ಧಾರವಾಡರಾಜಕೀಯರಾಜ್ಯರಾಷ್ರ್ಟೀಯಸ್ಥಳೀಯ ಸುದ್ದಿಹುಬ್ಬಳ್ಳಿ

“ಬಿಜೆಪಿ” ಗೆ ದಲಿತರ ಧ್ವನಿಯಾಗಲು ತಾಕತ್ತಿಲ್ಲವೇ ?

ಗುರುನಾಥ ಉಳ್ಳಿಕಾಶಿ ಅವರಿಂದ ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆಗಳು

ಹುಬ್ಬಳ್ಳಿ

“ದಲಿತರ ಬಗ್ಗೆ ಅಪಾರ ಅಭಿಮಾನವಿರುವ,ಹೋರಾಟಕ್ಕೆ ಮುಂದಾಗಿರುವ “ಬಿಜೆಪಿ” ಗರಿಗೆ ಈ ವಿಷಯಗಳ ಬಗ್ಗೆ ದಲಿತರ ಧ್ವನಿಯಾಗಲು -ಹೋರಾಟಕ್ಕಿಳಿಯಲು ತಾಕತ್ತಿಲ್ಲವೇ ?

ಕಳೆದ 07 ವರ್ಷಗಳಲ್ಲಿ ರಾಜ್ಯ ಹಾಗೂ ದೇಶದಲ್ಲಿ “ಬಿಜೆಪಿ”ಯ ಅಪ್ರಬುದ್ದ ನಾಯಕರನೇಕರು ದಲಿತರ ಕುರಿತು -ನಮ್ಮ ದೇಶದ ಹೆಮ್ಮೆಯ ಸಂವಿಧಾನದ ಕುರಿತು, ಮತ್ತು ಪರಿಶಿಷ್ಟ ಜಾತಿಯ ಕುರಿತು,

ದಲಿತ ದೌರ್ಜನ್ಯ-ದಲಿತರ ಯುವತಿ.ಬಾಲಕಿಯರ ಅತ್ಯಾಚಾರ ಹತ್ಯೆಯ ಕುರಿತು ಕ್ಷುಲ್ಲಕವಾಗಿ ತಮ್ಮ ಚಿಲ್ಲರೇ ನಾಲಿಗೆ ಹರಿಬಿಟ್ಟು ಮಾತನಾಡಿದ -ನಿಂದಿಸಿದ-ದೌರ್ಜನ್ಯ ನಡೆಸಿದ ಅನೇಕ ಹೀನ ಕ್ರತ್ಯಗಳು ನಿರಂತರ ವಾಗಿ ನಡೆಯುತ್ತಿದ್ದರೂ ತಮ್ಮೆಲ್ಲ ಇಂದ್ರೀಯಗಳನ್ನು ಮುಚ್ಚಿಕುಳಿತವರು ಇಂದು ಒಮ್ಮಿಂದೊಮ್ಮಿಗೆ ದಲಿತಾಭಿಮಾನ ಪ್ರದರ್ಶಿಸುತ್ತಿರುವದಾದರೂ ಏಕೇ ?
“ಹೊಟ್ಟೆಪಾಡು” ವಿಷಯ ಕ್ಕಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯವೇ.
ಹಾಗಾದರೆ ನಿಮ್ಮಲ್ಲಿನ ದಲಿತಾಭಿಮಾನ ಕ್ಕೆ ಈ ದ್ರಷ್ಯ-ಕ್ರತ್ಯಗಳು ದೌರ್ಜನ್ಯಗಳು-ನಿಂದನೆಗಳು ಕಾಣುತ್ತಿಲ್ಲವೇ

