Festival Ganesh chaturthiPolitical news
ಹುಬ್ಬಳ್ಳಿಯ ಈದ್ಗಾ ಗಣಪತಿಗೆ ಅದ್ಧೂರಿ ವಿದಾಯ!

POWERCITY NEWS: hubballi
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರು ರಾಣಿ ಚೆನ್ನಮ್ಮ (ಈದ್ಗಾ)ಮೈದಾನದ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನೆರವೇರಿದ್ದು, ಅದ್ದೂರಿ ಮೆರವಣಿಗೆ ಜೊತೆಗೆ ಶಾಂತಿಯುತವಾಗಿ ನಡೆದಿದೆ.
ಹೌದು.. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ಪ್ರತಿಷ್ಟಾಪನೆಗೊಂಡಿದ್ದ ಗಣಪತಿ, ಇಂದು ಸಕಲ ವಾದ್ಯ ವೈಭವದೊಂದಿಗೆ ವಿಸರ್ಜನೆಗೊಂಡಿದ್ದು, ಸಾಕಷ್ಟು ದಿನಗಳ ಹೋರಾಟ ಸುಖಾಂತ್ಯಗೊಂಡಿದೆ.
ಶಾಸಕ ಬಸನಗೌಡ ಯತ್ನಾಳ ಪಾಟೀಲ ವಿದ್ಯುಕ್ತವಾಗಿ ಚಾಲನೆ ನೀಡಿದ ಬೆನ್ನಲ್ಲೇ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಗಣಪತಿ ಮೆರವಣಿಗೆ ಮಾಡುವ ಮೂಲಕ ವಿಶೇಷವಾಗಿ ಪೂಜೆ ಸಲ್ಲಿಸಿ ಹುಬ್ಬಳ್ಳಿಯ ಗ್ಲಾಸ್ ಹೌಸ್ ಹತ್ತಿರವಿರುವ ಬಾವಿಯಲ್ಲಿ ವಿಸರ್ಜನೆ ಮಾಡಿದ್ದಾರೆ.
