ರಾಜಕೀಯಸ್ಥಳೀಯ ಸುದ್ದಿಹುಬ್ಬಳ್ಳಿ

ಕಾಮಗಾರಿ ವಿಳಂಬಕ್ಕೆ ಅವಕಾಶ ಕೊಡಬೇಡಿ ಶಾಸಕ : ಜಗದೀಶ್ ಶೆಟ್ಟರ್ !

ರಸ್ತೆಗಳ ಅಭಿವೃದ್ದಿಗೆ ಮೊದಲ ಆದ್ಯತೆ.!

( ಕರ್ನಾಟಕ ವಾರ್ತೆ) ಏ.3 :
ಹುಬ್ಬಳ್ಳಿ: ನೀರು ಸರಬರಾಜು ಮಾಡುವ ಲೈನ್ ಗಳ ಕಾಮಗಾರಿಯನ್ನು ಮುಕ್ತಾಯಗೊಳಿಸಬೇಕು. ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ‌ಮುಗಿಸಬೇಕು. ಯಾವುದೋ ಕಾರಣ ನೀಡಿ  ಕಾಮಗಾರಿಗಳನ್ನು ಮುಂದೆ ಹಾಕಬಾರದು. ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ‌ಹೇಳಿದರು.

ಹುಬ್ಬಳ್ಳಿ ನಗರದ ವಿವಿಧ ವಾರ್ಡಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

*ವಾರ್ಡ್ ನಂ.46* ರ 
ಕೊಂಚಗೇರಿ ಓಣಿಯಲ್ಲಿ ಪಾಲಿಕೆ ಅನುದಾನ
ರೂ. 16 ಲಕ್ಷ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ವಿವೇಕಾನಂದ ಕಾಲೋನಿಯ ಚಿನ್ಮಯ ಶಾಲೆ ಹತ್ತಿರದಲ್ಲಿರುವ 3 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೇ ಸಮುದಾಯ ಭವನವನ್ನು ನಿರ್ಮಿಸಲಾಗುವುದು. ಇದರಿಂದ ಮಹಿಳಾ ಮಂಡಳ ಹಾಗೂ ಪ್ರೋಬೋಸ್ ಕ್ಲಬ್ ನ ಸದಸ್ಯರಿಗೆ ಅನುಕೂಲವಾಗಲಿದೆ.  ಉದ್ಯಾನಕ್ಕೆ ವಾಕಿಂಗ್ ಪಾತ್ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ರೂ. 42 ಲಕ್ಷದಲ್ಲಿ ಅಶೋಕ ನಗರದಲ್ಲಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

*ವಾರ್ಡ್ ನಂ.39ರ*

ಪಾಟೀಲ್ ಲೇಔಟ್ ನಲ್ಲಿ ರೂ. 53 ಲಕ್ಷದಲ್ಲಿ ಉದ್ಯಾನ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಇಲ್ಲಿನ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು.   ನೀರಿನ ಸಮಸ್ಯೆಯನ್ನು ಕೂಡಲೇ ಬಗೆ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗುವುದು. ಬೀದಿ ದೀಪ್ ಸರಿಪಡಿಸಿ,  ಹೈಮಾಸ್ಕ ದೀಪಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

*ದೇವಸ್ಥಾನ ಜೀರ್ನೊದ್ಧಾರಕ್ಕೆ ರೂ. 1.75 ಲಕ್ಷದ ಚೆಕ್ ವಿತರಣೆ*

ವಾರ್ಡ್ ನಂ.39 ರಲ್ಲಿರುವ ಶನಿ ದೇವರ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ್ದ ರೂ. 1.75 ಲಕ್ಷದ  ಚೆಕ್ ನ್ನು ಆರಾಧನಾ ಸಮಿತಿಯಿಂದ ಲಕ್ಷ್ಮಿ ನರಸಿಂಹ ದೇವಸ್ಥಾನದ ಸಮಿತಿಯವರಿಗೆ ನೀಡಲಾಯಿತು. ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳ ಅಭಿವೃದ್ಧಿಗೆ ಹಣವನ್ನು ನೀಡುತ್ತದೆ. ದೇವಸ್ಥಾನದ ಸಮಿತಿಯವರು ಮನವಿ ಮಾಡಿದರೆ ಹೆಚ್ಚಿನ ಹಣ ಬಿಡುಗಡೆ ಮಾಡಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಗದೀಶ್ ಶೆಟ್ಟರ್ ಭರವಸೆ ನೀಡಿದರು.

*ನೃಪ ತುಂಗ ಬೆಟ್ಟದಲ್ಲಿಓಪನ್ ಜಿಮ್‌ ಉದ್ಘಾಟನೆ*

ನೃಪತುಂಗ ಬೆಟ್ಟದಲ್ಲಿ ರೂ.
54 ಲಕ್ಷ ವೆಚ್ಚದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಓಪನ್  ಜಿಮ್ ನಿರ್ಮಾಣ ಮಾಡಲಾಗಿದೆ. ಇದರಿಂದ ಮಹಿಳೆಯರು ಹಾಗೂ ಪುರುಷರು ಪ್ರತ್ಯೇಕವಾಗಿ ವ್ಯಾಯಾಮ ಮಾಡಲು ಅನುಕೂಲವಾಗಲಿದೆ.

ಅಲ್ಲದೇ ಮುಂಜಾನೆ ಹಾಗೂ  ಸಂಜೆ  ವೇಳೆಯಲ್ಲಿ ವ್ಯಾಯಮಾ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಮನಸ್ಸಿಗೆ ಮುದ ನೀಡುವ ತಾಣವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ
ಹು,ಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ,
ಪಾಲಿಕೆ ಸದಸ್ಯರಾದ
ವೀರಣ್ಣ ಸವಡಿ, ಸೀಮಾ ಮೊಗಲಿಶೆಟ್ಟರ್, ಪ್ರಮೋದ ಮುನವಳ್ಳಿ, ಸಿದ್ದು ಮೊಗಲಿಶೆಟ್ಟರ್,  ಮೋಹನ ಬಡಿಗೇರ, ವಲಯ ಅರಣ್ಯ ಅಧಿಕಾರಿ
ಶ್ರೀಧರ ತೆಗ್ಗಿನಮನಿ, ಡಿವೈಆರ್ ಏಫ್ ಒ ಪಿ.ಎಂ.ಕರಗುಪ್ಪಿ ಸೇರಿದಂತೆ ಹಲವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button