ಮನುವಾದಿಗಳು ನಮ್ಮ ಹೆಮ್ಮೆಯ ಸಂವಿಧಾನದ ವಿರುದ್ಧ ಹೇಳಿಕೆಗಳನ್ನ ನೀಡಿದರೂ ಕೇಳಿ ಸುಮ್ಮನೆ ಇರುವ ನೀವು ಈ ವಿಷಯಗಳನ್ನ ಸಮರ್ಥಿಸುವವರಲ್ಲೊಬ್ಬರೇ ಇಲ್ಲ ನೈಜ ದಲಿತರ ಹಿತರಕ್ಷಕರ ಮುಗಿಸಲು ಷಡ್ಯಂತ್ರನಿರತರಾದವರೇ
ಎಂಬುದನ್ನ ಈ ವಿಷಯಗಳಿಗೆ ಉತ್ತರ ನೀಡುವ ಮೂಲಕ ಆತ್ಮಶೋಧನೆಗೆ ನಿಲ್ಲುವುದೊಳಿತಲ್ಲವೇ
1)ಸಂವಿಧಾನವನ್ನು ಬದಲಾಯಿಸಲೆಂದೇ ನಾವು ಅಧಿಕಾರಕ್ಕೆ ಬಂದಿರೋದು ಬದಲಾಯಿಸೇ ತೀರುತ್ತೇವೆ.
ಮತ್ತು
2)ಹೋರಾಟಗಾರರು ಮತ್ತು ಚಳುವಳಿ ಮಾಡುವವರಿಗೆ ಅಪ್ಪ ಅಮ್ಮ ಯಾರೆಂದು ಗೊತ್ತಿಲ್ಲ ಬೀದಿ ನಾಯಿಗಳು ! ! ! ಅಂತ *ಸಂಸದ ,ಮಾಜಿಯಾದ ಮಂತ್ರಿ
ಅನಂತಕುಮಾರ ಹೆಗಡೆ ಬಿಜೆಪಿ ಹಿರಿಯ ಮುಖಂಡ ಹಾಗೂ MP
(ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ದಲಿತರು ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುವ ಸಂಧರ್ಬದಲ್ಲಿ)

3)ಡಾ:ಬಿ.ಆರ.ಅಂಬೇಡ್ಕರ್ ಅವರು ಮಾನವ /ಮನುಷ್ಯತ್ವ/ಮಹಿಳಾ ವಿರೋಧಿ “ಮನುಸ್ಮೃತಿ”ಯನ್ನು ಸುಟ್ಟಾಕಿದರ ವಿರುದ್ದವಾಗಿ ಮನುವಾದಿಗಳು ‘ಸಂವಿಧಾನ”ವನ್ನು ಜಂತರ್ ಮಂತರ್ ನಲ್ಲಿ ಸುಟ್ಟಾಕಿದರಲ್ಲ ಅವಾಗ ನೀವು ಏಕೆ ಪ್ರತಿಭಟಿಸಲಿಲ್ಲ.

4)ಸಾವರ್ಕರ್ ದೇಶದ್ರೋಹಿಯಾದರೆ ಅಂಬೇಡ್ಕರ್ ದೇಶದ್ರೋಹಿ ಯಾಕಲ್ಲ ? ಎಂದು ಬಿಜೆಪಿಯ ಕುನ್ನಿಯೊಂದು ಬೊಗಳಿತಲ್ಲ
(ತೇಜಸ್ವಿಸೂರ್ಯ MP )
ಅದಕ್ಕೆ ನಿಮ್ಮ ಸ್ವಾಭಿಮಾನದ ಇಂದ್ರೀಯ ಎಚ್ಚರಿಸಲಿಲ್ಲವೇ*
?
5)ನಾವು (ಬಿಜೆಪಿ) ಅಧಿಕಾರದಲ್ಲಿದ್ದಿದ್ದರೆ ಸಂವಿಧಾನ ಕರಡನ್ನು ವ ಇಂದಿನ ಸಂವಿಧಾನವನ್ನು ಒಪ್ಪುತ್ತಿರಲಿಲ್ಲ.
*ವೆಂದು ಮಾಜಿ ಮಂತ್ರಿ C,TEE,
ಸಿ.ಟಿ.ರವಿ ಮಾಜಿ ಸಚಿವ ಹಾಗೂ Bjp ರಾಷ್ಟ್ರೀಯ ಪ್ರ.ಕಾರ್ಯದರ್ಶಿ
ತನ್ನ ನಾಲಿಗೆ ಹರಿಬಿಟ್ಟಾಗ ನಿಮ್ಮ ದಲಿತಾಭಿಮಾನ -ರಾಷ್ಟ್ರಾಭಿಮಾನ ಮಲಗಿದ್ದೇಕೆ.

