬೆಲ್ಲದ್ ಹಾಗೂ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮಿಜಿ !

ಧಾರವಾಡ

ಯುಗಾದಿ ಹಬ್ಬದ ಶುಭ ಸಂದರ್ಭದಲ್ಲಿ ಪವರ್ ಸಿಟಿ ನ್ಯೂಸ್ ಕನ್ನಡದ ಆ್ಯಪ್ ಹಾಗೂ ಸ್ಟುಡಿಯೋ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಧಾರವಾಡದ ರಂಗಾಯಣದಲ್ಲಿ ನಡೆದ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೈಲಹೊಂಗಲ ತಾಲ್ಲೂಕಿನ ಸುಕ್ಷೇತ್ರ ನಯಾನಗರದ ಶ್ರೀ ಶ್ರೀ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ವಹಿಸಿದ್ದರು.

ಇನ್ನೂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಜನಪ್ರೀಯ ಶಾಸಕರಾದ ಶ್ರೀ ಅರವಿಂದ ಬೆಲ್ಲದ ಆಗಮಿಸಿ, ಪವರ್ ಸಿಟಿ ನ್ಯೂಸ್ ನ ಆ್ಯಪ್ ಹಾಗೂ ಸ್ಟುಡಿಯೋ ಉದ್ಘಾಟನೆ ಮಾಡಿದ್ರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ, ಮಾಧ್ಯಮ ಕ್ಷೇತ್ರ ಬಹಳಷ್ಟು ಪರಿಣಾಮಕಾರಿಯಾಗಿದ್ದು, ಪವರ್ ಸಿಟಿ ನ್ಯೂಸ್ ಕನ್ನಡ ಒಳ್ಳೆಯ ಜನಪರ ಸುದ್ದಿಗಳನ್ನು ತೋರಿಸುವ ಮೂಲಕ ಜನಪ್ರೀಯವಾಗಿ ಹೆಸರು ಮಾಡಲಿ ಎಂದು ಶುಭ ಹಾರೈಸಿದ್ರು.

ಉದ್ಘಾಟಕರಾಗಿ ಆಗಮಿಸಿದ್ದ ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ, ಧಾರವಾಡ ಭಾಗದಿಂದ ಪ್ರಾರಂಭವಾಗಿರುವ ಈ ವಾಹಿನಿ ಒಳ್ಳೆಯ ಕೆಲಸಗಳನ್ನು ಮಾಡಲಿ, ಜನರ ಸಮಸ್ಯೆಗೆ ಸ್ಪಂದನೆ ಕೊಡುವಂತಹ ಕೆಲಸ ಮಾಡಲಿ ಎಂದರು.

ಖ್ಯಾತ ವಕೀಲರಾದ ಅರುಣ ಜೋಶಿ ಅವರು ಮಾತನಾಡಿ, ಉತ್ತರ ಕರ್ನಾಟಕದ ಭಾಗದಿಂದ ಈ ವಾಹಿನಿಯು ಒಳ್ಳೆಯ‌ ಹೆಸರನ್ನು ಮಾಡಲಿ, ಯುಗಾದಿಯ ಈ ಶುಭದಿನದಂದು ಆ್ಯಪ್ ಹಾಗೂ ಸ್ಟುಡಿಯೋ ಉದ್ಘಾಟನೆ ಮಾಡಿದ್ದು, ಸಂತೋಷದ ವಿಷಯ ಎಂದರು.

ಇದೆ ಸಂಧರ್ಭದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಚನೇಶ ಹೂಗಾರ, ಮಾತನಾಡಿ ಪವರ್ ಸಿಟಿ ನ್ಯೂಸ್ ತಂಡಕ್ಕೆ ಶುಭಕೊರಿದರು.

ಈ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಖ್ಯಾತ ಮನೋವೈದ್ಯರಾದ ಡಾ. ಆನಂದ ಪಾಂಡುರಂಗಿ, ಎಲುಬು ಕೀಲು ತಜ್ಞ ವೈದ್ಯರಾದ ಡಾ.ವಿಶ್ವನಾಥ ಪಾಟೀಲ್, ನಿವೃತ್ತ ಸೇನಾಧಿಕಾರಿ ಶ್ರೀ ಪರ್ವೇಜ ಹವಾಲ್ದಾರ, ಸಮಾಜ ಸೇವಕ ನಿಂಗಪ್ಪ ಕುಡವಕ್ಕಲಗೇರ, ಹಾಗೂ ಯುವ ಸಮಾಜ ಸೇವಕರಾದ ಮುತ್ತು ಹೆಬ್ಬಳ್ಳಿ ಯವರನ್ನು ಇದೆ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದೆ ವೇಳೆ ಡಾ ಇಸಬೆಲ್ಲಾ ದಾಸ್ ಜೆವಿಯರ್ ಕಾರ್ಯಕ್ರಮದ ಕುರಿತು ಮಾತನಾಡಿ ಪವರ್ ಸಿಟಿ ನ್ಯೂಸ್ ಕನ್ನಡದ ಸಂಪಾದಕರಾದ ರಾಜು ದಖನಿಯವರ ಹಾಗೂ ವಾಸಿಂ ರವರು ಕುರಿತು ಮಾತನಾಡಿ ಸುಭ ಹಾರೈಸಿದರು. ಕಾರ್ಯಕ್ರಮ ನೀರೂಪಿಸಿದ ದರ್ಶಿನಿ ಅರೂನ್, ರಾಜೇಂದ್ರ ಕುಮಾರ್ ಮಠ, ಮತ್ತು ಕಾರ್ತೀಕ್‌ ಸಿಂಧೆ, ಪ್ರವೀಣ್ ಪೋಳ್,ಸಂಜೀವ ಹಿರೇಮಠ, ಸಂತೋಷ ಹೆಬ್ಬಳ್ಳಿ ಹಾಗೂ ಧಾರವಾಢ ಭಾಗದ ಪತ್ರಕರ್ತ ಮಿತ್ರರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.

Related Articles

Leave a Reply

Your email address will not be published. Required fields are marked *

Back to top button