6)ಇಂಗ್ಲೀಷರ (ಬ್ರಿಟಿಷರ)ಗುಲಾಮಗಿರಿ ಮಾಡಲು ಸಿದ್ದನಿದ್ದೇನೆ ಆದರೆ ದಲಿತರಿಗೆ, ಹಿಂದುಳಿದ, ಅಲ್ಪಸಂಖ್ಯಾತರಿಗೆ, ಸ್ವಾತಂತ್ರ್ಯ ಕೊಡುವುದಾದರೆ ಆ ಸ್ವಾತಂತ್ರ್ಯ ನನಗೆ ಬೇಕಾಗಿಲ್ಲ ಎಂದು ಗೋಳ್ವಾಳ್ಕರ್ RSS ನ ಸಂಘ ಸಂಸ್ಥಾಪಕ ಹೇಳಿದ್ದನ್ನ ಅರಿತು ನೀವಲ್ಲಿರುವುದು ಕಂಡವರಿಗೆ ನಿಮ್ಮ ದಲಿತಾಭಿಮಾನದ ಪ್ರಶ್ನೆ ಬರುವದಿಲ್ಲವೇ ?

7)ಸಂವಿಧಾನದ ಕರಡನ್ನು ರಚಿಸಿದ್ದು ಬ್ರಾಹ್ಮಣರೆ ಹೊರತು ಅಂಬೇಡ್ಕರ್ ಅಲ್ಲ ಅಂತ ಗೌರವಾನ್ವಿತ ಸಂವಿಧಾನಿಕ ಹುದ್ದೆ ಅಲಂಕರಿಸಿದ
ಗುಜರಾತ್ ಸ್ಪೀಕರೊಬ್ಬ ತನ್ನ ನಾಲಿಗೆ ಹರಿಬಿಟ್ಟಾಗ ನಿಮ್ಮಲ್ಲಿನ ದಲಿತಾಭಿಮಾನ ಎಲ್ಲತ್ತು.

8)ಅಂಬೇಡ್ಕರ್ ಸಂವಿಧಾನವನ್ನು ನಾನು ಒಪ್ಪುವುದೆ ಇಲ್ಲ ಎಂದು ನಿಮ್ಮದೇ ಪಕ್ಷದ ಆಕಳು
ಗೋ ಮಧುಸೂಧನ್ (BJP ಹಿರಿಯ ಮುಖಂಡ)
ಹೇಳಿದ್ದಕ್ಕೆ ನಿಮ್ಮ ಸ್ವಾಭಿಮಾನಕ್ಕೆ ಗೌರವ ಸಿಕ್ಕಿತಾ ಆಗ ನೀವೆಲ್ಲದ್ದಿರಿ.

9)ಭಾರತದ ಸಂವಿಧಾನ ಬದಲಾಗಬೇಕು ಎಂದೂ ಮತಾಂಧ
ದಿ..ಪೇಜಾವರ ಶ್ರೀ ಹೇಳಿದಾಗ ನಿಮ್ಮ ದಲಿತಾಭಿಮಾನ ಮೌನವಹಿಸಿದ್ದೇಕೆ.

10)ಧರ್ಮ ಶಾಸ್ತ್ರವೇ ನಮ್ಮ *ಸಂವಿಧಾನ ಎಂದು
ಎಸ್.ಎಲ್.ಭೈರಪ್ಪ ನಿಮ್ಮಸಂಘ ಪರಿವಾರದ ಆಸ್ಥಾನದ ಕವಿ ಲೇಖಕನೊಬ್ಬ ರಘಳೆ ಮಾಡಿದಾಗ ನಿಮ್ಮ ಧ್ವನಿ ಅಡಗಿದ್ದೇಕೆ?

11) ಈಗ ದಲಿತವಿರೋಧಿ,ಸಂವಿಧಾನ ವಿರೋಧಿ,”ಮನುವಾದಿ ಮೋಹನ್ ಭಾಗವತ್” ನ ಭಾವಚಿತ್ರವಿರುವ “ಭಾರತದ ನೂತನ ಸಂವಿಧಾನ” ಅಂತ ಪುಸ್ತಕ ಹೊರತಂದಿದ್ದು ಮನುಸ್ಮ್ರತಿಯ ಮರುಹುಟ್ಟು ನಿಮಗೆ ಹೆಮ್ಮೆ ತರುವ ದಲಿತಾಭಿಮಾನವೇ ?

12) ಘನ ರಾಷ್ಟ್ರಪತಿ ರಾಮನಾಥ ಕೋವಿಂದರನ್ನು ದಲಿತ ಎಂಬ ಕಾರಣಕ್ಕಾಗಿ ಪೂರಿ ಜಗನ್ನಾಥ ದೇವಾಲಯದ ಒಳಗೆ ಬಿಟ್ಟಿಲ್ಲ.
ಸದರಿ ರಾಷ್ಟ್ರಪತಿಗಳಿಗೆ “ಸಹಪಂಕ್ತಿ ಭೋಜನ”ವನ್ನು ನಿರಾಕರಿಸಿದ ಪೇಜಾವರ ಶ್ರೀಯ ನಡೆಗೆ ನಿಮ್ಮ ದಲಿತಶಭಿಮಾನವೇನೇನ್ನುತ್ತದೇ ಭಕ್ತರೇ ?

13) ಮೋದಿ ಮತ್ತೆ ಪ್ರಧಾನಿಯಾದರೆ ಸಂವಿಧಾನ ಬದಲಾವಣೆ ಅಂತ ಬೊಬ್ಬೆ ಹೊಡೆಯುತ್ತಿರುವ
ಬಸವರಾಜ ಪಾಟೀಲ್ ಯತ್ನಾಳ್ (MLA) ವಿರುದ್ದ ನಿಮ್ಮ ಹೋರಾಟವೇಕಿಲ್ಲ ?

14) ನಮ್ಮ ಚಪ್ಪಲಿ ಶುಚಿಗೊಳಿಸುತ್ತಿದ್ದವರು ಸಂವಿಧಾನದ ನೆರವಿನಿಂದ ನಮ್ಮನ್ನೇ ಆಳುತ್ತಿದ್ದಾರೆ *ಎಂದು
ಮಧು ಮಿಶ್ರಾ ಎಂಬ “ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ” ನಾಯಿ(ಕಿ) ಮಾತನಾಡಿದ್ದು ನಿಮ್ಮ ದಲಿತಾಭಿಮಾನದ ಕಿವಿಗೆ ಬೀಳಲಿಲ್ಲವೇ?

15)ಉತ್ತರ ಪ್ರದೇಶದಲ್ಲಿ , ದೇಶದಲ್ಲಿ, ರಾಜ್ಯದಲ್ಲಿ,ದಿನಕ್ಕೊಂದು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ದೌರ್ಜನ್ಯ ಹಿಂಸೆ ನಡೆಯುತ್ತಿದ್ದ ರೂ ಅದರ ಬಗ್ಗೆ ಯಾಕೆಂದು ಚಕಾರವೆತ್ತದ ನೀವು ಇಂದು ನಿಮ್ಮ ರಾಜಕೀಯ ಜೀವನಕ್ಕಾಗಿ ಎಚ್ಚರಗೊಂಡಿದ್ದು ದಲಿತಾಭಿಮಾನವೇ?

16)ಕೊಪ್ಪಳದಲ್ಲಿ ಪುಟ್ಟ ಕಂದಮ್ಮ ದೇವಾಲಯ ಪ್ರವೇಶಿದ್ದಕ್ಕೆ ಮೈಲಿಗೆಯಾದ ದೇವರು ದೇವಾಲಯ ಸ್ವಚ್ಛತೆಗೆ 25000ಸಾವಿರ ದಂಡ ಹಾಕಿದ ಹಿಂದೂಗಳ ವರ್ತನೆ ವಿರೋಧಿಸಿ ದಲಿತಾಭಿಮಾನದಿಂದ ನೀವೇಕೆ ಬೀದಿಗಳಿದು ಹೋರಾಡಲಿಲ್ಲ.

ನಿಮ್ಮವರ ಸಮಸ್ಯ ಒಂದಾ-ಎರಡಾ
ಹೀಗೆ ಬಿಜೆಪಿಗರ ಕುರಿತು ಅವರ ದಲಿತವಿರೋಧಿ ನಡೆಗಳ ಕುರಿತು ವಿವರ ಮಾಡುತ್ತ ಹೋದರೆ ಪುಟಗಳಲ್ಲ ದುಷ್ಟರ ಗ್ರಂಥಗಳೇ ಆಗುತ್ತವೆ .
ಇವತ್ತೂ ಟೀ ಮಾರುವವನೇ ದೇಶದ ಪ್ರಧಾನಿಯಾಗುವಂತಹ ಹೆಮ್ಮೆಯ ಸಂವಿಧಾನ ರಚಿಸಿದ್ದು ದಲಿತರ ಹೆಮ್ಮೆಯಾಗಿರುವ ಡಾ:ಬಿ.‍ಆರ.ಅಂಬೇಡ್ಕರ ರವರು ಸಹ ದಲಿತರಾಗಿದ್ದು ನಮ್ಮ ಸ್ವಾಭಿಮಾನಕ್ಕೆ ಕಾರಣ.
ನಾವು ನೀವು ಉಸಿರಾಡುವುದಿದ್ದರೆ ಅಂಬೇಡ್ಕರ್ ಬರೆದ ಸಂವಿಧಾನದಿಂದ ಮಾತ್ರ. ಆ ಉಸಿರನ್ನೆ ಕಿತ್ತುಕೊಂಡರೆ ನೀವು ನಾವು ಉಳಿಯಲು ಸಾಧ್ಯವೆ ?

ಈ ರಾಜಕೀಯ ನಾಟಕಕ್ಕೆ ದಲಿತಾಭಿಮಾನ ಬೆರೆಸುವುದು ಸರಿಯಲ್ಲ ನೀವಿರುವುದು ಗಾಜಿನ ಮನೆ ಅಲ್ಲಿಂದ ಕಲ್ಲೆಸೆಯುವುದು ನಿಮಗೆ ನೀವೆ ಕೇಡು ಬಗೆದುಕೊಂಡಂತೆ.
ಎಂದು ಗುರುನಾಥ ಉಳ್ಳಿಕಾಶಿ,ಫಕ್ಜಣ್ಣ ದೊಡ್ಡಮನಿ,ರೇವಣಸಿದ್ದಪ್ಪ ಹೊಸಮನಿ,ಇಝಾಝ್ಹ್ಮದ ಉಪ್ಪಿನ,ಲೋಹಿತ ಗಾಮನಗಟ್ಟಿ,ರೈಸ ಖೋಜೆ, ಹಾಗೂ ಪ್ರಮುಖರು ಸಮತಾ ಸೇನಾ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ (ರಿ)ಈ ಮಾಧ್ಯಮ /ಪತ್ರಿಕಾ ಪ್ರಕಟಣೆ ಮುಖೇನ ಪ್ರಶ್ನಿಸಿದ್ದಾರೆ

ನಿಮ್ಮ ನಡೆಯ ಮೇಲಿನ್ನು ನಮ್ಮ ಹೋರಾಟ.

ವಂದನೆಗಳೊಂದಿಗೆ

ತಮ್ಮ:ಗುರುನಾಥ -ಉಳ್ಳಿಕಾಶಿ
ಸಮತಾಸೇನಾ/*ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ(ರಿ)

9448564586*

Related Articles

Leave a Reply

Your email address will not be published. Required fields are marked *

Back to top button